ಕರ್ನಾಟಕದ ರಾಜ್ಯದಾದ್ಯಂತ ಡೆಂಗ್ಯೂ (Dengue) ದಾಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯ ನೂರಾರು ಮಂದಿಗೆ ಈ ಸೋಂಕು ತಗುಲುತ್ತಿದೆ. ಹಲವು ಕಡೆ ಡೆಂಗ್ಯೂ ನಿಂದ ಸಾವುಗಳು ಸಹ ಸಂಭವಿಸುತ್ತವೆ. ಡೆಂಗ್ಯೂ ನಿಯಂತ್ರಣದ ಬಗ್ಗೆ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳೂ ಸಹ ಕೇಳಿಬಂದಿತ್ತು.. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ (Health Department Guidelines) ಡೆಂಗ್ಯೂ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳುಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಡೆಂಗ್ಯೂ (Dengue) ಜ್ವರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health Department Guidelines) ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಕೆಳಕಂಡ ಅಂಶಗಳನ್ನು ಮಾರ್ಗಸೂಚಿಯಲ್ಲಿ ತಿಳಿಸಿದೆ.
- (Dengue) ಹಾಟ್ ಸ್ಪಾಟ್ಗಳಲ್ಲಿ ಬಿಪಿಎಲ್ (BPL) ಕುಟುಂಬಗಳಿಗೆ ಸೊಳ್ಳೆನಿರೋಧಕ ಬೇವಿನ ಎಣ್ಣೆಯನ್ನ ಕೈಕಾಲುಗಳಿಗೆ ಹಚ್ಚಲು ನೀಡಬೇಕು.
- ಡೆಂಗ್ಯೂ (Dengue) ಹಾಟ್ ಸ್ಪಾಟ್ ಗುರುತಿಸಬೇಕು ಅದರ ಮಾಹಿತಿಯನ್ನ ಕಂಟ್ರೋಲ್ ರೂಂಗೆ ನೀಡಬೇಕು.
- ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 5 ಬೆಡ್ಗಳನ್ನ ಮೀಸಲಿಡಬೇಕು.
- ಡೆಂಗ್ಯೂ ಗುಣಲಕ್ಷಣಗಳು ಬಂದಾಗಿನ 14 ದಿನಗಳ ಕಾಲ ರೋಗಿಯ ಮಾಹಿತಿಯನ್ನ ವಾರ್ ರೂಂಗೆ ತಿಳಿಸಬೇಕು.
- ಕಂಟ್ರೋಲ್ ರೂಮ್ ಅಥವಾ ವಾರ್ ರೂಂ ಸ್ಥಾಪನೆ. ಪಾಲಿಕೆ, ಜಿಲ್ಲಾಮಟ್ಟದಲ್ಲಿ ಟಿಎಸಿ (TAC) ಸಭೆ ಮಾಡುವಂತೆ ಸೂಚಿಸಲಾಗಿದೆ.
- ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಗೊಮ್ಮೆ ಮನೆ ಮನೆ ಸರ್ವೆ ಮಾಡಬೇಕು.
- ಪ್ರತಿ ಶುಕ್ರವಾರ ಫೀಲ್ಡ್ ವರ್ಕ್ ಮಾಡಿ ಲಾರ್ವ ನಾಶ ಪಡಿಸಬೇಕು.
- ಹಾಟ್ ಸ್ಪಾಟ್ಗಳಲ್ಲಿ ಲಾರ್ವ ನಾಶವನ್ನ ತೀವ್ರಗತಿಗೊಳಿಸಬೇಕು.
- ಫೀವರ್ ಕ್ಲಿನಿಕ್ಗಳನ್ನ ತುರ್ತಾಗಿ ತೆರೆಯಬೇಕು.
- ಟೆಸ್ಟಿಂಗ್ ಕಿಟ್, ಔಷಧ, ವೈಟ್ ಪ್ಲೇಟ್ ಲೇಸ್ಟ್ಗಳು ಇದಿಯಾ ಎಂದು ಖಚಿತ ಪಡಿಸಿ ಮಾಹಿತಿ ನೀಡಬೇಕು.
- ಡೆಂಗ್ಯೂ (Dengue) ನಿರ್ವಹಣೆ ಸಂಬಂಧ ಶಿಷ್ಟಾಚಾರನ್ನು ಕಡ್ಡಾಯವಾಗಿ ಎಲ್ಲಾ ವೈದ್ಯರು ಪಾಲಿಸುವುದು.
- ಮೆಡಿಕಲ್ ಕಾಲೇಜುಗಳ family adoption programme ಅನ್ನು ಡೆಂಗ್ಯೂ ಸಮಸ್ಯಾತ್ಮಕ ಗ್ರಾಮ, ವಾರ್ಡ್ಗಳಿಗೆ ವಿಸ್ತರಿಸುವುದು.
- ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ, ಡೆಂಗ್ಯೂ (Dengue) ಪ್ರಕರಣಗಳ ನಿಯಂತ್ರಣಕಾಗಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ.