ಶ್ವಾಸಕೋಸ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅಪರ್ಣಾ (Kannada Anchor Aparna) ಇಹ ಲೋಕ ತ್ಯೆಜಿಸಿದ್ದಾರೆ. ಸುಮಾರು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಮೃತ ಅಪರ್ಣಾ ರವರು ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಅಪಾರ ಕನ್ನಡಿಗರ ಮನ ಗೆದ್ದಿದ್ದರು. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದರು. ಆಕಾಶವಾಣಿ ನಿರೂಪಕಿಯಾಗಿಯೂ ಸಹ ಕೆಲಸ ಮಾಡಿದ್ದರು. ಸುಮಾರು ಮೂರು ತಿಂಗಳ ಹಿಂದೆ ಅಪರ್ಣಾ ರವರು ಕ್ಯಾನ್ಸರ್ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೇ ಜು.11 ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅಪರ್ಣಾ ಕೆಲವು ದಿನಗಳ ಹಿಂದೆಯಷ್ಟೆ ಮನೆಯಲ್ಲಿ ಆಯತಪ್ಪಿ ಬಿದ್ದು ಗಾಯಮಾಡಿಕೊಂಡಿದ್ದರು. ಆದ್ದರಿಮದ ಆಕೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇನ್ನೂ ಸಿನೆಮಾ, ಟಿವಿ, ಸಾಹಿತ್ಯ ಲೋಕ ಸೇರಿದಂತೆ ಅವರ ಅಭಿಮಾನಿಗಳು, ರಾಜಕಾರಣಿಗಳು ಅಪರ್ಣಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಂಬನಿ ಮಿಡಿದಿದ್ದಾರೆ.
ಇನ್ನೂ ಅರ್ಪಣ 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ ಮಸಣದ ಹೂವು ಚಿತ್ರದಿಂದ ಕೆರಿಯರ್ ಆರಂಭಿಸಿದ್ದರು. ಬಳಿಕ ಇನ್ಸ್ ಪೆಕ್ಟರ್ ವಿಕ್ರಂ ಸೇರಿದಂತೆ ಹಲವು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಅಪರ್ಣಾ ರವರಿಗೆ ಸಿನೆಮಾಗಳಿಗಿಂತ ಕಿರುತರೆಯಲ್ಲಿ ತುಂಬಾನೆ ಖ್ಯಾತಿ ಬಂತು. ಸ್ವಪ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದರು. 1998 ರಲ್ಲಿ ನಡೆದಂತಹ ದೀಪಾವಳಿ ಕಾರ್ಯಕ್ರಮವೊಂದನ್ನು ಸುಮಾರು 8 ಗಂಟೆಗಳ ಕಾಲ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲೂ ಭಾಗಿಯಾಗಿದ್ದರು. 2015ರಲ್ಲಿ ಸೃಜನ್ ಲೋಕೇಶ್ ರವರ ನೇತೃತ್ವದಲ್ಲಿ ಶುರುವಾದ ಮಜಾ ಟಾಕೀಸ್ ನಲ್ಲಿ ಒನ್ ಅಂದ್ ಓನ್ಲಿ ವರು ಎಂದೇ ಫೇಮಸ್ ಆದರು.