HomeInternationalViral Video: ಈ ಪಾಕಿಸ್ತಾನಿ ಮುದುಕನ ದುರಾಸೆ ಕೇಳಿದ್ರೆ ನೀವು ತೂ ಅಂತಾ ಉಗಿತೀರಾ, ವೈರಲ್...

Viral Video: ಈ ಪಾಕಿಸ್ತಾನಿ ಮುದುಕನ ದುರಾಸೆ ಕೇಳಿದ್ರೆ ನೀವು ತೂ ಅಂತಾ ಉಗಿತೀರಾ, ವೈರಲ್ ಆದ ವಿಡಿಯೋ.….!

ಸದ್ಯ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಒಂದು ಹೊತ್ತಿನ ಊಟಕ್ಕೂ ಸಹ ಪರದಾಡುವಂತಿದೆ. ದಿನನಿತ್ಯ ಬಳಕೆಯ ವಸ್ತುಗಳು ಗಗನಕ್ಕೇರಿದೆ. ಆಗಾಗ ಭಾರತದ ವಿರುದ್ದ ಕಾಲು ಕೆರೆಯುತ್ತಾ ಬರುತ್ತಿರುತ್ತದೆ, ಅದೇ ರೀತಿ ಭಾರತ ಸಹ ಸರಿಯಾಗಿಯೇ ಬುದ್ದಿ ಕಲಿಸುತ್ತಿದೆ. ಇನ್ನೂ ಪಾಕಿಸ್ತಾನಿ ಮುದುಕನೋರ್ವನ ದುರಾಸೆಯ ಬಗ್ಗೆ ನೀವು ಕೇಳಿದ್ರೆ ಶಾಕ್ ಆಗುತ್ತೀರಾ ಜೊತೆಗೆ ತೂ ಎಂತಲೂ ಉಗಿಯುತ್ತೀರಾ, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.

ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ (Viral Video)  ಪಾಕಿಸ್ತಾನಿ ಮುದುಕನೋರ್ವ ತನ್ನ ದುರಾಸೆಯನ್ನು ಹೊರಹಾಕಿದ್ದಾನೆ. ಒಂದು ವೇಳೆ ಭಾರತದ ವಿರುದ್ದ ಯುದ್ದವೇನಾದರೇ ಆದರೆ ನಾನು 10 ಹಿಂದೂಗಳ ಹತ್ಯೆ ಮಾಡಿ, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರನ್ನು ಕಿಡ್ನಾಪ್ ಮಾಡುತ್ತೇನೆ ಎಂದಿದ್ದಾನೆ. ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಪಾಕ್ ಭಯೋತ್ಪಾದಕರ ಕೃತ್ಯ ಹೆಚ್ಚಾಗುತ್ತಿದೆ. ಸೇನೆ ಹಾಗೂ ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಈ ನಡುವೆ ಪಾಕಿಸ್ತಾನಿ ಮುದುಕ ದುರಾಸೆಯ ವಿಡಿಯೋ (Viral Video) ವಿರುದ್ದ ಭಾರತೀಯರು ಆಕ್ರೋಷ ಹೊರಹಾಕುತ್ತಿದ್ದಾರೆ.

https://x.com/fansofpakuntold/status/1811307180571894180

ವಿಡಿಯೋದಲ್ಲಿ (Viral Video)  ಈ ಮುದುಕ ಭಾರತದ ಕುರಿತು ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಈ ಸಮಯದಲ್ಲಿ ಆತ ಒಂದು ವೇಳೆ ಭಾರತದ ವಿರುದ್ದ ಯುದ್ದವಾದರೇ ನಾನು 10 ಹಿಂದೂಗಳನ್ನು ಹತ್ಯೆ ಮಾಡುತ್ತೇನೆ ಎಂದಿದ್ದಾನೆ. ಈ ಸಮಯದಲ್ಲಿ ನಿರೂಪಕ ಅವರು ಸಹ ಮನುಷ್ಯರು, ಈ ರೀತಿಯ ಆಲೋಚನೆ ಸರಿಯೇ ಎಂದು ಕೇಳಿದ್ದಾನೆ. ಆದರೆ ತಾತ ಮುಂದುವರೆದು ಯುದ್ದ ಆರಂಭಗೊಂಡರೇ ಮೊದಲು ನಾನು ಭಾರತಕ್ಕೆ ತೆರಳಿ ಮಾಧುರಿ ದೀಕ್ಷಿತ್ ರನ್ನು ಅಪರಿಸಿಕೊಂಡು ಬರುತ್ತೇನೆ ಎಂದಿದ್ದಾನೆ. ಆ ಮುದುಕ ಈ ಮಾತುಗಳನ್ನು ಕೇಳುತ್ತಿದ್ದಂತೆ ನಿರೂಪಕನಿಗೆ ಅಚ್ಚರಿಯಾಗಿದೆ. ನಿಮ್ಮ ವಯಸ್ಸು ಹಾಗೂ ನೀವು ಹೇಳಿದಂತಹ ಮಾತುಗಳು ಏನು ಅನ್ನೋದನ್ನು ಒಂದು ಬಾರಿ ನೋಡಿ ಎಂದು ನಿರೂಪಕ ಹೇಳಿದ್ದಾನೆ.

ಇನ್ನೂ ಈ ವಿಡಿಯೋ (Viral Video)  ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಪಾಕಿಸ್ತಾನಿ ಜನರಿಂದ ಇದನ್ನಲ್ಲದೇ ಬೇರೆನು ನಿರೀಕ್ಷೆ ಮಾಡಲು ಸಾಧ್ಯ, ಭೂಮಿ ಇರೋವರೆಗೂ ಪಾಕಿಸ್ತಾನ ಬದಲಾಗಲ್ಲ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular