Crime News: ಅವಳಿ ಮಕ್ಕಳ ತಂದೆ ನಾನಲ್ಲ ಎಂದ ಪತಿ, ನವಜಾತ ಶಿಶುಗಳ ಕತ್ತು ಸೀಳಿ ಕೊಲೆ ಮಾಡಿದ ತಾಯಿ….!

ತಾಯಿಯೊಬ್ಬಳು ತನ್ನ ಅವಳಿ ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ ಘಟನೆಯೊಂದು ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ನಡೆದಿದೆ. ಅವಳಿ ಮಕ್ಕಳ ತಂದೆ ನಾನಲ್ಲ ಎಂದು ಆಕೆಯ ಪತಿ ಹೇಳಿದ್ದಕ್ಕೆ ತನ್ನ ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಕೊಲೆ (Crime news) ಮಾಡಿದ್ದಾಳೆ. ತನ್ನ ಪತಿ ಈ ಅವಳಿ ಮಕ್ಕಳನ್ನು ತನ್ನ ಮಕ್ಕಳೆಂದು ಒಪ್ಪಿಕೊಳ್ಳಲು ನಿರಾಕರಿಸಿದ ಕಾರಣದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

Twins murderd 1

ಜಮ್ಮು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್ ನಲ್ಲಿ ಈ ಹೃದಯವಿದ್ರಾವಕ (Crime news) ಘಟನೆ ನಡೆದಿದೆ. ಈ ಕುರಿತು ಎನ್.ಡಿ.ಟಿ.ವಿ ವರದಿ ಮಾಡಿದ್ದು, ಅದರ ಪ್ರಕಾರ ಕಳೆದ ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿ ಸುಮಾರು ದಿನಗಳ ಬಳಿಕ ಮನೆಗೆ ಬಂದಿದ್ದರು. ಆತ ಬಂದ ಕೆಲವೇ ದಿನಗಳಲ್ಲಿ ಆತನ ಪತ್ನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆಕೆ ಅಕ್ರಮ ಸಂಬಂಧದಿಂದ ಅವಳಿ ಮಕ್ಕಳನ್ನು ಪಡೆದಿದ್ದಾಳೆ ಎಂದು ಪೊಲೀಸರ ಬಳಿ ಹೇಳಿದ್ದನಂತೆ.

Twins murderd 0

ಇನ್ನೂ ಈ ಸುದ್ದಿ ಪತ್ನಿಗೆ ತಿಳಿಯುತ್ತಿದ್ದಂತೆ ಆಕೆ ತನ್ನ ಅವಳಿ ಶಿಶುಗಳನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾಳೆ. ಆದರೆ ಸ್ಥಳೀಯರು ಪತಿಯೇ ಇಬ್ಬರೂ ಮಕ್ಕಳನ್ನು ಕೊಲೆ (Crime news) ಮಾಡಿದ್ದಾರೆ ಎಂದು ಅನುಮಾನಿಸಿದ್ದರು. ಆದರೆ ಈ ಸಂಬಂಧ ಪೊಲೀಸರು ವಿಚಾರಣೆ ಕೈಗೊಂಡಾಗ ಪತ್ನಿ ತಾನು ಮಾಡಿದ ಕೊಲೆಯ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಇನ್ನೂ ಕ್ರೂರಿ ತಾಯಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Scroll to Top