Bengaluru – ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಅದೆಷ್ಟೋ ಮಂದಿಗೆ ಆಶ್ರಯ ನೀಡಿದೆ, ಉದ್ಯೋಗ ಕಲ್ಪಿಸಿದೆ. ದೇಶದ ನಾನಾ ಮೂಲೆಗಳಿಂದ ಬರುವವರಿಗೆ ಬದುಕು ಕಟ್ಟಿಕೊಳ್ಳಲು ಬೆಂಗಳೂರು ಸದಾ ಸ್ವಾಗತಿಸಿದೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಹೊರ ರಾಜ್ಯದವರ (Out of State) ಅಟ್ಟಹಾಸ ಹೆಚ್ಚಾಗುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸುಖಾಸುಮ್ಮನೆ ಕನ್ನಡಿಗರ ಮೇಲೆ ದರ್ಪ ತೋರುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಆಟೋ ಚಾಲಕರೊಬ್ಬರ ಮೇಲೆ ಪರಭಾಷಿಕ ಯುವತಿಯೊಬ್ಬಳು (Girl Attack) ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
Bengaluru – ಬೆಳ್ಳಂದೂರಿನಲ್ಲಿ ನಡೆದ ಆಘಾತಕಾರಿ ಘಟನೆ: ವೈರಲ್ ವಿಡಿಯೋ!
ಬೆಂಗಳೂರಿನ ಬೆಳ್ಳಂದೂರು ಸರ್ಕಲ್‌ನಲ್ಲಿ (Bellanduru Circle) ಸಂಜೆ 4:30ರ ಸುಮಾರಿಗೆ ಈ ಆಘಾತಕಾರಿ ಘಟನೆ ನಡೆದಿದೆ. ಆಟೋ ಚಾಲಕರೊಬ್ಬರ ಮೇಲೆ ಯುವತಿಯೊಬ್ಬಳು ಚಪ್ಪಲಿಯಿಂದ (Slipper) ಹಲ್ಲೆ ಮಾಡಿ, ಅತಿರೇಕದ ವರ್ತನೆ ತೋರಿದ್ದಾಳೆ. ಈ ಸಂಪೂರ್ಣ ದೃಶ್ಯವನ್ನು ಆಟೋ ಚಾಲಕನೇ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
Bengaluru – ಘಟನೆಗೆ ಕಾರಣವೇನು?
ಪ್ರಾಥಮಿಕ ಮಾಹಿತಿ ಪ್ರಕಾರ, ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ವಾಹನಕ್ಕೆ ಆಟೋ ಸ್ವಲ್ಪ ತಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕುಪಿತಗೊಂಡ ಯುವತಿ, ಆಟೋ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ. ಮಾತಿಗೆ ಮಾತು ಬೆಳೆದು, ಯುವತಿ ತನ್ನ ಚಪ್ಪಲಿ ತೆಗೆದುಕೊಂಡು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾಳೆ. ನಡು ರಸ್ತೆಯಲ್ಲಿ ನಡೆದ ಈ ಘಟನೆಯಿಂದ ಸ್ಥಳದಲ್ಲಿ ಜನ ಜಮಾಯಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸ್ಥಳೀಯರಿಂದ ಖಂಡನೆ, ಪೊಲೀಸರ ಕ್ರಮ
ಘಟನೆಗೆ ಆಟೋ ಅಲ್ಪ ಪ್ರಮಾಣದಲ್ಲಿ ತಾಗಿದ್ದೇ ಕಾರಣ ಎಂದು ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ, ಯುವತಿಯ ದುಂಡಾವರ್ತನೆ ಮತ್ತು ಚಪ್ಪಲಿಯಿಂದ ಹೊಡೆದ ವರ್ತನೆಯನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
Read this also : ಪ್ರಿಯಕರನಿಗೆ ಪ್ರೇಯಸಿಯಿಂದ “ಜಾನ್ ಸೆ ಮಾರ್ ದೂಂಗಿ” ಎಚ್ಚರಿಕೆ! ಇಂದೋರ್ ರಸ್ತೆಯಲ್ಲಿ ನಡೆದ ಹೈಡ್ರಾಮಾ ವೈರಲ್ ವಿಡಿಯೋ…!
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬೆಳ್ಳಂದೂರು ಪೊಲೀಸರು (Bellanduru Police) ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆಟೋ ಚಾಲಕ ಮತ್ತು ಯುವತಿ ಇಬ್ಬರನ್ನೂ ವಿಚಾರಣೆಗಾಗಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.