HomeNationalViral : ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳ ಅತಿರೇಕ, ಬಸ್ ನಲ್ಲೇ ರೊಮ್ಯಾನ್ಸ್ ಗಿಳಿದ್ರು, ನೆಟ್ಟಿಗರಿಂದ ತೀವ್ರ...

Viral : ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳ ಅತಿರೇಕ, ಬಸ್ ನಲ್ಲೇ ರೊಮ್ಯಾನ್ಸ್ ಗಿಳಿದ್ರು, ನೆಟ್ಟಿಗರಿಂದ ತೀವ್ರ ಆಕ್ರೋಶ….!

Viral – ಪ್ರೀತಿ ಅಂದ್ಮೇಲೆ ಜಗತ್ತೇ ಮರೆತು ಹೋಗುತ್ತೆ ಅಂತಾರೆ. ಆದ್ರೆ ಕೆಲ ಪ್ರೇಮಿಗಳು ಲೋಕದ ಪರಿವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೇ ಮಿತಿ ಮೀರಿ ವರ್ತಿಸ್ತಾರೆ. ಈಗ ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದೆ, ಸಾರ್ವಜನಿಕ ಬಸ್ಸಿನಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು, ಚುಂಬಿಸುತ್ತಾ ರೊಮ್ಯಾನ್ಸ್ ಮಾಡಿರೋ ಈ ವಿಡಿಯೋ ನೋಡಿ ಜನ ಗರಂ ಆಗಿದ್ದಾರೆ.

students romance in bus 1

Viral – ಪ್ರೇಮಿಗಳ ವರ್ತನೆಗೆ ಛೀಮಾರಿ

ಬೈಕ್‌ನಲ್ಲಿ ಕುಳಿತು ಕಿಸ್ಸಿಂಗ್, ಮೆಟ್ರೋ, ರೈಲಿನಲ್ಲಿ ಹಗ್ಗಿಂಗ್, ಕಿಸ್ಸಿಂಗ್ ಅಂತ ಹುಚ್ಚಾಟ ಆಡುವ ಪ್ರೇಮಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗ್ತಾನೆ ಇರುತ್ತವೆ. ಆದರೆ ಇತ್ತೀಚೆಗೆ ಬಸ್ಸಿನಲ್ಲಿ ನಡೆದ ಒಂದು ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ನಮ್ಮ ಅಕ್ಕಪಕ್ಕದಲ್ಲಿ ಜನ ಇದ್ದಾರೆ ಅನ್ನೋ ಪರಿಜ್ಞಾನವೇ ಇಲ್ಲದೆ, ಪ್ರೇಮಿಗಳ ಜೋಡಿಯೊಂದು ಬಸ್ಸಿನಲ್ಲೇ ತಮ್ಮ ಪ್ರೇಮ ಪ್ರದರ್ಶನ ಮಾಡಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ಪ್ರೇಮಿಗಳ ಈ ಅತಿರೇಕದ ವರ್ತನೆಗೆ ಜನ ತೀವ್ರ ಛೀಮಾರಿ ಹಾಕಿದ್ದಾರೆ.

Read this also : ಪ್ರಿಯಕರನಿಗೆ ಪ್ರೇಯಸಿಯಿಂದ “ಜಾನ್ ಸೆ ಮಾರ್ ದೂಂಗಿ” ಎಚ್ಚರಿಕೆ! ಇಂದೋರ್ ರಸ್ತೆಯಲ್ಲಿ ನಡೆದ ಹೈಡ್ರಾಮಾ ವೈರಲ್ ವಿಡಿಯೋ…!

Viral – ಬಸ್ಸಿನ ಹಿಂಬದಿ ಸೀಟಿನಲ್ಲಿ ಪ್ರೇಮಿಗಳ “ಅತಿರೇಕದ” ರೊಮ್ಯಾನ್ಸ್!

ಎಲ್ಲಿ ಹೇಗೆ ವರ್ತಿಸಬೇಕು ಅನ್ನೋ ಕನಿಷ್ಠ ಪರಿಜ್ಞಾನವೂ ಇಲ್ಲದೆ ಈ ಪ್ರೇಮಿಗಳಿಬ್ಬರು ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತು ಹಗ್ಗಿಂಗ್, ಕಿಸ್ಸಿಂಗ್ ಅಂತ ರೋಮ್ಯಾನ್ಸ್ ಶುರು ಮಾಡಿದ್ದಾರೆ. ಇವರ ಈ “ಹುಚ್ಚಾಟ” ವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ್ರೆ, ಬಸ್ಸಿನ ಹಿಂಬದಿ ಸೀಟಿನಲ್ಲಿ ಜೋಡಿಹಕ್ಕಿಯೊಂದು ಯಾವುದೇ ಮುಜುಗರವಿಲ್ಲದೆ ಪ್ರೇಮ ಪ್ರದರ್ಶನ ಮಾಡ್ತಾ ಕುಳಿತಿರೋದು ಕಾಣಿಸುತ್ತೆ. ಲೋಕದ ಪರಿಜ್ಞಾನವೇ ಇಲ್ಲದೆ ಈ ಹುಡುಗ-ಹುಡುಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸಿದ್ದು, ಇದು ಈಗ ಇಂಟರ್‌ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ: Click Here 

Viral – ವಿಡಿಯೋ ವೈರಲ್: ನೆಟ್ಟಿಗರ ಪ್ರತಿಕ್ರಿಯೆಗಳು!

ಈ ವಿಡಿಯೋ ‘yours.jaans’ ಅನ್ನೋ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೇವಲ ನಾಲ್ಕು ದಿನಗಳ ಹಿಂದೆ ಅಪ್‌ಲೋಡ್ ಆದ ಈ ವಿಡಿಯೋ 18 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಸಾವಿರಾರು ಕಮೆಂಟ್‌ಗಳು ಹರಿದುಬಂದಿವೆ.

students romance in bus 2

  • ಒಬ್ಬ ಬಳಕೆದಾರರು, “ಅವರೇನೋ ತಪ್ಪು ಮಾಡಿದ್ದಾರೆ, ಆದ್ರೆ ಅದನ್ನ ರೆಕಾರ್ಡ್ ಮಾಡಿ ಯಾಕೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡ್ಬೇಕಿತ್ತು?” ಅಂತ ಪ್ರಶ್ನಿಸಿದ್ದಾರೆ.
  • ಇನ್ನೊಬ್ಬ ಬಳಕೆದಾರರು, “ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವವರಿಗೆ ಕಠಿಣ ಶಿಕ್ಷೆ ನೀಡಬೇಕು” ಅಂತ ಬರೆದುಕೊಂಡಿದ್ದಾರೆ.
  • ಮತ್ತೊಬ್ಬರು, “ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ!” ಅಂತ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular