ಇತ್ತೀಚಿಗೆ ಹೃದಯಾಘಾತದಿಂದ ಇದ್ದಕ್ಕಿಂದ್ದಂತೆ ಅನೇಕರು ಮೃತಡುತ್ತಿರುವ ಘಟನೆಗಳ ಬಗ್ಗೆ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿವೆ. ಸಾವು ಯಾರಿಗೆ, ಯಾವಾಗ, ಎಲ್ಲಿ, ಹೇಗೆ ಸಂಭವಿಸುತ್ತದೆ ಎಂಬುದನ್ನು ಊಹೆ ಮಾಡಲು ಸಹ ಸಾಧ್ಯವಿಲ್ಲ. ಆರೋಗ್ಯವಾಗಿರುವಂತಹವರೂ ಸಹ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಹೃದಯಾಘಾತಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ನವದೆಹಲಿಯಲ್ಲಿ ಈ ದುರಂತ ಘಟನೆ ನಡೆದಿದೆ ಎನ್ನಲಾಗಿದೆ.
ದೆಹಲಿಯ ಶಹದಾರ ಜಿಲ್ಲೆಯ ಜಿಲ್ಮಿಲ್ ವಿಶ್ವಕರ್ಮ ನಗರದಲ್ಲಿ ಶ್ರೀರಾಮಲೀಲಾ ಕಮಿಟಿ ನಾಟಕವೊಂದನ್ನು ಆಯೋಜಿಸಿತ್ತು. ಇದೇ ನಾಟಕದಲ್ಲಿ ಶ್ರೀರಾಮ ಪಾತ್ರ ಪೋಷಣೆ ಮಾಡುತ್ತಿದ್ದ ಕಲಾವಿದ ಹೃದಯಾಘಾತ ಸಂಭವಿಸಿ ಮೃತಪಟ್ಟ ದುರ್ಘಟನೆ ನಡೆದಿದೆ. ಈ ಶ್ರೀರಾಮನ ನಾಟಕವನ್ನು ಸಾವಿರಾರು ಸಂಖ್ಯೆಯ ಪ್ರೇಕ್ಷಕರು ನೋಡುತ್ತಿದ್ದರು. ಈ ವೇಳೆ ಶ್ರೀರಾಮನ ವೇಷಧಾರಿ ಅಭಿನಯಿಸುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ. ನೋವು ಸಹಿಸಲಾಗದ ಪಾತ್ರಧಾರಿ ಹಿಂದೆ ಸರಿದಿದ್ದಾರೆ. ರಾಮನ ಪಾತ್ರಧಾರಿ ಕೊನೆಯ ಬಾರಿಗೆ ಅಭಿನಯಿಸಿದ ಈ ಕರುಣಾಜನಕ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿ ನೋಡಿ: https://x.com/madhubanivichar/status/1842823097755300138
ಶ್ರೀರಾಮನ ನಾಟಕದಲ್ಲಿ ರಾಮನ ಪಾತ್ರ ಪೋಷಣೆ ಮಾಡುತ್ತಿದ್ದ ಕಲಾವಿದರ ಹೆಸರು ಶುಶಿಲ್ ಕೌಶಿಕ್ ಎಂದು ಗುರ್ತಿಸಲಾಗಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಶುಶಿಲ್ ಕೌಶಿಕ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರೂ ಅವರಿಗೆ ನಟನೆಯ ಮೇಲೆ ತುಂಬಾ ಆಸಕ್ತಿಯಿತ್ತು. ರಾಮನ ಪಾತ್ರದಲ್ಲಿ ನಟಿಸುತ್ತಿರುವಾಗಲೇ ಶುಶಿಲ್ ರವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅದಾಗಲೇ ಶುಶಿಲ್ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಸದ್ಯ ರಾಮನ ಪಾತ್ರಧಾರಿಯಾಗಿದ್ದ ಶುಶಿಲ್ ಕೊನೆಯ ಕ್ಷಣಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ಈ ದೃಶ್ಯವನ್ನು ನೋಡಿ ಕಂಬನಿ ಮಿಡಿಯುತ್ತಾ ಕಾಮೆಂಟ್ ಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.