ಭಾರತದ ಹಿರಿಯ ಹಾಗೂ ಶ್ರೀಮಂತ ಉದ್ಯಮಿ, ಸಾಮಾಜಿಕ ಕಾರ್ಯ, ದಾನ, ದೇಣಿಗೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿಶೇಷ ವ್ಯಕ್ತಿತ್ವದ ರತನ್ ಟಾಟಾ (Ratan Tata) ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂತು. ಕೆಲವೊಂದು ವರದಿಗಳ ಪ್ರಕಾರ ಇಂದು ಮಧ್ಯರಾತ್ರಿ 12:30ರಿಂದ 1 ಗಂಟೆ ಆಸುಪಾಸಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ಇದೀಗ ರತನ್ ಟಾಟಾ (Ratan Tata) ರವರೇ ಖುದ್ದಾಗಿ ತಮ್ಮ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ (86) (Ratan Tata) ಬಿಪಿಯಲ್ಲಿ ಗಣನೀಯವಾಗಿ ಕುಸಿದ ಹಿನ್ನೆಲೆ ಮುಂಬೈನ (Mumbai) ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ರತನ್ ಟಾಟಾ (Ratan Tata) ರವರು ತಮ್ಮ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ನಾನು ಆರಾಮಾಗಿದ್ದೇನೆ. ವಯಸೋಸಹಜ ಕಾರಣಕ್ಕೆ ವೈದ್ಯಕೀಯ ತಪಾಸಣೆ ಮಾಡಿಸುತ್ತಿದ್ದೇನೆ ಅಷ್ಟೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟಾಟಾ (Ratan Tata) ರವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಎಂಬ ಸುದ್ದಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ರತನ್ ಟಾಟಾ (Ratan Tata) ರವರು ಖುದ್ದಾಗಿ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತಮ್ಮ ಆರೋಗ್ಯದ ಅಪ್ಡೇಟ್ ನೀಡಿದ್ದಾರೆ.
ರತನ್ ಟಾಟಾ ರವರ ಪೋಸ್ಟ್ ಇಲ್ಲಿದೆ ನೋಡಿ: https://www.instagram.com/p/DA0FeyJPZQ6/?hl=en
ಅವರು ಹಂಚಿಕೊಂಡಿರುವ ಪೋಸ್ಟ್ ನಲ್ಲಿರುವಂತೆ ನನ್ನ ಆರೋಗ್ಯದ ಬಗ್ಗೆ ವದಂತಿಗಳು ಹರಿದಾಡುತ್ತಿರುವುದು ನನಗೆ ಗೊತ್ತಾಗಿದೆ. (Ratan Tata) ಇದು ತಪ್ಪು ಮಾಹಿತಿ. ನನ್ನ ವಯೋಸಹಜ ವೈದ್ಯಕೀಯ ಸಮಸ್ಯೆಗಳ ಕಾರಣದಿಂದ ವೈದ್ಯಕೀಯ ಚಿಕಿತ್ಸೆ ಮಾಡಿಸುತ್ತಿದ್ದೇನೆ. ಆತಂಕ ಪಡುವಂತಹದ್ದು ಏನು ಆಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ಸುಳ್ಳು ಮಾಹಿತಿ ಹರಡದಂತೆ ಎಚ್ಚರಿಕೆ ವಹಿಸಬೇಕೆಂದು ಜನರು ಹಾಗೂ ಮಾದ್ಯಮಗಳಲ್ಲಿ ಕೋರುತ್ತೇನೆ ಎಂದು ರತನ್ ಟಾಟಾ (Ratan Tata) ಪೋಸ್ಟ್ ಮಾಡಿದ್ದಾರೆ. ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ಟಾಟಾ ಗ್ರೂಪ್ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ರತನ್ ಟಾಟಾ, ಟಾಟಾ ಚಾರೀಟೇಬಲ್ ಟ್ರಸ್ಟ್ ಮುಖ್ಯಸ್ಥರಾಗಿದ್ದಾರೆ. ರತನ್ ಟಾಟಾ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು (Ratan Tata) ತೊಡಗಿಸಿಕೊಂಡಿದ್ದಾರೆ. ದೇಶದ ವಿಪತ್ತು, ತುರ್ತು ಸಂದರ್ಭದಲ್ಲಿ ರತನ್ ಟಾಟಾ ಅತೀ ಹೆಚ್ಚು ದೇಣಿಗೆ ನೀಡಿದ್ದಾರೆ.