ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇದೀಗ ಡಾಕ್ಟರ್ ಆಗಿದ್ದಾಳೆ. ಇಂದಿನ ಕಾಲದಲ್ಲೂ ಸಹ ಅನೇಕರು ಬಡತನದ ಕಾರಣದಿಂದ ಓದಬೇಕೆಂಬ ಮನಸ್ಸಿದ್ದರೂ, (Success Story) ಓದಲು ಆಗದೇ ತಮ್ಮ ಆಸೆಗಳನ್ನು ಬದಿಗಿಟ್ಟು ಜೀವನ ಸಾಗಿಸುತ್ತಿರುತ್ತಾರೆ. ಆದರೆ ಕೆಲವರು ಬಡತನವನ್ನು ಮೆಟ್ಟಿ ನಿಂತು ಸಾಧನೆ ಮಾಡುತ್ತಾರೆ. ಅಂತಹ ಅನೇಕ ಉದಾಹರಣೆಗಳನ್ನೂ ಸಹ ನೋಡಿರುತ್ತೇವೆ. (Success Story) ಇದೀಗ ಮತ್ತೊಂದು ಉದಾಹರಣೆ ಇಲ್ಲಿದೆ. ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯೊಬ್ಬಳ ಕಥೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.
ಯುವತಿಯೊಬ್ಬಳು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, (Success Story)ಕಸದ ತೊಟ್ಟಿಯಲ್ಲಿ ತಿಂದು ಬಿಸಾಕಿದಂತಹ ಆಹಾರ ತಿಂದು ಬದುಕುತ್ತಿದ್ದ ಬಾಲಕಿಯೊಬ್ಬಳು ಇಂದು (Success Story) ಎಂ.ಬಿ.ಬಿ.ಎಸ್ ಪದವಿ ಪಡೆದು ಡಾಕ್ಟರ್ ಆಗಿದ್ದಾಳೆ. ಹಿಮಾಚಲ ಪ್ರದೇಶದ ಟಿಬೆಟಿನ್ ನಿರಾಶ್ರಿತರ ಶಿಬಿರದ ವಿದ್ಯಾರ್ಥಿನಿ ಪಿಂಕಿ ಹರ್ಯಾನ್ ಎಂಬ (Success Story) ಯುವತಿ ಇದೀಗ ದೇಶದ ಗಮನ ಸೆಳೆದಿದ್ದಾಳೆ. ಜೊತೆಗೆ ಆಕೆಯ ಸ್ಟೋರಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಟಿಬೆಟ್ ಸನ್ಯಾಸಿಯೊಬ್ಬರ ಸಹಕಾರದಿಂದ ಆಕೆ ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾಳೆ.
ಹಿಮಾಚಲ ಪ್ರದೇಶದ ಕಾಂಗ್ರಾ ಎಂಬ ಜಿಲ್ಲೆಯ ಮೆಕ್ಲಿಯೋಡ್ ಗಂಜ್ ವ್ಯಾಪ್ತಿಯ ಬಡ ಕುಟುಂಬದಲ್ಲಿ ಜನಿಸಿದ ಪಿಂಕಿ ಹರ್ಯಾನ್ ಕಡು ಬಡತನ ಕುಟುಂಬದಲ್ಲಿ ಜನಿಸಿದರು. (Success Story) ಬಡತನದಲ್ಲಿ ಹುಟ್ಟಿದ ಈಕೆ ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು. ಈ ಪುಟ್ಟ ಬಾಲಕಿಯನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಮೂಲದ (Success Story) ದತ್ತಿ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ಟಿಬೆಟ್ ಸನ್ಯಾಸಿ ಲೋಬ್ಸೆಂಗ್ ಜಮ್ಯಾಂಗ್ ಬಾಲಕಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗಿದ್ದರು. ಈ ಕುರಿತು ಬಡ ಮಗುವನ್ನು ನಿರಾಶ್ರಿತರ ಶಿಬಿರಕ್ಕೆ ಸೇರಿಸುವಂತೆ ಲೋಬ್ಸೆಂಗ್ ಜಮ್ಯಾಂಗ್ ಆಕೆಯ ಪೋಷಕರಲ್ಲಿ ಕೇಳಿದ್ದರು. ಆದರೆ ಆಕೆಯ (Success Story) ತಂದೆ ಕಾಶ್ಮೀರಿ ಲಾಲ್ ಮನವೊಲಿಸುವುದು ಸುಲಭವಾಗಿರಲಿಲ್ಲ.
Viral Post here : Click here
ಆದರೆ ಲೋಬ್ಸೆಂಗ್ ಜಮ್ಯಾಂಗ್ ನಿರಂತರವಾಗಿ ಪ್ರಯತ್ನ ಮಾಡಿ (Success Story) ಕೊನೆಗೆ ಆಕೆಗೆ ಶಿಕ್ಷಣ ಕೊಡಿಸಲು ಬಾಲಕಿಯ ತಂದೆ ಕಾಶ್ಮೀರಿ ಲಾಲ್ ಒಪ್ಪಿಕೊಂಡರು. ಬಳಿಕ ಬಾಲಕಿಯಾಗಿದ್ದ ಪಿಂಕಿಗೆ ಗೆ ವಿದ್ಯಾಭ್ಯಾಸ ಕೊಡಿಸಲು ಲೋಬ್ಸೆಂಗ್ ಮುಂದಾಗುತ್ತಾರೆ. ಓದುವುದರಲ್ಲಿ ಮುಂದಿದ್ದಳು. (Success Story) ತನ್ನ ಪಿಯುಸಿ ಮುಗಿಸಿದ ಪಿಂಕಿ, NEET ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆದು ಒಳ್ಳೆಯ ಸಾಧನೆ ಮಾಡಿದ್ದಳು. 2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದು ಇದೀಗ MBBS ಪದವಿ ಪೂರ್ಣಗೊಳಿಸಿ ವೈದ್ಯರಾಗಿದ್ದಾಳೆ. (Success Story) ಸದ್ಯ ಆಕೆಯ ಸಾಧನೆಯ ಕಥೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.