Gruhalakshmi Scheme – ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆಯಾನ ಕುಟುಂಬದ ಯಜಮಾನಿಗೆ 2 ಸಾವಿರ ಹಣ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಗೃಹಲಕ್ಷ್ಮೀ ಹಣದಿಂದ ಅನೇಕ ಮಹಿಳೆಯರು ಟಿ.ವಿ, ಫ್ರಿಡ್ಜ್, ಮಗನಿಗೆ ಬೈಕ್ ಹೀಗೆ ಖರೀದಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಇದೀಗ ಗ್ರಾ.ಪಂ ಸದಸ್ಯೆಯಾದ ಮಹಿಳೆಯೊಬ್ಬರು (Gruhalakshmi Scheme) ಗೃಹಲಕ್ಷ್ಮೀ ಹಣ ಹಾಗೂ ಗ್ರಾ.ಪಂ. ಸದಸ್ಯೆಗೆ ನೀಡುವ ವೇತನವನ್ನು ಒಟ್ಟುಗೂಡಿಸಿ ತಮ್ಮ ಗ್ರಾಮದ ಮಕ್ಕಳಿಗಾಗಿ ಗ್ರಂಥಾಲಯ ನಿರ್ಮಾಣ ಮಾಡಿ ಆಧುನಿಕ ಸಾವಿತ್ರಿಬಾಯಿ ಪುಲೆ ಎನ್ನಿಸಿಕೊಂಡಿದ್ದಾರೆ.
ಗ್ರಂಥಾಲಯ ಕಟ್ಟಿಸಿಕೊಟ್ಟ ಮಹಿಳೆ ಬೆಳಗಾವಿ ಜಿಲ್ಲೆಯ ರಾಯಭಾಗ (Gruhalakshmi Scheme) ತಾಲೂಕಿನ ಮಂಟೂರ ಗ್ರಾಮ ಪಂಚಾಯತಿ ಸದಸ್ಯೆ ಮಲ್ಲವ್ವ ಭೀಮಪ್ಪ ಮೇಟಿ. ಈ ಹಿಂದೆ ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್ ಖರೀದಿ ಮಾಡಿರುವುದು. ಅಜ್ಜಿಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಸೊಸೆಗೆ ಅತ್ತೆಯೊಬ್ಬರು ಫ್ಯಾನ್ಸಿ ಅಂಗಡಿ ಹಾಕಿಕೊಟ್ಟಿರೋದು, ಬಡ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ತನ್ನ ಗಂಡನ ಕಣ್ಣಿನ ಆಪರೇಷನ್ (Gruhalakshmi Scheme) ಮಾಡಿಸಿದ್ದು ಸುದ್ದಿಯಾಗಿತ್ತು. ಬೆಳಗಾವಿಯ ಮಹಿಳೆಯೊಬ್ಬರು ಮಗನಿಗೆ ಬೈಕ್ ಖರೀದಿಸಲು ಮುಂಗಡ ಹಣ ಪಾವತಿಸಿದ್ದು ಗಮನಸೆಳೆದಿತ್ತು. ಇದರ ನಡುವೆ ಗ್ರಾ.ಪಂ ಸದಸ್ಯೆ ಮಲ್ಲವ್ವ ಭೀಮಪ್ಪ (Gruhalakshmi Scheme) ಮೇಟಿಯವರು ಗ್ರಂಥಾಲಯ ನಿರ್ಮಾಣ ಮಾಡಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ರಾ.ಪಂ ಸದಸ್ಯೆ ಮಲ್ಲವ್ವ ಭೀಮಪ್ಪ ಮೇಟಿಯವರು ಗ್ರಂಥಾಲಯಕ್ಕೆ (Gruhalakshmi Scheme) ಒಟ್ಟು ಒಂದೂವರೆ ಲಕ್ಷ ಖರ್ಚು ಮಾಡಲಾಗಿದೆ. ತಮ್ಮ ಊರಿನ ಮಕ್ಕಳು ಓದುವುದಕ್ಕಾಗಿಯೇ ಬೆಂಗಳೂರು, ಧಾರವಾಡ, ಬಿಜಾಪುರಕ್ಕೆ ಹೋಗುತ್ತಾರೆ.ಅಲ್ಲಿ ಅವರ ತರಬೇತಿಗೆ ತಿಂಗಳು ತಿಂಗಳು ಹಣದ ಸಮಸ್ಯೆ ಆಗ್ತಿತ್ತು. ಅಂಥವರಿಗಾಗಿ ನಮ್ಮಲ್ಲಿಯೇ ಒಂದು ಲೈಬ್ರೆರಿ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ 13 ತಿಂಗಳಿನಿಂದ ಗೃಹಲಕ್ಷ್ಮೀ ಹಣ (Gruhalakshmi Scheme) 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ. ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ಹೇಳಿದ್ದಾರೆ.
ಇನ್ನೂ ಮಲ್ಲವ್ವ ಹೆಚ್ಚಾಗಿ ಓದಿಕೊಂಡಿರುವವರಲ್ಲ. (Gruhalakshmi Scheme) ಆದರೆ ತಮ್ಮ ಊರಿನ ಮಕ್ಕಳು ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಪಡೆಯಬೇಕು ಎಂಬ ಉದ್ದೇಶದಿಂದ ಆಕೆ ಈ ಗ್ರಂಥಾಲಯ ಕಟ್ಟಿಸಿದ್ದಾರೆ. ಈ ಹಿಂದೆ ಆಕೆ ಗ್ರಾ.ಪಂ ಚುನಾವಣೆಗೆ ಸ್ಪರ್ಧೆ ಮಾಡಿದಾಗ ವಿದ್ಯಾರ್ಥಿಗಳು ನಮಗೆ ಒಂದು ಗ್ರಂಥಾಲಯ ಕಟ್ಟಿಸಿಕೊಳ್ಳಿ, (Gruhalakshmi Scheme) ನಮಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದರಂತೆ. ಆ ಸಮಯದಲ್ಲಿ ಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಆಕೆಯ ಈ ಕಾರ್ಯಕ್ಕೆ ಗ್ರಾಮದ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.