ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಮೂರನೇ ಬಾರಿಗೆ ದಸರಾ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ (Dasara Ganesha Ustava) ನೆರವೇರಿದ್ದು, ಗುಡಿಬಂಡೆಯ ಮುಖ್ಯ ರಸ್ತೆಯಲ್ಲಿ ಕಳೆದ ಶನಿವಾರ ರಾತ್ರಿ ಅದ್ದೂರಿಯಾಗಿ ಶೋಭಾಯಾತ್ರೆಯನ್ನು ಸಹ ಆಯೋಜಿಸಲಾಗಿತ್ತು. ಈ ವೇಳೆ ನೂರಾರು ಸಂಖ್ಯೆಯ ಯುವಕರು ಕುಣಿದು ಕುಪ್ಪಳಿಸಿದರು.
ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಸರಾ ಗಣೇಶ ಉತ್ಸವ ಸಮಿತಿ (Dasara Ganesha Ustava) ವತಿಯಿಂದ 9 ದಿನಗಳ ಕಾಲ ಗಣೇಶ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಜೊತೆಗೆ ಪ್ರತಿನಿತ್ಯ ಸಂಜೆ ವಿಶೇಷ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಅದರ ಭಾಗವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಅಂಬೇಡ್ಕರ್ ನಗರದ ವರೆಗೂ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಳನ್ನು ಮೆರವಣಿಗೆ ಮಾಡಲಾಯಿತು. ಈ ಶೋಭಾಯಾತ್ರೆಯ ವೇಳೆ ತಮಟೆಗಳ (Dasara Ganesha Ustava)ವಾದನದೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿದ್ದಂತಹ ನೂರಾರು ಸಂಖ್ಯೆಯ ಯುವಕರು ತಮಟೆ ಶಬ್ದಗಳಿಗೆ ಕುಣಿದು ಕುಪ್ಪಳಿಸಿದರು.
ಲಡ್ಡು ಹರಾಜು: ಇನ್ನೂ ದಸರಾ ಗಣೇಶೋತ್ಸವದ ಅಂಗವಾಗಿ (Dasara Ganesha Ustava) ಲಡ್ಡು ಹರಾಜು ಪ್ರಕ್ರಿಯೆಯನ್ನು ಸಹ ಆಯೋಜಿಸಲಾಗಿತ್ತು. ಈ ಹಾರಾಜಿನಲ್ಲಿ ಯುವಕರು ತಾ ಮುಂದು ನಾ ಮುಂದು ಎಂದು ಭಾಗವಹಿಸಿದ್ದರು. ಹರೀಶ್ ಎಂಬುವವರು 15 ಸಾವಿರಕ್ಕೆ ಹರಾಜು ಮೂಲಕ ಲಡ್ಡು ಪಡೆದುಕೊಂಡರು. ಇನ್ನೂ ಮೆರವಣಿಗೆಯ ಉದ್ದಕ್ಕೂ ಪ್ರಸಾದ ವಿನಿಯೋಗ ಸಹ ಮಾಡಲಾಯಿತು.
ಅಮಾನಿಬೈರಸಾಗರ ಕೆರೆಯಲ್ಲಿ ವಿಗ್ರಹ ವಿಸರ್ಜನೆ: 9 ದಿನಗಳ ಕಾಲ ಪ್ರತಿಷ್ಟಾಪಿಸಿದ್ದ ಗಣೇಶ ಹಾಗೂ ದುರ್ಗಾ ಮಾತೆಯ (Dasara Ganesha Ustava) ವಿಗ್ರಹಗಳನ್ನು ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಇನ್ನೂ 9 ದಿನಗಳ ಕಾಲ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಪೊಲೀಸರು ಸೂಕ್ತ ಬಂದೋಬಸ್ತ್ ಸಹ ಒದಗಿಸಿದ್ದರು.