Viral Video – ತನ್ನ ಪತ್ನಿಯ ಆರೋಗ್ಯದ ಕಾರಣದಿಂದ ಪತಿಯೊಬ್ಬ ತನ್ನ ಕೆಲಸದಿಂದ ವಿ.ಆರ್.ಎಸ್ ಪಡೆದುಕೊಂಡಿದ್ದು, ಈ ಸಂಬಂಧ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಡೆದಿತ್ತು ದುರಂತ. ಪತಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪತ್ನಿ ಹಠಾತ್ ಕುಸಿದುಬಿದ್ದು (Viral Video) ಮೃತಪಟ್ಟಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದವರೆಲ್ಲಾ ಕಂಬನಿ ಮಿಡಿದಿದ್ದಾರೆ. ಅಂದಹಾಗೆ ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ ಎನ್ನಲಾಗಿದೆ.
ರಾಜಸ್ಥಾನದ ಕೋಟಾದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೇವೆಂದ್ರ ಸಂಡಾಲ್ ಎಂಬ ಸರ್ಕಾರಿ ಉದ್ಯೋಗಿ ತನ್ನ ಪತ್ನಿ ಟೀನಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದಳು. ತನ್ನ ಅನಾರೋಗ್ಯಪೀಡಿತ ಪತ್ನಿಯ ಆರೋಗ್ಯವನ್ನು ನೋಡಿಕೊಳ್ಳುವ ಸಲುವಾಗಿ ತಮ್ಮ ಸರ್ಕಾರಿ ಉದ್ಯೋಗಕ್ಕೆ ಮುಂಚಿತವಾಗಿಯೇ ನಿವೃತ್ತಿ ಪಡೆದುಕೊಂಡಿದ್ದರು. ದೇವೇಂದ್ರ ಅವರು ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೋರೇಷನ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಅವರು ತಮ್ಮ ಪತ್ನಿಗಾಗಿ ಮೂರು ವರ್ಷಗಳ ಮೊದಲೇ ನಿವೃತ್ತಿ ಪಡೆದುಕೊಳ್ಳುವ ನಿರ್ಧಾರ ಮಾಡಿದ್ದರು. ಅವಧಿಗೆ ಮೊದಲೇ ತನ್ನ ಸರ್ಕಾರಿ ವೃತ್ತಿಗೆ ನಿವೃತ್ತಿ ಘೋಷಿಸಿದ ದೇವೇಂದ್ರ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಅವರ ಸಹೋದ್ಯೋಗಿಗಳು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ದೇವೇಂದ್ರ ಅವರ ಪತ್ನಿ ಟೀನಾ ಅವರೂ ಪಾಲ್ಗೊಂಡಿದ್ದರು.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಬೀಳ್ಕೊಡುಗೆ ಸಮಾರಂಭದಲ್ಲಿ ದೇವೆಂದ್ರ ದಂಪತಿಗೆ ಹಾರ ಹಾಕಿ ಅವರ ಮೇಲೆ ಗುಲಾಬಿ ಹೂಗಳ ಸುರಿಸಿ ಸಂಭ್ರಮಿಸಿದ್ದಾರೆ. ಈ ಸಂತೋಷದ ಕ್ಷಣಗಳು ಕೆಲವೇ ಕ್ಷಣಗಳಲ್ಲಿ ಶೋಕವಾಗಿ ಪರಿಣಮಿಸಿದೆ. ಕಾರ್ಯಕ್ರಮ ನಡೆಯುತ್ತಿದ್ದಂತೆ ಟೀನಾ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದಾಳೆ. ನಂತರ ನನಗೆ ತಲೆ ಸುತ್ತುತ್ತಿದೆ ಎಂದು ಪತಿಯ ಬಳಿ ಹೇಳಿದ್ದಾರೆ. ಕೂಡಲೇ ಪತಿ ದೇವೇಂದ್ರ ಆಕೆಯನ್ನು ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಹಾಯ ಮಾಡಿದ್ದಾರೆ. ಜೊತೆಗೆ ಆಕೆಗೆ ಕುಡಿಯಲು ನೀರು ಕೊಡುವಂತೆ ಕೇಳಿಕೊಂಡಿದ್ದಾರೆ. ಇದೆಲ್ಲದರ ನಡುವೆ ಕೊನೆಯ ಪೊಟೋ ಒಂದಕ್ಕೆ ಕಿರು ನಗೆ ಬೀರಿ, ಟೇಬಲ್ ಮೇಲೆ ಕುಸಿದುಬಿದ್ದಿದ್ದಾರೆ. ನಂತರ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲೇ ಟೀನಾ ಪ್ರಾಣ ಪಕ್ಷಿ ಹಾರಿಹೋಗಿದೆ. ಈ ಘಟನೆ ದೇವೇಂದ್ರ ಹಾಗೂ ಅವರ ಕುಟುಂಬವನ್ನು ಆಘಾತಕ್ಕೀಡು ಮಾಡಿದೆ. ಜೊತೆಗೆ ವಿಡಿಯೋ ನೋಡಿದ ಎಲ್ಲರೂ ಭಾವುಕರಾಗುವಂತೆ ಮಾಡಿದೆ ಎನ್ನಲಾಗಿದೆ.