ಸಾಮಾನ್ಯವಾಗಿ ಲೋಕಲ್ ಟ್ರೈನ್ ಗಳೆಂದರೇ ಅನೇಕರು ಅಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿರುತ್ತದೆ ಎಂಬ ಭಾವನೆ ಇರುತ್ತದೆ. ಆದರೆ ಇಲ್ಲೊಬ್ಬ ತೃತೀಯಲಿಂಗಿ ಗಗನಸಖಿಯ ಮಾದರಿಯಲ್ಲಿ ಪ್ರಕಟನೆ ಮಾಡಿದ ವಿಡಿಯೋ (Viral Video) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಮಸ್ಕಾರ್, ರೈಲ್ ಮೇ ಅಪ್ಕಾ ಸ್ವಾಗತ್ ಹೈ, ನಿಮ್ಮ ಸೀಟ್ ಬೆಲ್ಟ್ ಗಳನ್ನು ಧರಿಸಿಕೊಳ್ಳಿ, ಈಗ ನಮ್ಮ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಗೆ ಹೊರಡಲು ಸಿದ್ದವಾಗಿದೆ ಎಂದು ವಿಮಾನ ನಿಲ್ದಾಣದಲ್ಲಿ ಗಗನಸಖಿಯರು ಪ್ರಕಟನೆ ಮಾಡುವಂತೆ ಮಾಡಿದ್ದಾರೆ. ಈ ವಿಡಿಯೋಗೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ಬಹುತೇಕ ತೃತೀಯ ಲಿಂಗಿಗಳು ಬೇರೆಯದ್ದೆ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಅದರಲ್ಲೂ ಭಿಕ್ಷಾಟನೆ ಮಾಡುವವರೂ ಬಹಳಷ್ಟು ಮಂದಿಯಿದ್ದಾರೆ. ಈ ಪೈಕಿ ಕೆಲವರು ದುಡಿಯಲು ಆಗದೇ ತೃತೀಯ ಲಿಂಗಿಗಳಂತೆ ವೇಷ ತೊಟ್ಟಿರುತ್ತಾರೆ. ರೈಲುಗಳಲ್ಲಿ ಸಹ ತೃತೀಯ ಲಿಂಗಿಗಳು ಭಿಕ್ಷಾಟನೆ ಮಾಡಲು ಬಂದು ಪ್ರಯಾಣಿಕರಿಗೆ ಕಿರಿಕಿರಿ ಮಾಡುವಂತಹ ಘಟನೆಗಳೂ ಸಹ ನಡೆಯುತ್ತಿರುತ್ತವೆ. ಆದರೆ ಮುಂಬೈನ ಲೋಕರ್ ಟ್ರೈನ್ ನಲ್ಲಿ ತೃತೀಯ ಲಿಂಗಿಯೊಬ್ಬರು ಭಿಕ್ಷೆ ಬೇಡದೇ ವಿಭಿನ್ನ ರೀತಿಯಲ್ಲಿ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ.
ಸದ್ಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ ದೇವಿ ವಘೇಲ್ ಎಂಬ ತೃತೀಯ ಲಿಂಗಿ ಮಹಿಳೆಯೊಬ್ಬರು ಮುಂಬೈನ ಲೋಕಲ್ ಟ್ರೈನ್ ನಲ್ಲಿ ವಿಮಾನದಲ್ಲಿ ಏರ್ ಹೋಸ್ಟಸ್ ಗಳು ಪ್ರಕಟನೆ ಮಾಡುವ ರೀತಿಯಲ್ಲಿ ಪ್ರಕಟನೆ ಮಾಡಿದ್ದಾರೆ. ’ನಮಸ್ಕಾರ್, ರೈಲ್ ಮೇ ಅಪ್ಕಾ ಸ್ವಾಗತ್ ಹೈ’ ಎಂದು ಏರ್ ಹೋಸ್ಟಸ್ ಮಾದರಿಯಲ್ಲೇ ಪ್ರಕಟಿಸಿದ್ದಾರೆ. ಶಿಸ್ತಾಗಿ ಸೀರೆಯನ್ನುಟ್ಟು ಭೀಕ್ಷಾಟನೆ ಮಾಡದೇ ಆಕೆ ಏರ್ ಹೋಸ್ಟರ್ ಮಾದರಿಯಂತೆ ವರ್ತನೆ ಮಾಡಿದ್ದು, ಟ್ರೈನ್ ನಲ್ಲಿದ್ದ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಆಕೆಯ ಅಭಿನಯವನ್ನು ರೈಲಿನಲ್ಲಿದ್ದ ಅನೇಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಮಹಿಳೆ ಖುಷಿಯಿಂದ ವಿಡಿಯೋ ಮಾಡುತ್ತೀದ್ದೀರಾ ಅಲ್ವಾ, ಅದನ್ನು ನನಗೂ ಕಳುಹಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಟ್ರೈನ್ ನಲ್ಲಿ ಭಿಕ್ಷಾಟನೆ ಮಾಡುವಂತಹ ದೃಶ್ಯಗಳನ್ನು ನೋಡಿದ ಅನೇಕರಿಗೆ ಈ ತೃತೀಯ ಲಿಂಗಿ ದೇವಿ ವಘೇಲ್ ಗಗನಸಖಿಯಂತೆ ಅಭಿನಯಿಸಿದ್ದನ್ನು ಮನಸಾರೆ ಶ್ಲಾಘಿಸುತ್ತಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಅವಳು ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾಳೆ, ಗಗನ ಸಖಿಯರಿಗಿಂತ ಈಕೆಯೇ ಚೆನ್ನಾಗಿದ್ದಾಳೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಾ ವಿಡಿಯೋ ಮತ್ತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.