Honey Trap – 57 ವರ್ಷದ ಕಾಂಟ್ರಕ್ಟರ್ ಅಂಕಲ್ ಗೆ 21 ವರ್ಷದ ಯುವತಿಯೊಬ್ಬಳು ಮನೆಗೆ ಕರೆದಿದ್ದಾಳೆ. ಖುಷಿಯಿಂದ ಮನೆಗೆ ಹೋದ ಅಂಕಲ್ ಹನಿಟ್ಯ್ರಾಪ್ ಗೆ ಸಿಕ್ಕಿಕೊಂಡಿದ್ದಾನೆ. ಸಿನೆಮಾ ಶೈಲಿಯಲ್ಲಿ ಈ ಹನಿಟ್ಯ್ರಾಪ್ ಗ್ಯಾಂಗ್ ಕಾಂಟ್ರಕ್ಟರ್ ನನ್ನು ವಂಚನೆ ಮಾಡಿದ್ದಾರೆ. ಆತನಿಂದ ಸಾವಿರಾರು ರೂಪಾಯಿ ಹಣ ಹಾಗೂ 5 ಲಕ್ಷ ಬೆಲೆಬಾಳುವ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಗ್ಯಾಂಗ್ ಯಾವ ರೀತಿ ಕಾಂಟ್ರಕ್ಟರ್ ಅಂಕಲ್ ನನ್ನು ಖೆಡ್ಡಾಗೆ ಬೀಳಿಸಿದರು ಎಂಬುದನ್ನು ತಿಳಿಯಲು ಮುಂದೆ ಓದಿ…
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಂಟ್ರ್ಯಾಕ್ಟರ್ ರಂಗನಾಥ್ ಎಂಬಾತನನ್ನು ನಯನ ಅಂಡ್ ಗ್ಯಾಂಗ್ ಟಾರ್ಗೆಟ್ ಮಾಡಿದೆ. ರಂಗನಾಥ್ ಗೆ ಸ್ನೇಹಿತನೊಬ್ಬನ ಮೂಲಕ ನಯನಾ ಪರಿಚಯವಾಗಿದ್ದಳು. ಪರಿಚಯವಾಗಿದ್ದೇ ತಡ ಪ್ರತಿನಿತ್ಯ ರಂಗನಾಥ್ ಗೆ ಕರೆ ಮಾಡಿ ಮಾತನಾಡುತ್ತಾ ಆತನೊಂದಿಗೆ ತುಂಬಾ ಸಲುಗೆಯಿಂದ ಮಾತನಾಡುತ್ತಿದ್ದಳು. ನಯನಾ ಅಂಡ್ ಗ್ಯಾಂಗ್ ಸಿನಿಮಾ ಶೈಲಿಯಲ್ಲಿ ಕಾಂಟ್ರಕ್ಟರ್ ರಂಗನಾಥ್ ನನ್ನು ಬಲೆಗೆ ಬೀಳಿಸಿದೆ. ಬನ್ನಿ ನಮ್ಮ ಮನೆಗೆ ಟೀ ಕುಡಿದು ಹೋಗಿ ಎಂದು ಕರೆದಿದ್ದ ಯುವತಿ ಮಾತು ಕೇಳಿ ಹೋದ ಕಂಟ್ರ್ಯಾಕ್ಟರ್ ಹನಿ ಗ್ಯಾಂಗ್ ಬಲೆಗೆ ಬಿದ್ದಿದ್ದಾನೆ.
ಇನ್ನೂ ವಂಚಕಿ ನಯನಾ ಮನೆಗೆ ಕರೆಯುತ್ತಿದ್ದಂತೆ ಖುಷಿಯಿಂದ ಹಿಂದೆ-ಮುಂದೆ ನೊಡದೇ ಸೀದಾ ನಯನಾ ಮನೆಗೆ ಹೋಗಿದ್ದಾನೆ. ಕಳೆದ ಡಿ.9 ರಂದು ರಂಗನಾಥ್ ನಯನಾ ಮನೆಗೆ ಹೋಗಿದ್ದಾನೆ. ಮನೆಗೆ ಹೋಗುತ್ತಿದ್ದಂತೆ ನಕಲಿ ಪೊಲೀಸ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಪೊಲೀಸ್ ವೇಷದಲ್ಲಿ ಬಂದಿದ್ದ ಆರೋಪಿಗಳು, ಇಲ್ಲಿ ವ್ಯಭಿಚಾರ ನಡೆಸುತ್ತಿದ್ದೀರಾ, ನಿಮ್ಮನ್ನು ಅರೆಸ್ಟ್ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ನಂತರ ಬಟ್ಟೆ ಬಿಚ್ಚಿಸಿ ಕೆಲವೊಂದು ಪೊಟೊಗಳನ್ನು ಸಹ ತೆಗೆದುಕೊಂಡಿದ್ದಾರೆ. ನಂತರ ಸೆಟಲ್ ಮೆಂಟ್ ಮಾಡಿಕೊಳ್ಳುವಂತೆ ಬೆದರಿಸಿದ್ದಾರೆ. ಇಲ್ಲೇ ಸೆಟಲ್ ಮೆಂಟ್ ಮಾಡಿ ಅಂತಾ ರಂಗನಾಥ್ ಗೆ ಒತ್ತಡ ಹೇರಿದ್ದಾರೆ. ನಂತರ ರಂಗನಾಥ್ ಬಳಿಯಿದ್ದ 29 ಸಾವಿರ ನಗದು, ಪೋನ್ ಪೇ ನಲ್ಲಿದ್ದ 26 ಸಾವಿರ ಹಾಗೂ ಆತನ ಮೈಮೇಲಿದ್ದ 5 ಲಕ್ಷ ಮೌಲ್ಯದ ಚಿನ್ನಾಭರಣ ಕಸಿದುಕೊಂಡು ನಕಲಿ ಪೊಲೀಸರು ಅಲ್ಲಿಂದ ಪರಾರಿಯಾಗಿದ್ದಾರೆ.
ಇದಾದ ಬಳಿಕ ಯುವತಿ ನಯನಾ ಬಳಿ ರಂಗನಾಥ್ ಇಬ್ಬರೂ ಸೇರಿ ಪೊಲೀಸರಿಗೆ ದೂರು ನೀಡೋಣ ಅಂತಾ ಹೇಳಿದ್ದಾನೆ. ಆದರೆ ನಯನಾ ನನಗೆ ಮಗು ಇದೆ. ಪೊಲೀಸ್ ಠಾಣೆಗೆ ಹೋದರೇ ಸಮಸ್ಯೆಯಾಗುತ್ತದೆ. ಮಗುನಾ ಕರೆದುಕೊಂಡು ನಿಮ್ಮ ಮನೆಗೆ ಬರ್ತೀನಿ ಅಷ್ಟೆ ಎಂದು ರಂಗನಾಥ್ ನನ್ನು ಬೆದರಿಸಿದ್ದಾಳೆ. ನಂತರ ಧೈರ್ಯ ಮಾಡಿದ ರಂಗನಾಥ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ರಂಗನಾಥ್ ದೂರು ನೀಡಿದ ಬಳಿಕ ಸಂತೋಷ್, ಅಜಯ್, ಜಯರಾಜ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ವಂಚಕಿ ನಯನಾಳನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.