King Cobra Drinking Milk : ಹಸುವಿನ ಕೆಚ್ಚಲಿನಿಂದ ನೇರವಾಗಿ ಹಾಲು ಕುಡಿದ ಕಾಳಿಂಗ ಸರ್ಪ! ಪ್ರಕೃತಿಯ ಈ ಪವಾಡಕ್ಕೆ ನೆಟ್ಟಿಗರು ಫುಲ್ ಶಾಕ್!

ಪ್ರಕೃತಿ ಅಂದ ಮೇಲೆ ಅಲ್ಲಿ ಎಂತೆಂತಹ ಅಚ್ಚರಿಗಳು ಅಡಗಿರುತ್ತವೆಯೋ ಯಾರಿಗೂ ಗೊತ್ತು? ಕೆಲವೊಮ್ಮೆ ನಮ್ಮ ಕಣ್ಣುಗಳನ್ನೇ ನಮಗೆ ನಂಬಲು ಸಾಧ್ಯವಾಗದಂತಹ ಘಟನೆಗಳು ನಡೆಯುತ್ತವೆ. ಸಾಮಾನ್ಯವಾಗಿ ಹಾವನ್ನು ಕಂಡರೆ ಸಾಕು, ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ಕೂಡ ಭಯದಿಂದ ಮೈಲು ದೂರ ಓಡುತ್ತವೆ. ಅದರಲ್ಲೂ ಎದುರಿಗಿರೋದು ವಿಷಪೂರಿತ ಕಾಳಿಂಗ ಸರ್ಪ (King Cobra) ಅಂದ್ರೆ ಕೇಳಬೇಕೆ? ಜೀವ ಭಯಕ್ಕೆ ಎಲ್ಲರೂ ನಡುಗುತ್ತಾರೆ.

King Cobra drinking milk from a cow in a rare viral wildlife moment

ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (King Cobra Drinking Milk) ಆಗುತ್ತಿರುವ ವಿಡಿಯೋವೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೌದು, ಅಪಾಯಕಾರಿ ಹಾವೊಂದು ಹಸುವಿನ ಬಳಿ ಬಂದು ನೇರವಾಗಿ ಅದರ ಕೆಚ್ಚಲಿನಿಂದ ಹಾಲು ಕುಡಿಯುತ್ತಿರುವ ಅಪರೂಪದ ದೃಶ್ಯವೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

King Cobra Drinking Milk – ನಡೆದಿದ್ದೇನು?

ವೈರಲ್ ಆಗಿರುವ ವಿಡಿಯೋದಲ್ಲಿ, ಹಸಿರು ಮೈದಾನದಲ್ಲಿ ಹಸುವೊಂದು ಅತ್ಯಂತ ಶಾಂತವಾಗಿ ಮೇವು ಮೇಯುತ್ತಿದೆ. ಅಷ್ಟರಲ್ಲಿ ಅಲ್ಲಿಗೆ ಬೃಹತ್ ಗಾತ್ರದ ನಾಗರ ಹಾವೊಂದು ಬರುತ್ತದೆ. ಸಾಮಾನ್ಯವಾಗಿ ಯಾವುದೇ ಪಶುಗಳು ಹಾವನ್ನು ಕಂಡಾಗ ಜೋರಾಗಿ ಕಿರುಚುತ್ತವೆ ಅಥವಾ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ ಇಲ್ಲಿ ನಡೆದ್ದೇ ಬೇರೆ! ಹಸು ಯಾವುದೇ ಹೆದರಿಕೆಯಿಲ್ಲದೆ ತನ್ನ ಪಾಡಿಗೆ ತಾನು ಮೇಯುತ್ತಿದ್ದರೆ, ಆ ಹಾವು ಮೆಲ್ಲನೆ ಹಸುವಿನ ಹಿಂಗಾಲುಗಳ ಮಧ್ಯೆ ನುಗ್ಗಿ, ಕೆಚ್ಚಲನ್ನು ಹಿಡಿದು ಹಾಲು ಕುಡಿಯಲು ಶುರು ಮಾಡಿದೆ.

Read this also : ಕಪ್ಪೆ ಕಂಡ್ರೆ ಹಾವಿಗೆ ಭಯನಾ? ಈ ವೈರಲ್ ವಿಡಿಯೋ ನೋಡಿದ್ರೆ ಹೌದು ಅನ್ನಲೇಬೇಕು!

ಅಚ್ಚರಿ ಮೂಡಿಸಿದ ಆ ಬಾಂಧವ್ಯ!

ಈ ದೃಶ್ಯದಲ್ಲಿ ನೆಟ್ಟಿಗರನ್ನು ಹೆಚ್ಚು (King Cobra Drinking Milk) ಆಶ್ಚರ್ಯಗೊಳಿಸಿದ್ದು ಏನೆಂದರೆ, ಹಾವು ಹಸುವಿಗೆ ಕಚ್ಚುವ ಯಾವುದೇ ಪ್ರಯತ್ನ ಮಾಡಲಿಲ್ಲ. ಅತ್ತ ಹಸು ಕೂಡ ತನ್ನ ಹಾಲು ಕುಡಿಯುತ್ತಿದ್ದರೂ ಯಾವುದೇ ಪ್ರತಿರೋಧ ತೋರದೆ ಅತ್ಯಂತ ಸಾಮಾನ್ಯ ಎಂಬಂತೆ ನಿಂತಿದೆ. ಸಾಮಾನ್ಯವಾಗಿ ನಾಗರ ಹಾವು ಕಚ್ಚಿದರೆ ನಿಮಿಷಗಳಲ್ಲಿ ಪ್ರಾಣ ಹೋಗುತ್ತದೆ, ಆದರೆ ಇಲ್ಲಿ ಆ ಎರಡು ಮೂಕ ಜೀವಿಗಳ ನಡುವೆ ಒಂದು ವಿಚಿತ್ರವಾದ ಬಾಂಧವ್ಯ ಮತ್ತು ಪ್ರೀತಿ ಎದ್ದು ಕಾಣುತ್ತಿದೆ. ಅಲ್ಲಿಯೇ ಇದ್ದ ಕೆಲವರು ಈ ಅಪರೂಪದ ಕ್ಷಣವನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅಂದಿನಿಂದ ಈ ವಿಡಿಯೋ ಕಾಳ್ಗಿಚ್ಚಿನಂತೆ ಹರಡುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ವಿಡಿಯೋ (Viral Video) ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಹಾಗೂ ಸಾವಿರಾರು ಕಮೆಂಟ್‌ಗಳನ್ನು ಪಡೆದುಕೊಂಡಿದೆ.

King Cobra drinking milk from a cow in a rare viral wildlife moment

  • “ಪ್ರಾಣಿಗಳ ನಡುವಿನ (King Cobra Drinking Milk) ಇಂತಹ ಪ್ರೀತಿ ನಿಜಕ್ಕೂ ಅದ್ಭುತ,” ಎಂದು ಒಬ್ಬರು ಕಮೆಂಟ್ ಮಾಡಿದರೆ,
  • “ಪ್ರಕೃತಿಯಲ್ಲಿ ಇಂತಹ ಪವಾಡಗಳು ಆಗಾಗ ನಡೆಯುತ್ತಲೇ ಇರುತ್ತವೆ,” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
  • ಇನ್ನು ಕೆಲವರು, “ನಾವು ಪುರಾಣಗಳಲ್ಲಿ ಹಾವುಗಳಿಗೆ ಹಾಲು ಹಾಕುವುದನ್ನು ಕೇಳಿದ್ದೇವೆ, ಆದರೆ ಹಸು ಹೀಗೆ ನೇರವಾಗಿ ಹಾಲು ನೀಡುವುದನ್ನು ನೋಡಿ ದಂಗಾಗಿದ್ದೇವೆ,” ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ, ಈ ವಿಡಿಯೋ ನೋಡಿದ ಮೇಲೆ ‘ಪ್ರಕೃತಿ ಮಡಿಲಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ’ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

Leave a Comment

Your email address will not be published. Required fields are marked *

Scroll to Top