Viral News – ಅನೇಕ ಭಕ್ತರು ತಮ್ಮ ಬೇಡಿಕೆಗಳನ್ನು ತೀರಿಸಿಕೊಳ್ಳಲು ದೇವರಲ್ಲಿ ಹರಕೆ ಕಟ್ಟಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಜೀವನದಲ್ಲಿ ಸುಖ, ಸಮೃದ್ದಿ ಸಿಗಲಿ ಎಂದೂ, ನನಗೆ ಉದ್ಯೋಗ ಸಿಗಲಿ ಎಂತಲೂ, ನನಗೆ ಒಳ್ಳೆಯ ವರ/ವಧು ಸಿಗಲಿ ಎಂತಲೂ, ಉತ್ತಮ ಆರೋಗ್ಯ ನೀಡು ಎಂತಲೂ ವಿವಿಧ ರೀತಿಯ ಹರಕೆಗಳನ್ನು ಕಟ್ಟಿಕೊಳ್ಳುವುದನ್ನು ಕಂಡಿರುತ್ತೇವೆ. ಆದರೆ ಇಲ್ಲೊಬ್ಬ ಸೊಸೆ ತನ್ನ ಅತ್ತೆ ಬೇಗ ಸಾಯಬೇಕು ಅಂತಾ 20 ರೂಪಾಯಿ ನೋಟಿನ ಮೇಲೆ ಬರೆದು ದೇವರಲ್ಲಿ ಹರಕೆ (Viral News) ಕಟ್ಟಿಕೊಂಡಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕರ್ನಾಟಕದ ಕಲಬುರಗಿಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿ ದೇವಾಲಯ ಆ ಭಾಗದಲ್ಲಿ ಸಾಕಷ್ಟು ಖ್ಯಾತಿ ಪಡೆದಿದೆ. ಈ ದೇವಾಲಯಕ್ಕೆ ವಿವಿಧ ಕಡೆಯಿಂದ ಜನರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಿರುತ್ತಾರೆ. ಈ ದೇವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರೇ ಈಡೇರುತ್ತದೆ ಎಂಬ ನಂಬಿಕೆ ಸಾಕಷ್ಟು ಮಂದಿ ಭಕ್ತರಿಗೆ ಇದೆ. ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿ ಈ ನೋಟ್ (currency) ಪತ್ತೆಯಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಹಿಳೆ 20 ರೂ. ನೋಟ್ ಮೇಲೆ ಅತ್ತೆ ಸಾಯಲೆಂದು ಬರಹ ಬರೆದು ಭಾಗ್ಯವಂತಿ ದೇವಿಯ ಹುಂಡಿಗೆ ಹರಕೆ ಮಾಡಿದ್ದಾರೆ.
ಇನ್ನೂ ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದ ದೇವಾಲಯದ ಹುಂಡಿಯಲ್ಲಿ 20 ರೂಪಾಯಿ ನೋಟು ಕಂಡುಬಂದಿದ್ದು, ಈ ನೋಟಿನ ಮೇಲೆ “ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ತಾಯಿ” ಎಂದು ಬರೆದು ಹರಕೆ ಕಟ್ಟಿಕೊಂಡಿದ್ದಾಳೆ. ಸದ್ಯ ಈ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕರು ಆ ಸೊಸೆ ಯಾರು ಎಂದು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅನೇಕರು ಸೊಸೆ ಈ ರೀತಿಯಲ್ಲಿ ಬೇಡಿಕೆ ಬೇಡಿದ್ದಾಳೆ ಎಂದರೇ ಆ ಅತ್ತೆ ಎಷ್ಟು ಕಾಟ ಕೊಟ್ಟಿರಬಹುದು ಎಂದು ಊಹೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಈ ರೀತಿಯಲ್ಲೂ ದೇವರಲ್ಲಿ ಮೊರೆ ಹೋಗುತ್ತಾರಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.