Work From Home ಇತ್ತೀಚಿಗೆ ಅನೇಕರು ವರ್ಕ್ ಫ್ರಂ ಹೋಂ ಆಧಾರಿತ ಕೆಲಸಗಳಿಗಾಗಿ ತುಂಬಾನೆ ಹುಡುಕುತ್ತಿರುತ್ತಾರೆ. ಕೆಲವೊಂದು ಕೆಲಸಗಳು ನಿಜವಾದ ಕೆಲಸಗಳಾಗಿದ್ದರೇ ಮತ್ತೆ ಕೆಲವು ಫೇಕ್ ಆಗಿರುತ್ತವೆ. ಕೆಲವು ಕಳ್ಳರಿಂದ ಮೋಸ ಹೋಗಿರುವಂತಹ ಅನೇಕ ಘಟನೆಗಳು ನಡೆದಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದ್ದು, ವರ್ಕ್ ಫ್ರಾಮ್ ಹೋಂ (work from home) ಕೆಲಸದ ಆಮಿಷವೊಡ್ಡಿ ಇಬ್ಬರು ಮಹಿಳೆಯರಿಂದ ಬರೋಬ್ಬರಿ 20 ಲಕ್ಷ ವಂಚನೆ ಮಾಡಿರುವ ಘಟನೆಯೊಂದು ರಾಮನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ರಾಮನಗರದ ಕನಕಪುರ ತಾಲೂಕಿನ ದೊಡ್ಡನಮಾನಹಳ್ಳಿಯ ನಿವಾಸಿ ಎಸ್.ಶಾಲಿನಿ ಹಾಗೂ ಚೆನ್ನಪಟ್ಟಣ ಟೌನ್ ನ ಮದೀನ ಚೌಕ್ ನಿವಾಸಿ ಶಾಹಿದಾ ಬಾನು ಎಂಬ ಇಬ್ಬರು ಮಹಿಳೆಯರು ವರ್ಕ್ ಫ್ರಂ ಹೋಂ (work from home) ಕೆಲಸದ ಆಮಿಷವೊಡ್ಡಿ ಇಬ್ಬರಿಂದ ವಂಚಕರು ಬರೊಬ್ಬರಿ 20 ಲಕ್ಷ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಎಸ್. ಶಾಲಿನಿ ಎಂಬುವವರಿಂದ 16 ಲಕ್ಷಕ್ಕೂ ಅಧಿಕ ಹಣ ಹಾಗೂ ಶಾಹಿದಾ ಭಾನು ರವರಿಂದ ಸುಮಾರು 3.46 ಲಕ್ಷ ಹಣ ಲಪಟಾಯಿಸಿದ್ದಾರೆ. ಈ ಸಂಬಂಧ ರಾಮನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಡಿ.10 ರಂದು ಕನಕಪುರ ತಾಲೂಕಿನ ದೊಡ್ಡನಮಾನಹಳ್ಳಿಯ ನಿವಾಸಿ ಎಸ್.ಶಾಲಿನಿ ಎಂಬಾಕೆಗೆ ವರ್ಕ್ ಫ್ರಾಮ್ ಹೋಂ (work from home) ಕೆಲಸದ ಇದೆ ಎಂದು ಕರೆ ಬಂದಿದೆ. ನಂತರ ಈ ಕೆಲಸ ಮಾಡುವುದಾಗಿಯೂ ಶಾಲಿನಿ ಒಪ್ಪಿಕೊಂಡಿದ್ದಾರೆ. ನಂತರ ಶಾಲಿನಿಯವರ ಮೊಬೈಲ್ ಗೆ ವಾಟ್ಸಾಪ್ ಲಿಂಕ್ ಒಂದನ್ನು ಕಳುಹಿಸಿ, ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗುವಂತೆ ತಿಳಿಸಿದ್ದಾರೆ. (work from home) ಅದರಲ್ಲಿ ಒಂದು ರಿವ್ಯೂ ಗೆ 40 ರೂಪಾಯಿಯಂತೆ 1-6 ಟಾಸ್ಕ್, 5 ಗೂಗಲ್ ರಿವ್ಯೂ ಹಾಗೂ 1 ಡಾಟಾ ಟಾಸ್ಕ್ ಮಾಡಿದರೇ 500 ರೂಪಾಯಿ ಹಣ ನೀಡಲಾಗುತ್ತದೆ. ಒಂದು ಡಾಟಾ ಟಾಸ್ಕ್ ಮುಗಿಸಿದರೇ ಸಾವಿರ ರೂಪಾಯಿಗಳನ್ನು ಗಳಿಸಬಹುದು ಎಂದು ವಂಚಕರು ಆಮಿಷವೊಡ್ಡಿದ್ದಾರೆ.
ಒಂದು ಟಾಸ್ಕ್ ಮಾಡುವುದಕ್ಕೆ 1010 ರೂಪಾಯಿ (work from home) ಕಟ್ಟಬೇಕು, ಆಗ ಒಟ್ಟು 1500 ರೂಪಾಯಿ ಬರುತ್ತದೆ ಎಂದು ವಂಚಕರು ತಿಳಿಸಿದ್ದು ಅದರಂತೆ ಆಕೆ ಮಾಡಿದ್ದಾಳೆ. ನಂತರ ಶಾಲಿನಿಗೆ 1500 ಹಣ ಬಂದಿದೆ. ಶಾಲಿನಿಗೆ 500 ಲಾಭ ಬರುತ್ತಿದ್ದಂತೆ ಶಾಲಿನಿ ಈ ಕೆಲಸವನ್ನು ನಂಬಿದ್ದಾರೆ. ಹೀಗೆ ಮತ್ತಷ್ಟು ಟಾಸ್ಕ್ ಮಾಡಲು ಹಣ ಪಾವತಿಸುವಂತೆ ವಂಚಕರು ತಿಳಿಸಿದ್ದಾರೆ. (work from home) ಅವರು ಹೇಳಿದಂತೆ ಶಾಲಿನಿ 7010 ರೂಪಾಯಿಗಳನ್ನು ಕಟ್ಟಿದ್ದಾಳೆ. ಆದರೆ ಹಣ ಬಂದಿಲ್ಲ. ಅದೇ ರೀತಿ ಆಕೆಯನ್ನು ಯಾಮಾರಿಸಿ ಪುನಃ 28 ಸಾವಿರದಷ್ಟು ಹಣ ಹಾಕಿಸಿಕೊಂಡಿದ್ದಾರೆ. ನಂತರ ಹಣ ತಪ್ಪಾಗಿ ಹಾಕಬೇಡಿ ಎಂದು ನಯವಾಗಿ ಆಕೆಯನ್ನು ವಂಚಿಸಿ (work from home) ಒಟ್ಟಾರೆಯಾಗಿ 16.55 ಲಕ್ಷದಷ್ಟು ಹಣ ಆಕೆಯಿಂದ ವರ್ಗಾವಣೆ ಮಾಡಿಸಿಕೊಂಡು ಆಕೆಯನ್ನು ವಂಚನೆ ಮಾಡಿದ್ದಾರೆ.
ಅದೇ ಮಾದರಿಯಲ್ಲಿ ಚೆನ್ನಪಟ್ಟಣ ಟೌನ್ ನ ಮದೀನ ಚೌಕ್ ನಿವಾಸಿ ಶಾಹಿದಾ ಬಾನು ಎಂಬುವವರನ್ನು (work from home) ವಂಚಿಸಿದ ಸೈಬರ್ ಕಳ್ಳರು ರಿವ್ಯೂ ಡೇಟಾ ಕೆಲಸ ಮಾಡುವಂತೆ ಹೇಳಿ ಆಕೆಯಿಂದ 3 ಲಕ್ಷಕ್ಕೂ ಅಧಿಕ ಮೊತ್ತ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಇಂತಹ ಸೈಬರ್ ಅಪರಾಧಗಳ ಕುರಿತು ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ವಂಚಕರ ಬಲೆಗೆ (work from home) ಅಮಾಯಕರು ಬೀಳುತ್ತಲೇ ಇದ್ದಾರೆ. ಈ ಕುರಿತು ಜನರು ಎಚ್ಚರಿಕೆ ವಹಿಸುವುದು ಅಗತ್ಯ.