Mumbai News – ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರನೊಬ್ಬ ತಿಂಗಳಿಗೆ ತೆಗೆದುಕೊಳ್ಳುವ ಸಂಬಳ ಮಾತ್ರ ಬರೀ 13 ಸಾವಿರ. ಆದರೆ ಆತ ತನ್ನ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್ ಕೊಟ್ಟಿದ್ದಾನೆ. 13 ಸಾವಿರ ಸಂಬಳದಿಂದ ಜೀವನ ನಡೆಸುವುದೂ ಸಹ ಕಷ್ಟ ಎಂದೇ ಹೇಳಬಹುದು ಆದರೆ ಈತ 13 ಸಾವಿರ ಸಂಬಳದಲ್ಲಿ ಅದು ಹೇಗೆ ಕೋಟಿ ಕೋಟಿ ಬೆಳೆಬಾಳುವಂತಹ ಗಿಫ್ಟ್ ಕೊಟ್ಟಿದ್ದಾನೆ ಎಂಬ ಅನುಮಾನ ನಿಮಗೂ ಬರಬಹುದು. ಅದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ…
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ವಿಭಾಗೀಯ ಕ್ರೀಡಾ ಸಂಕೀರ್ಣದಲ್ಲಿ ಹರ್ಷ್ ಕುಮಾರ್ ಕ್ಷೀರಸಾಗರ್ ಎಂಬಾತ ಕಂಪ್ಯೂಟರ್ ಆಪರೇಟರ್ ಆಗಿ ಗುತ್ತಿಗೆ ನೌಕರರನಾಗಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ ಕೇವಲ 13 ಸಾವಿರ ಸಂಬಳ ಪಡೆಯುತ್ತಿದ್ದ ಹರ್ಷ್ ಕುಮಾರ್ ತನ್ನ ಗೆಳತಿಗೆ ಕೋಟ್ಯಂತರ ಬೆಲೆ ಬಾಳುವಂತಹ ಗಿಫ್ಟ್ ಗಳನ್ನು ನೀಡಿದ್ದಾನೆ. ತನ್ನ ಜೊತೆಗೆ ಕೆಲಸ ಮಾಡಿಕೊಂಡಿದ್ದ ಮಹಿಳೆಯ ಜೊತೆ ಸೇರಿಕೊಂಡು ತಾನು ಕೆಲಸ ಮಾಡುವ ಇಲಾಖೆಯ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ 21 ಕೋಟಿ ಹಣ ವಂಚನೆ ಮಾಡಿದ್ದಾನೆ. ಈ ಹಣದಲ್ಲಿ ಒಂದು BMW ಕಾರನ್ನು ಖರೀದಿಸಿ, ತನ್ನ ಗೆಳತಿಗೆ ಮುಂಬೈ ವಿಮಾನ ನಿಲ್ದಾಣದ ಪಕ್ಕದಲ್ಲೇ ನಾಲ್ಕು ಬೆಡ್ ರೂಂ ಫ್ಲಾಟ್ ಒಂದನ್ನು ಖರೀದಿದ್ದಾನೆ. ಇದರ ಜೊತೆಗೆ ತನ್ನ ಗೆಳತಿಗೆ ಡೈಮಂಡ್ ಫ್ರೇಮ್ ಉಳ್ಳ ಕನ್ನಡಕವನ್ನು ಮಾಡಿಸಿದ್ದ ಇದರ ಜೊತೆಗೆ ಆತನ ಜೊತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಸಹ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರನ್ನು ಖರೀದಿಸಿದ್ದಾನಂತೆ.
ಆರೋಪಿ ಹರ್ಷ್ ಕ್ರೀಡಾ ಇಲಾಖೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಜೊತೆಗೆ ಕ್ರೀಡಾ ಇಲಾಖೆಯ ನಿರ್ದೇಶಕರ ಸಹಿಯನ್ನು ಸಹ ನಕಲಿ ಮಾಡಿಕೊಂಡಿದ್ದಾನೆ. ಇದನ್ನು ಬಳಸಿಕೊಂಡು ಇಲಾಖೆಯ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಇಲಾಖಗೆ ಬರಬೇಕಾಗಿದ್ದ ಕೋಟಿ ಕೋಟಿ ಹಣ ಎಗರಿಸಿದ್ದಾರೆ. ಇನ್ನೂ ಇಷ್ಟೆಲ್ಲಾ ವಂಚನೆ ನಡೆದರೂ ಕ್ರೀಡಾ ಇಲಾಖೆಗೆ ಗೊತ್ತಾಗಿದ್ದು ಮಾತ್ರ ಆರು ತಿಂಗಳ ಬಳಿಕ ಎಂಬುದು ವಿಸ್ಮಯ ಎನ್ನಬಹುದು. ಇನ್ನೂ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಇನ್ನೂ ಈ ಕೃತ್ಯ ಬಯಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಲಪಾಟಿಯಿಸಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಕಾರು ಹಾಗೂ ಫ್ಲಾಟ್ ಖರೀದಿಸಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.