Saturday, July 5, 2025
HomeNationalViral Video: ರೀಲ್ಸ್ ಮಾಡೋಕೆ ಹೋಗಿ 6ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕಿ, ವೈರಲ್ ಆದ...

Viral Video: ರೀಲ್ಸ್ ಮಾಡೋಕೆ ಹೋಗಿ 6ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕಿ, ವೈರಲ್ ಆದ ವಿಡಿಯೋ….!

Viral Video – ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ಅನೇಕರು ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಲು ಪ್ರಯತ್ನಗಳನ್ನು ಪಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಮಿತಿ ಮೀರಿ (Viral Video) ವರ್ತನೆ ಮಾಡುತ್ತಿರುತ್ತಾರೆ. ಕೆಲವೊಮ್ಮೆ ರೀಲ್ಸ್ ಮಾಡೋಕೆ ಹೋಗಿ ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳು ರೀಲ್ಸ್ (Viral Video) ಮಾಡೋಕೆ ಹೋಗಿ 6ನೇ ಮಹಡಿಯಿಂದ ಬಾಲಕಿಯೊಬ್ಬಳು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್ ನ ಇಂದಿರಾಪುರಂ ಎಂಬಲ್ಲಿ ಈ ಘಟನೆ (Viral Video) ನಡೆದಿದೆ. ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್-9 ಸೊಸೈಟಿಯ ತನ್ನ ಮನೆಯಲ್ಲಿ ರೀಲ್ಸ್​​ ಮಾಡುತ್ತಿದ್ದ ವೇಳೆ ಆಯತಪ್ಪಿ 6ನೇ ಮಹಡಿಯಿಂದ ಬಿದ್ದಿದ್ದಾಳೆ.  ಬಾಲಕಿ ಮೇಲಿಂದ ಬಿದ್ದ ರಭಸಕ್ಕೆ ತೀವ್ರ ಗಾಯಗೊಂಡಿದ್ದಾಳೆ. ನೋವು ತಡೆಯಲಾಗದೆ ಆಕೆ ಜೋರಾಗಿ(Viral Video)  ಕಿರುಚಾಡಿದ್ದಾಳೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದೆ.

https://x.com/lavelybakshi/status/1823344818577166524

ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು @lavelybakshi ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ (Viral Video) ಹಂಚಿಕೊಳ್ಳಲಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಕಳೆದ ಆ.13 ರಂದು ಹಂಚಿಕೊಂಡ ಈ ವಿಡಿಯೋ ಸಾವಿರಗಟ್ಟಲೇ ವ್ಯೂವ್ಸ್ (Viral Video) ಕಂಡಿದೆ. ಜೊತೆಗೆ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ರೀಲ್ಸ್ ಮಾಡೋಕೆ ಹೋಗಿ ಪ್ರಾಣದ ವರೆಗೂ  ತಂದುಕೊಳ್ಳಬೇಡಿ ಎಂತಲೂ, ಪ್ರಾಣಕ್ಕೆ ಕುತ್ತು ತರುವಂತಹ ಸಾಹಸಕ್ಕೆ ಕೈಹಾಕಬೇಡಿ (Viral Video) ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular