2 C
New York
Sunday, February 16, 2025

Buy now

Viral Video: ಇವಳೊಬ್ಬ ದುಬಾರಿ ಕಳ್ಳಿ, BMW ಕಾರ್ ನಲ್ಲಿ ಬಂದು ಹೂವಿನ ಕುಂಡಗಳನ್ನು ಕದ್ದ ಮಹಿಳೆ, ವಿಡಿಯೋ ವೈರಲ್….!

Table of Contents

Viral Video – ಐಷಾರಾಮಿ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಮಧ್ಯರಾತ್ರಿ ಅಂಗಡಿಯ ಮುಂದೆ ಇರಿಸಿದ ಹೂವಿನ ಗಿಡವನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬರು ರೆಸಿಡೆನ್ಸಿ ಸೊಸೈಟಿ ಮುಂದಿನ (Viral Video) ಹೂಕುಂಡಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

noida woman in bmw steals flower pot

ವೈರಲ್​​ ಆಗಿರುವ ವಿಡಿಯೋದಲ್ಲಿ ಮಹಿಳೆ ಮರೂನ್ ಬಣ್ಣದ BMW ಕಾರಿನಲ್ಲಿ ಬಂದು ಅಂಗಡಿಯ ಮುಂದೆ ಅಲಂಕಾರಕ್ಕಾಗಿ ಇಟ್ಟಿದ್ದ ಹೂವಿನ ಗಿಡವನ್ನು ಕದ್ದೊಯ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. (Viral Video) ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್‌ 18ರಲ್ಲಿ ಬರುವ ವಸತಿ ಸಮುಚ್ಚಯದ ಬಳಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದಲ್ಲದೇ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ she is costly thief ಎಂದು ಟ್ರೋಲ್ (Viral Video) ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ವೈರಲ್ ಆಗುತ್ತಿರುವ ವಿಡಿಯೋದಲ್ಲಿ (Viral Video) ಕಾಣುವಂತೆ ಕಳೆದ ಅ.25 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕೆಂಪು ಬಣ್ಣದ BMW ಕಾರಿನಲ್ಲಿ ಬಂದ ಮಹಿಳೆಯೊಬ್ಬರು ರಸ್ತೆ ಬದಿ ತನ್ನ ಕಾರನ್ನು ನಿಲ್ಲಿಸಿದ್ದಾಳೆ. ಈ ಮಹಿಳೆಯ ಜೊತೆ ಮತ್ತೊಬ್ಬ ವ್ಯಕ್ತಿಯೂ ಇದ್ದಾನೆ. ಆಕೆ ಹೂ ಕುಂಡವನ್ನು ಎತ್ತಿಕೊಂಡು ಬಂದಾಗ ಮತ್ತೊರ್ವ ವ್ಯಕ್ತಿ ಕಾರಿನ ಡೋರ್‍ ತೆಗೆದು ಹಿಡಿದುಕೊಂಡು ಆಕೆಗೆ ನೆರವಾಗಿದ್ದಾನೆ. (Viral Video) ಹೂಕುಂಡಗಳನ್ನು ಕದ್ದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಈ ವಿಡಿಯೋವನ್ನು (Viral Video) ಸಚಿನ್ ಗುಪ್ತಾ ಎಂಬಾತನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು (Viral Video) ಆಕೆಯ ಕೃತ್ಯಕ್ಕೆ ತೀವ್ರ ಆಕ್ರೋಷ ಹೊರಹಾಕುತ್ತಿದ್ದಾರೆ. ಅನೇಕರು ಆಕೆಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles