ಈಗಾಗಲೇ ಜನಪ್ರತಿ ತಿಂಡಿಯಾದ ಗೋಬಿ ಮಂಚೂರಿ ಹಾಗೂ ಕಬಾಬ್ ನಲ್ಲಿ ಕೃತಕ ಬಣ್ಣ ಹಾಗೂ ರಾಸಯನಿಕ ಬಳಕೆಗೆ ರಾಜ್ಯ ಆಹಾರ ಇಲಾಖೆ ನಿರ್ಬಂಧ ಹೇರಿದೆ. ಇದೀಗ ಮತ್ತೊಂದು ಜನಪ್ರಿಯ (Golgappa) ತಿಂಡಿಗೆ ಬ್ಯಾನ್ ಬಿಸಿ ತಟ್ಟಲಿದೆ. ಆಹಾರ ಇಲಾಖೆ ಆಹಾರ ಗುಣಮಟ್ಟದಲ್ಲಿ ವಿಚಾರದಲ್ಲಿ ಕಠಿಣ ನಿಲುವು ತಾಳಿದ್ದು, ಜನಸಾಮಾನ್ಯರ ಅತ್ಯಂತ ಪ್ರಿಯವಾದ ತಿನಿಸು ಪಾನೀಪೂರಿ ಇದೀಗ ಬ್ಯಾನ್ (Golgappa) ಆಗಲಿದೆಯಾ ಎಂಬ ಅನುಮಾನಗಳನ್ನು ಹುಟ್ಟಿಹಾಕಿದೆ. ಇದು ಪಾನೀಪೂರಿ ಪ್ರಿಯರಿಗೆ ಶಾಕಿಂಗ್ ಸುದ್ದಿ ಎನ್ನಲಾಗಿದೆ.
ಆಹಾರ ಇಲಾಖೆಯಿಂದ (Golgappa) ಈಗಾಗಲೇ ಪುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಪಾನೀಪೂರಿ ಗುಣಮಟ್ಟದ ಮೇಲೆ ಅನೇಕ ದೂರುಗಳು ಕೇಳಿ ಬಂದ ಕಾರಣ ಪಾನೀಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಬೆಂಗಳೂರಿನ ಹಲವು ಕಡೆ ಪಾನೀಪೂರಿ (Golgappa) ಮಾದರಿ ಸಂಗ್ರಹಿಸಿ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಕಡೆ ಪಾನೀಪೂರಿ (Golgappa)ಮಾದರಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ. ಈ ಮಾದರಿಗಳ ಮೂಲಕ ಪಾನೀಪೂರಿ ಹೇಗೆ ತಯಾರು ಮಾಡುತ್ತಾರೆ. ಅದಕ್ಕೆ ಯಾವೆಲ್ಲಾ ಪದಾರ್ಥಗಳನ್ನು ಹಾಕುತ್ತಾರೆ. ಈ ಪದಾರ್ಥಗಳಿಂದ ಆರೋಗ್ಯಕ್ಕೆ ಏನೆಲ್ಲಾ ಪರಿಣಾಮ ಬೀರಲಿದೆ (Golgappa) ಎಂಬುದನ್ನು ತಿಳಿಯಲು ರಾಜ್ಯ ಆಹಾರ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಇನ್ನೂ ಕಳೆದ ಎರಡು ದಿನಗಳಿಂದ ಆಹಾರ ಇಲಾಖೆ ಪಾನೀಪೂರಿ ತಯಾರಿಕಾ ಘಟಕಗಳ ಮೇಲೆ (Golgappa) ಧಾಳಿ ನಡೆಸಿದೆ. ಸಂಗ್ರಹಿಸಿದಂತಹ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಸಂಬಂಧ ವರದಿ ಸಹ ಕೆಲವೇ ದಿನಗಳಲ್ಲಿ ಹೊರಬರಲಿದೆ. ವರದಿಯಲ್ಲಿ ಏನಾದರೂ ಆರೋಗ್ಯಕ್ಕೆ (Golgappa) ಹಾನಿಕಾರ ಅಂಶಗಳು ಪತ್ತೆಯಾಗಿದ್ದೇ ಆದಲ್ಲಿ ರಾಜ್ಯದಲ್ಲಿ ಪಾನೀಪೂರಿ ಬ್ಯಾನ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪಾನೀಪೂರಿ (Golgappa) ರುಚಿ ಹೆಚ್ಚಳಕ್ಕಾಗಿ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತದೆ ಎಂಬ ಆರೋಪ ಗಂಭೀರವಾಗಿ ಕೇಳಿಬರುತ್ತಿದೆ. ಈ ಹಿನ್ನೆಯಲ್ಲಿ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆ ಖಾತರಿಪಡಿಸಿಕೊಳ್ಳಲು (Golgappa) ಆಹಾರ ಇಲಾಖೆ ಈ ಕಾರ್ಯಾಚರಣೆ ಆರಂಭಿಸಿದೆ ಎನ್ನಲಾಗಿದೆ.