Ambulance Misuse : ಅಂಬುಲೆನ್ಸ್ ಅನ್ನೇ ‘ಓಯೋ’ ರೂಮ್ ಮಾಡಿದ ಕಿಲಾಡಿಗಳು! ಜನರಿಗೆ ಸಿಕ್ಕಿಬಿದ್ದ ಪ್ರೇಮಿಗಳು, ವೈರಲ್ ಆದ ವಿಡಿಯೋ..!

ಸಾಮಾನ್ಯವಾಗಿ ಅಂಬುಲೆನ್ಸ್ ಅಂದಾಕ್ಷಣ ನಮಗೆ ನೆನಪಾಗುವುದು ತುರ್ತು ಚಿಕಿತ್ಸೆ ಮತ್ತು ಜೀವ ಉಳಿಸುವ ವಾಹನ. ರಸ್ತೆಯಲ್ಲಿ ಸೈರನ್ ಹಾಕಿಕೊಂಡು ಅಂಬುಲೆನ್ಸ್ (Ambulance Misuse) ಬರುತ್ತಿದ್ದರೆ, ಸಾವು-ಬದುಕಿನ ಹೋರಾಟದಲ್ಲಿರುವ ಯಾರಿಗೋ ದಾರಿ ಮಾಡಿಕೊಡಬೇಕು ಎಂಬ ತುಡಿತ ಎಲ್ಲರಲ್ಲೂ ಇರುತ್ತದೆ. ಆದರೆ, ಈ ಘಟನೆಯನ್ನು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ! ಯಾಕಂದರೆ, ಕೆಲವರು ತುರ್ತು ಚಿಕಿತ್ಸೆಗೆ ಬಳಕೆಯಾಗಬೇಕಾದ ಅಂಬುಲೆನ್ಸ್ ಅನ್ನೇ ತಮ್ಮ ರೊಮಾನ್ಸ್‌ಗೆ ಅಡ್ಡಾ ಮಾಡಿಕೊಂಡಿದ್ದಾರೆ.

Ambulance misuse case sparks outrage in Madhya Pradesh

Ambulance Misuse – ನಡೆದಿದ್ದೇನು? ಓಯೋ ಸ್ಟೈಲ್ ಅಂಬುಲೆನ್ಸ್!

ಈ ವಿಚಿತ್ರ ಹಾಗೂ ಅಸಹ್ಯಕರ ಘಟನೆ ನಡೆದಿರುವುದು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ. ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಅಂಬುಲೆನ್ಸ್ ಒಂದರ ಕಿಟಕಿಯ ಮೂಲಕ ಒಳಗೆ ನಡೆಯುತ್ತಿದ್ದ ದೃಶ್ಯಗಳನ್ನು ಕಂಡ ಸ್ಥಳೀಯರು ಒಂದು ಕ್ಷಣ ದಂಗಾಗಿದ್ದಾರೆ. ಅಂಬುಲೆನ್ಸ್ ಒಳಗಡೆ ಯುವತಿಯೊಬ್ಬಳು ಇಬ್ಬರು ಯುವಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು (Ambulance Misuse) ಕಂಡುಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಸುಮ್ಮನೆ ಬಿಡಲಿಲ್ಲ. ಸಿನಿಮೀಯ ಮಾದರಿಯಲ್ಲಿ ಆ ಅಂಬುಲೆನ್ಸ್ ಅನ್ನು ಸುಮಾರು 5 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ ಕೊನೆಗೂ ತಡೆದು ನಿಲ್ಲಿಸಿದ್ದಾರೆ. Read this also : Ambulance : 2 ಗಂಟೆ ಕಾದರೂ ಬರಲಿಲ್ಲ ಆಂಬ್ಯುಲೆನ್ಸ್! ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿದ ಅಸ್ವಸ್ಥ – ವಿಡಿಯೋ ವೈರಲ್

ಬಾಗಿಲು ತೆರೆದಾಗ ಕಾದಿತ್ತು ಶಾಕ್!

ಸ್ಥಳೀಯರು ಅಂಬುಲೆನ್ಸ್ ನಿಲ್ಲಿಸಿ ಬಾಗಿಲು ತೆರೆದಾಗ ಒಳಗಿದ್ದ ದೃಶ್ಯ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬುಲೆನ್ಸ್ ಒಳಗಡೆ ರೋಗಿಗಳಿಗೆ ಇರಬೇಕಾದ ಯಾವುದೇ ವೈದ್ಯಕೀಯ ಸೌಲಭ್ಯಗಳಿರಲಿಲ್ಲ, ಬದಲಾಗಿ ಅದನ್ನು ಒಂದು ಮಿನಿ ‘ಓಯೋ’ ರೂಮ್ ತರಹ ಸಿದ್ಧಪಡಿಸಲಾಗಿತ್ತು. ಸ್ಥಳೀಯರು ಅವರನ್ನು ಪ್ರಶ್ನಿಸಿದಾಗ, “ನಾವೆಲ್ಲಾ ಒಂದೇ ಕುಟುಂಬದವರು” ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅವರ ಹಾವಭಾವ ಮತ್ತು (Ambulance Misuse) ಅಂಬುಲೆನ್ಸ್‌ನ ಸ್ಥಿತಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬದನ್ನು ಸಾಬೀತುಪಡಿಸಿದೆ. ಕೂಡಲೇ ಜನರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

Ambulance misuse case sparks outrage in Madhya Pradesh

ಅಧಿಕಾರಿಗಳ ಆ್ಯಕ್ಷನ್

ಈ ವಿಡಿಯೋ (ವೈರಲ್ ವಿಡಿಯೋ ಇಲ್ಲಿದೆ ನೋಡಿ) ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ, (Ambulance Misuse) ಆ ಅಂಬುಲೆನ್ಸ್ ಚಾಲಕನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಗಿದೆ. ಜೀವ ಉಳಿಸಬೇಕಾದ ವಾಹನವನ್ನು ಇಂತಹ ಕೆಲಸಕ್ಕೆ ಬಳಸಿಕೊಂಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಗಮನಿಸಿ: ಈ ಮೇಲಿನ ಮಾಹಿತಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಆಧಾರದ ಮೇಲೆ ನೀಡಲಾಗಿದೆ.

Leave a Comment

Your email address will not be published. Required fields are marked *

Scroll to Top