ಸಾಮಾನ್ಯವಾಗಿ ಹಾವುಗಳನ್ನು ಕಂಡರೇ ಬಹುತೇಕ ಎಲ್ಲರಿಗೂ ಭಯ ಎಂದು ಹೇಳಬಹುದು. ಆದರೆ ಇಲ್ಲೊಬ್ಬ ಯುವಕ ಧೈರ್ಯದಿಂದ ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್ ಮೂಲಕ (Viral Video) ಪ್ರಾಣ ಉಳಿಸಿದ್ದಾನೆ. ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಸಹ ತುಂಬಾನೆ ವೈರಲ್ ಆಗುತ್ತಿದೆ. ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್ ಮಾಡುವ ಮೂಲಕ ಹಾವಿನ ಪ್ರಾಣ ಉಳಿಸಿದ್ದಾನೆ. ಯುವಕನ ಈ ಮಾನವೀಯತೆಗೆ ಎಲ್ಲಾ ಕಡೆಯಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಅಂದಹಾಗೆ ಈ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ ಎನ್ನಲಾಗಿದೆ. ಹಾವನ್ನು ಕಂಡ ಕೂಡಲೇ ಕಿ.ಮೀ ದೂರ ಹೋಗುವವರನ್ನು ಕಂಡಿರುತ್ತೇವೆ. ಆದರೆ ಇಲ್ಲೊಬ್ಬ ಯುವಕ ಮಾತ್ರ ಹಾವನ್ನು ಕಂಡು ದೂರ ಓಡದೇ, ಮಾನವೀಯತೆ ಮರೆದಿದ್ದಾನೆ. ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್ ಮಾಡಿ ಅದರ ಪ್ರಾಣ ಉಳಿಸಿದ್ದಾನೆ. ವಡೋದರಾದ ವೃಂದಾವನ್ ಚಾರ್ ರಸ್ತೆಯ ಪಕ್ಕದಲ್ಲಿ ಸಣ್ಣದಾದ ಹಾವೊಂದು ಪ್ರಜ್ಞೆ ತಪ್ಪಿ ಮಲಗಿರುತ್ತದೆ. ಅದನ್ನು ಕಂಡ ಯುವಕ ಭಯಪಡದೇ ಹಾವಿನ ಬಳಿ ತೆರಳಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಹಾವಿನ ಬಾಯಿಗೆ ಬಾಯಿಟ್ಟು ಸಿಪಿಆರ್ ನೀಡುವ ಮೂಲಕ ಅದರ ಪ್ರಾಣ ರಕ್ಷಣೆ ಮಾಡಿದ್ದಾನೆ.
ವೈರಲ್ ವಿಡಿಯೋ: Click Here
ಕೆಲವೊಂದು ಮಾಹಿತಿಗಳ ಪ್ರಕಾರ ಪ್ರಜ್ಞಾಹೀನ ಸ್ಥೀತಿಯಲ್ಲಿ ಬಿದ್ದಿರುವ ಹಾವು ಕಂಡ ಸ್ಥಳೀಯರು ಪೊಲೀಸರು ಹಾಗೂ ಪ್ರಾಣಿಗಳ ಎನ್.ಜಿ.ಒ ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಯಶ್ ತದ್ವಿ ಎಂಬಾತ ಪ್ರಜ್ಞಾಹೀನವಾಗಿ ಬಿದ್ದ ಹಾವನ್ನು ಜೋಪಾನವಾಗಿ ಸಿ.ಪಿ.ಆರ್ ನೀಡುವು ಮೂಲಕ ಹಾವಿನ ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ವಿಡಿಯೋವನ್ನು @amitkasana6666 ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಜ್ಞಾಹೀನವಾಗಿ ಬಿದ್ದ ಹಾವನ್ನು ನಿಧಾನವಾಗಿ ಕೈಯಲ್ಲಿ ಎತ್ತಿಕೊಂಡು ಅದರ ಬಾಯಿಗೆ ಬಾಯಿಟ್ಟು ಉಸಿರು ನೀಡಿದ್ದಾನೆ. ಸಿಪಿಆರ್ ನೀಡಿದ ಬಳಿಕ ಪ್ರಜ್ಞಾಹೀನ ಸ್ಥೀತಿಯಲ್ಲಿದ್ದ ಹಾವು ಉಸಿರಾಡಿದೆ. ಯುವಕ ಪ್ರಾಣಭಯಬಿಟ್ಟು ಹಾವಿನ ಪ್ರಾಣ ರಕ್ಷಣೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.