Viral Video: ಸ್ವಾಮಿ ನಿಮಗೆ ಓಟು ಹಾಕಿದ್ದೇನೆ, ನನ್ನ ಮದುವೆ ನೀವೆ ಮಾಡಿಸಬೇಕು ಎಂದು ಶಾಸಕರ ಬಳಿ ವಿಭಿನ್ನ ಬೇಡಿಯಿಟ್ಟ ಮತದಾರ…!

ಜನಪ್ರತಿನಿಧಿಗಳು ಮತದಾರರಿಗೆ ಚುನಾವಣೆಯ ಸಮಯದಲ್ಲಿ ವಿವಿಧ ರೀತಿಯ ಘೋಷಣೆಗಳನ್ನು, ಭರವಸೆಗಳನ್ನು ನೀಡಿರುತ್ತಾರೆ. ಅವುಗಳನ್ನು ನಂಬಿದ ಅನೇಕರು ಅವರಿಗೆ ಮತ ಸಹ ನೀಡಿರುತ್ತಾರೆ. ಇದೀಗ ಮತದಾರನೋರ್ವ ಶಾಸಕರ ಬಳಿ ವಿಭಿನ್ನವಾದ ಬೇಡಿಕೆಯಿಟ್ಟಿದ್ದಾನೆ. ಅದನ್ನು ಕೇಳಿದ ಶಾಸಕರು ಶಾಕ್ ಆಗಿದ್ದಾರೆ. ಶಾಸಕರ ಬಳಿ ತೆರಳಿದ ವ್ಯಕ್ತಿಯೊಬ್ಬ ನಾನು ನಿಮಗೆ ಮತ ಹಾಕಿದ್ದೇನೆ, ನೀವೇ ನನ್ನ ಮದುವೆ ಮಾಡಿಸಬೇಕೆಂದು (Viral Video) ವಿಚಿತ್ರ ಬೇಡಿಕೆಯಿಟ್ಟಿದ್ದಾನೆ. ಆ ವ್ಯಕ್ತಿಯ ಬೇಡಿಕೆ ಕೇಳಿ ಶಾಸಕ ಶಾಕ್ ಆಗಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ ಎಂಬ ವಿಚಾರಕ್ಕೆ ಬಂದರೇ,

man asks mla to find him a bride 0

ಉತ್ತರ ಪ್ರದೇಶದ ಮಹೋಬಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ಚರಖಾರಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ರವರ ಬಳಿ ವ್ಯಕ್ತಿಯೋರ್ವ ತಮಗೆ ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಶಾಸಕರು ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ಬಳಿ ಬಂದಿದ್ದಾರೆ. ಅಲ್ಲಿನ ಸಿಬ್ಬಂದಿಯೋರ್ವ ಶಾಸಕರ ಕಾರಿನ ಬಳಿ ಓಡಿ ಬಂದಿದ್ದಾನೆ. ಬಳಿಕ ನಾನು ನಿಮಗೆ ಮತ ಹಾಕಿದ್ದೇನೆ. ಅದಕ್ಕೆ ಬದಲಾಗಿ ನೀವು ನನಗೆ ಮದುವೆ ಮಾಡಿಸಬೇಕೆಂದು ಎಂದು ಬೇಡಿಕೆಯಿಟ್ಟಿದ್ದಾನೆ. ಈ ಮಾತನ್ನು ಕೇಳಿದ ಶಾಸಕ ಬ್ರಿಜ್ ಭೂಷಣ್ ಶಾಕ್ ಆಗಿದ್ದಾರೆ. ಬಳಿಕ ಶಾಂತವಾಗಿ ವರ್ತನೆ ಮಾಡಿರುವ ಶಾಸಕ ಹುಡುಗಿ ಹುಡುಕಿ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: Click Here

ಮೊದಲಿಗೆ ಶಾಸಕರಾದ ಬ್ರಿಜ್ ಭೂಷಣ್ ಪೆಟ್ರೋಲ್ ಬಂಕ್ ಬಳಿ ಹೋದಾಗ ಅಲ್ಲಿನ ಉದ್ಯೋಗಿ ಶಾಸಕರ ಬಳಿ ಓಡಿ ಬಂದಾಗ ಆತ ಏನೋ ದೂರು ನೀಡಲು ಬಂದಿರಬಹುದು ಎಂದು ಭಾವಿಸಿದ್ದರು. ಆದರೆ ಆತನ ಮಾತು ಕೇಳಿ ಶಾಕ್ ಆಗಿದ್ದರು. ತಾನು ಮದುವೆಯಾಗದೇ ಬೇಸರದಲ್ಲಿದ್ದೇನೆ ಎಂದು ಪೆಟ್ರೋಲ್ ಬಂಕ್ ನೌಕರ ಹೇಳಿಕೊಂಡಿದ್ದಾನೆ. ನೌಕರನ ಬಳಿ ಶಾಸಕರು ಮಾತನಾಡುತ್ತಾ ಈ ಕುರಿತು ಬೇರೆ ಯಾರ ಬಳಿಯಾದರೂ ಮನವಿ ಮಾಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ನೌಕರ ಹೌದು ನಿಮ್ಮ ವಿರುದ್ದ ಸ್ಪರ್ಧೆ ಮಾಡಿದ್ದ ಗೋಸ್ವಾಮಿ ರವರ ಬಳಿಯೂ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಬಳಿಕ ಶಾಸಕರು ನೌಕರನ ಸಂಬಳದ ಬಗ್ಗೆ ಸಹ ವಿಚಾರಿಸಿದ್ದಾನೆ. ಅಂದಹಾಗೆ ಈ ವಿಡಿಯೋ ಎಲ್ಲಿ ನಡೆದಿದ್ದು, ಯಾವಾಗ ನಡೆದಿದ್ದು ಎಂಬ ಖಚಿತ ಮಾಹಿತಿ ಇಲ್ಲ. ಆದರೆ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *

Scroll to Top