Crime News : ಹೆಂಡತಿ ನಾಪತ್ತೆ ಎಂದು ಕಣ್ಣೀರು ಹಾಕಿದ್ದ ಪತಿಯ ಅಸಲಿ ಮುಖ ಬಯಲು: ಮನೆಯ ಅಂಗಳದಲ್ಲೇ ಅಡಗಿತ್ತು ಕೊಲೆಯ ರಹಸ್ಯ!

ಪ್ರೀತಿಯಿಂದ ಬಾಳಬೇಕಿದ್ದ ಪತ್ನಿಯನ್ನೇ ಕ್ರೂರವಾಗಿ ಹತ್ಯೆ ಮಾಡಿ, ಯಾರೂ ಊಹಿಸಲಾಗದ ಜಾಗದಲ್ಲಿ ಶವ ಹೂತುಹಾಕಿ, ಅತ್ತ ಏನೂ ಅರಿಯದವನಂತೆ ನಾಪತ್ತೆ ದೂರು ನೀಡಿ ನಾಟಕವಾಡಿದ್ದ ಪತಿಯ ಪಾಪದ ಕೊಡ ತುಂಬಿದೆ. ಸತತ 24 ದಿನಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ (Crime News) ಆರೋಪಿಯ ಅಸಲಿ ಬಣ್ಣ ಈಗ ಬಯಲಾಗಿದ್ದು, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣ ಈ ಭೀಕರ ಘಟನೆಗೆ ಸಾಕ್ಷಿಯಾಗಿದೆ.

Crime news scene in Vijayapura where husband murdered wife and buried body

Crime News – ಸಾಲದ ಕಿರಿಕಿರಿ ತಂದಿಟ್ಟ ಮಹಾಪರಾಧ

ಹತ್ಯೆಗೀಡಾದ ಮಹಿಳೆಯನ್ನು ಸರೋಜಿನಿ (45) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಪ್ರಭು ರತ್ನಾಕರ್, ಪತ್ನಿಯ ಹೆಸರಿನಲ್ಲಿ ಸಾಕಷ್ಟು ಸಾಲ ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಜನವರಿ 24 ರಂದು ಕೂಡ ಇದೇ ವಿಷಯಕ್ಕೆ ದೊಡ್ಡ ಮಟ್ಟದ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಪ್ರಭು ಕಬ್ಬಿಣದ ರಾಡ್‌ನಿಂದ ಸರೋಜಿನಿ ಅವರ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಮನೆಯ ಅಂಗಳದಲ್ಲೇ ಅಂತ್ಯಸಂಸ್ಕಾರದ ನಾಟಕ

ಕೊಲೆ ಮಾಡಿದ ನಂತರ ಯಾರಿಗೂ ಅನುಮಾನ ಬರದಂತೆ ತಡೆಯಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದ. ಮನೆಯ ಆವರಣದಲ್ಲೇ ಗುಂಡಿ ತೆಗೆದು ಪತ್ನಿಯ ಶವವನ್ನು ಹೂತು ಹಾಕಿದ್ದನು. (Crime News) ಅಷ್ಟಕ್ಕೇ ಸುಮ್ಮನಾಗದ ಈತ, ಪೊಲೀಸರ ದಾರಿ ತಪ್ಪಿಸಲು ‘ಹೆಂಡತಿ ನಾಪತ್ತೆಯಾಗಿದ್ದಾಳೆ’ ಎಂಬ ಕಟ್ಟುಕಥೆ ಕಟ್ಟಿ ನಾಟಕವಾಡಲು ಶುರುಮಾಡಿದ್ದನು. Read this also : ಪ್ರೇಯಸಿಯ ಕೊಂದ ಬಳಿಕ ಆತ್ಮ ಕರೆಯಲು ಯೂಟ್ಯೂಬ್ ಸರ್ಚ್! ಇಂದೋರ್ ಹತ್ಯಾಕಾಂಡದ ಬೆಚ್ಚಿಬೀಳಿಸುವ ಸತ್ಯಗಳು…!

ಪೊಲೀಸರ ದಾರಿ ತಪ್ಪಿಸಲು ನೀಡಿದ್ದ ದೂರು

ಸವದತ್ತಿಗೆ ಹೋಗಲು ಸಾಮಗ್ರಿ ತರಲೆಂದು ಕಿರಾಣಿ ಅಂಗಡಿಗೆ ಹೋದ ಪತ್ನಿ ಮರಳಿ ಬಂದಿಲ್ಲ ಎಂದು ಪ್ರಭು ಪೊಲೀಸರಿಗೆ ತಿಳಿಸಿದ್ದನು. ತಾನು ಮತ್ತು ಮಗ ಪಟ್ಟಣವೆಲ್ಲಾ ಹುಡುಕಿದ್ದೇವೆ (Crime News) ಹಾಗೂ ಸಂಬಂಧಿಕರಿಗೆ ಫೋನ್ ಮಾಡಿದ್ದೇವೆ ಎಂದು ನಟಿಸುತ್ತಾ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಈತನ ಅತಿಯಾದ ನಟನೆ ಮತ್ತು ಅನುಮಾನಾಸ್ಪದ ವರ್ತನೆಯೇ ಪೊಲೀಸರಿಗೆ ಸುಳಿವು ನೀಡುವಂತೆ ಮಾಡಿತು.

Crime news scene in Vijayapura where husband murdered wife and buried body

24 ದಿನಗಳ ಬಳಿಕ ಹೊರಬಂದ ಸತ್ಯದ ದರ್ಶನ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದಾಗ (Crime News) ಪ್ರಭು ರತ್ನಾಕರ್ ಮೇಲೆ ಸಂಶಯ ವ್ಯಕ್ತವಾಯಿತು. ಆತನನ್ನು ವಶಕ್ಕೆ ಪಡೆದು ಸತತ ವಿಚಾರಣೆ ನಡೆಸಿದಾಗ, ಸುಮಾರು 24 ದಿನಗಳ ಕಾಲ ಅಡಗಿಸಿಟ್ಟಿದ್ದ ಸತ್ಯ ಹೊರಬಿದ್ದಿದೆ. ತಾನೇ ಪತ್ನಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಕಾನೂನು ಪ್ರಕ್ರಿಯೆಯಂತೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Leave a Comment

Your email address will not be published. Required fields are marked *

Scroll to Top