Viral Video – ಇತ್ತೀಚಿಗೆ ಮಕ್ಕಳು ಸಿನೆಮಾಗಳ ಮೇಲೆ ತುಂಬಾನೆ ಪ್ರಭಾವಿತರಾಗುತ್ತಾರೆ. ಸಿನೆಮಾ ನೋಡುವುದು ಮಾತ್ರವಲ್ಲದೇ ಸಿನೆಮಾದಲ್ಲಿನ ಕೆಲವೊಂದು ಪಾತ್ರಗಳಲ್ಲಿ ತಾವು ಜೀವಿಸುವಂತೆ ನಡೆದುಕೊಳ್ಳುತ್ತಾರೆ. ಸಿನೆಮಾಗಳಿಂದ ಪ್ರೇರಿತರಾಗಿ ಹಿರೋ ಆಗಲು ಸಹ ಹೊರಡುತ್ತಾರೆ. ಜೊತೆಗೆ ಅವರಂತೆ ವರ್ತನೆ ಮಾಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ ಎನ್ನಲಾಗಿದೆ. ಇತ್ತೀಚಿಗೆ ತೆರೆಕಂಡ ಲಕ್ಕಿಭಾಸ್ಕರ್ ಎಂಬ ಸಿನೆಮಾ ನೋಡಿ ಸಿನೆಮಾದಲ್ಲಿ ಹಣ ಮಾಡುವಂತೆ (Viral Video) ಮಾಡಲು ಹೋಗಿದ್ದಾರೆ. ಬಳಿಕ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,
ಆಂಧ್ರದ ವಿಶಾಖಪಟ್ಟಣಂನಲ್ಲಿರುವ ಸೇಂಟ್ ಆನ್ಸ್ ಹೈಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿಗಳು ಇತ್ತೀಚಿಗೆ ತೆರೆಕಂಡ ಲಕ್ಕಿ ಭಾಸ್ಕರ್ ಸಿನೆಮಾ ನೋಡಿದ್ದಾರೆ. ದುಲ್ಕರ್ ಸಲ್ಮಾನ್ ಸಿನೆಮಾದಲ್ಲಿ ಭಾಸ್ಕರ್ ಪಾತ್ರವನ್ನು ಪೋಷಣೆ ಮಾಡಿದ್ದಾರೆ. ಈ ಸಿನೆಮಾದಲ್ಲಿ ಚಿತ್ರದ ನಾಯಕ ಹೇಗೆ ಹಣ ಸಂಪಾದನೆ ಮಾಡ್ತಾರೋ ಅದೇ ರೀತಿ ದುಡ್ಡು ಸಂಪಾದಿಸಲು ಮುಂದಾಗಿದ್ದಾರೆ. ಹಣ ಮಾಡೋಕೆ ಹಾಸ್ಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ. ನಾಲ್ಕು ಮಂದಿ ವಿದ್ಯಾರ್ಥಿಗಳು ಗೇಟ್ ಹಾರಿ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಸೋಮವಾರ ಮುಂಜಾನೆ ಸುಮಾರು 6.20ರ ಸಮಯದಲ್ಲಿ ಹಾಸ್ಟೆಲ್ ನಿಂದ ಪರಾರಿಯಾಗಿದ್ದಾರೆ. ಪರಾರಿಯಾದ ವಿದ್ಯಾರ್ಥಿಗಳನ್ನು ಬೋಡಪತಿ ಚರಣ್ ತೇಜ, ಗುಡಾಲ ರಘು, ನಕ್ಕಲ ಕಿರಾ ಕುಮಾರ್ ಮತ್ತು ಕಾರ್ತಿಕ್ ಎಂದು ಗುರ್ತಿಸಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡವನ್ನು ರಚಿಸಿದ್ದಾರೆ. ಮಂಗಳವಾರ ರಾತ್ರಿ ವಿದ್ಯಾರ್ಥಿಗಳನ್ನು ವಿಜಯವಾಡದಲ್ಲಿ ಪತ್ತೆ ಹಚ್ಚಿ, ಬಳಿಕ ವೈಜಾಗ್ ಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಸಿನೆಮಾ ಎಂಬುದು ಮನರಂಜನೆಗೆ ಬೇಕಾಗಿದೆ. ಅದರೆ ಅದರಲ್ಲಿ ಬರುವಂತಹ ಪಾತ್ರಗಳನ್ನು ತಮ್ಮ ಪಾತ್ರಗಳೆಂದು, ಅವರನ್ನು ಅನುಕರಣೆ ಮಾಡುವುದು ಸರಿಯಲ್ಲ. ಸಿನೆಮಾಗಳಿಂದ ಒಳ್ಳೆಯ ಸಂದೇಶವನ್ನು ಪಡೆದುಕೊಳ್ಳಬೇಕು ಅಥವಾ ಅದನ್ನು ಕೇವಲ ಮನರಂಜನೆಗೆ ಮಾತ್ರ ಸೀಮಿತ ಮಾಡಿಕೊಳ್ಳಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.