Reels – ಇಂದಿನ ಕಾಲದಲ್ಲಿ ಸೋಷಿಯಲ್ ಮಿಡಿಯಾ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ಸೋಷಿಯಲ್ ಮಿಡಿಯಾ ಆದಾಯದ ಮೂಲವಾಗಿದ್ದರೇ, ಕೆಲವರಿಗೆ ಇದೊಂದು ಹುಚ್ಚು ಎಂದೇ ಹೇಳಬಹುದು. ಈ ಸೋಷಿಯಲ್ ಮಿಡಿಯಾಗಳ ರೀಲ್ಸ್ ಹುಚ್ಚಾಟಕ್ಕೆ ಅನೇಕರು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದೆ. ಹೆಂಡತಿಯ ರೀಲ್ಸ್ (Reels) ಹುಚ್ಚಾಟಕ್ಕೆ ಬೇಸರಗೊಂಡ ಗಂಡ ಆಕೆಗೆ ಇಟ್ಟಿಗೆಯಿಂದ ಹೊಡೆದು, ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ಮಹಿಳೆಯನ್ನು ಸೀಮಾ ಎಂದು ಗುರ್ತಿಸಲಾಗಿದೆ. ಆಕೆಯ ಪತಿ ರಾಜು ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಮೀರತ್ ನ ಕಂಕೇರಖೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಶೋಭಾಪುರ ಪ್ರದೇಶದ ಲಖ್ವಾಯಾ ಎಂಬ ಗ್ರಾಮದ ರಾಜು ಹಾಗೂ ಸೀಮಾ ಜೋಡಿ ತನ್ನ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಸೀಮಾಗೆ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿತ್ತಂತೆ. ಸೀಮಾ 24 ಗಂಟೆಗಳ ಅವಧಿಯಲ್ಲಿ 13 ರೀಲ್ಸ್ ಅಪ್ಲೋಡ್ ಮಾಡಿದ್ದು, ಈ ವಿಡಿಯೋಗಳಿಗೆ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ ಗಳು ಬರುತ್ತಿತ್ತಂತೆ. ಜೊತೆಗೆ ಸೀಮಾಗೆ ಕೆಲವು ಮಂದಿ ಕರೆ ಮಾಡಿ ಮಾತನಾಡಿದ್ದರಂತೆ.
ಇನ್ನೂ ಈ ವಿಚಾರ ಸೀಮಾ ಪತಿ ರಾಜುಗೆ ತಿಳಿದಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿ ದಂಪತಿಯ ನಡುವೆ ಬಾರಿ ಗಲಾಟೆ ಸಹ ನಡೆದಿತ್ತಂತೆ. ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ರಾಜು ಸೀಮಾಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ತನ್ನ ಮೂವರು ಹೆಣ್ಣು ಮಕ್ಕಳು ಮುಂದೆಯೇ ಪತ್ನಿಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಮೃತಳ ಸಹೋದರ, ಅವರ ಮಕ್ಕಳು ಹಾಗೂ ನೆರೆಹೊರೆಯವರು ನೀಡಿದ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.