ಇಂದು ಬಹುತೇಕರು ಸ್ಮಾರ್ಟ್ ಪೋನ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ರೀಲ್ಸ್ ನೋಡುವವರ ಸಂಖ್ಯೆಯ ಜೊತೆಗೆ ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಕೆಲವರು ಮಾಡುವ ರೀಲ್ಸ್ ಗಳಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ. ರೀಲ್ಸ್ ಮಾಡುವವರು ಬಸ್ ಗಳು, ರೈಲ್ ಗಳು, ಮೆಟ್ರೋ, ಬಸ್ ಸ್ಟಾಪ್ ಗಳಲ್ಲಿ ರೀಲ್ಸ್ ಮಾಡಿ ಕಿರಿಕಿರಿ ಮಾಡುತ್ತಿದ್ದ ರೀಲ್ಸ್ ಹುಚ್ಚರು ಇದೀಗ ಆಸ್ಪತ್ರೆಗೂ ಕಾಲಿಟ್ಟಿದ್ದಾರೆ. ಇದೀಗ ಆಸ್ಪತ್ರೆಯೊಂದರಲ್ಲಿ ರೋಗಿಗಳ ಮುಂದೆ ಯುವತಿಯೊಬ್ಬಳು (Viral Reels) ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ವರ್ತನೆಯ ವಿರುದ್ದ ಕಿಡಿಕಾರಿದ್ದಾರೆ.
ಇತ್ತೀಚಿಗೆ ಸಮಾಜದಲ್ಲಿ ರೀಲ್ಸ್ ಹುಚ್ಚಿಯರ ಕಾಟ ಹೆಚ್ಚಾಗಿದೆ ಎಂದೇ ಹೇಳಬಹುದಾಗಿದೆ. ರೀಲ್ಸ್ ಮಾಡಿ ಫೇಮಸ್ ಆಗಲು ಅನೇಕರು, ರೈಲು, ಮೆಟ್ರೋ, ಬಸ್ ಸ್ಟಾಂಡ್ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶದಲ್ಲಿ ರೀಲ್ಸ್ ಮಾಡುತ್ತಾ ಜನರಿಗೆ ಕಿರಿಕಿರಿ ಮಾಡುತ್ತಿರುತ್ತಾರೆ. ಇದೀಗ ಸಾರ್ವಜನಿಕ ಪ್ರದೇಶವಾದ ಆಸ್ಪತ್ರೆಯಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಿದ್ದಾಳೆ. ಇಲ್ಲೊಬ್ಬ ಯುವತಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಆದರೂ ಅಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಮಹಿಳೆಯ ವರ್ತನೆಗೆ ಬೇಸರ ವ್ಯಕ್ತಪಡಿಸಿ, ಕಾಮೆಂಟ್ ಗಳ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: https://x.com/desimojito/status/1837546749797233112
ಇನ್ನೂ ಈ ಸಂಬಂಧ ಪೋಸ್ಟ್ ಒಂದನ್ನು desimojito ಎಂಬ ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಸೆ.21 ರಂದು ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಯುವತಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆ. ಕಫ್ತಾನ್ ತೊಟ್ಟ ಯುವತಿ ವಾರ್ಡ್ ನಲ್ಲಿರುವ ಇತರೆ ರೋಗಿಗಳ ಮುಂದೆ ರೀಲ್ಸ್ ಮಾಡಿದ್ದಾಳೆ. ಅನಾರೋಗ್ಯದ ನಿಮಿತ್ತ ಆಕೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರೂ ವಿಶ್ರಾಂತಿ ಪಡೆಯದೇ, ಬೇರೆ ರೋಗಿಗಳ ಮುಂದೆ ನಾಚಿಕೆಯಿಲ್ಲದೇ ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕೆಯ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಮೊದಲು ಈ ರೀತಿಯಲ್ಲಿ ರೀಲ್ಸ್ ಮಾಡಿ ಜನರಿಗೆ ಕಿರಿಕಿರಿ ಮಾಡುವವರನ್ನು ಬ್ಯಾನ್ ಮಾಡಬೇಕು. ರೋಗಗಳನ್ನು ಗುಣಮುಖ ಮಾಡುವ ಆಸ್ಪತ್ರೆಯಲ್ಲೂ ರೀಲ್ಸ್ ಹುಚ್ಚಿಯರ ಕಾಟ ಶುರುವಾಗಿದೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.