Vayve Eva – ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ವೈವ್ ಮೊಬಿಲಿಟಿಯು ಭಾರತದ ಮೊದಲ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ವಾಹನ ಇವಿಎ ಅನ್ನು ಪರಿಚಯಿಸಿದೆ. ಇದು ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರು ಎಂದು ಹೇಳಬಹುದಾಗಿದೆ. ಈ ಸೋಲಾರ್ ಎಲೆಕ್ಟ್ರಿಕ್ ಕಾರಿನ ಹೆಸರು ವೇವ್ ಈವ್ (Vayve Eva). ಇದು ಸೌರ ಶಕ್ತಿಯಿಂದ ಚಲಿಸುತ್ತದೆ. ಇದರ ಬೆಲೆ ಕೇವಲ 3.25 ಲಕ್ಷ ರೂ ಮಾತ್ರ. ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಮೈಲೇಜ್ ನೀಡುತ್ತದೆಯಂತೆ. EVA ಕಾರನ್ನು ಮೂರು ವಿಭಿನ್ನ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. 9 kWh ( ನೋವಾ ), 12.6 kWh ( ಸ್ಟೆಲ್ಲಾ ) ಮತ್ತು 18 kWh ( ವೇಗಾ ). ವೇರಿಯಂಟ್ ಗೆ ಅನುಗುಣವಾಗಿ ವಾಹನದ ಬೆಲೆ 3.25 ಲಕ್ಷ ಮತ್ತು 6 ಲಕ್ಷ (ಎಕ್ಸ್ ಶೋ ರೂಂ) ಆಗಿದೆ.
ಇನ್ನೂ ಈ ಕಾರು ತುಂಬಾ ಚಿಕ್ಕದು. ಇಬ್ಬರು ದೊಡ್ಡವರು ಹಾಗೂ ಒಂದು ಮಗು ಕೂರಬಹುದು. ಇದು ಎಂಜಿ ಕಾಮೆಟ್ ಗೆ ಪೈಪೋಟಿ ಕೊಡುತ್ತದೆ ಎನ್ನಲಾಗುತ್ತಿದೆ. ಇಂದಿನ ಕಾಲಕ್ಕೆ ತಕ್ಕಂತೆ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಟ್ರಾಫಿಕ್ ನಿಂದ ಕೂಡಿದ ರಸ್ತೆಗಳಲ್ಲಿನ ಸವಾಲುಗಳನ್ನು ಎದುರಿಸಲು ಈ ಕಾರು ಉತ್ತಮ ಆಯ್ಕೆ ಎನ್ನಬಹುದಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೇ ಇದು 250 ಕಿ.ಮಿ ದೂರ ಚಲಿಸಬಹುದಂತೆ. ಜೊತೆಗೆ ಕಾರಿನಲ್ಲಿ ಕಾರಿನಲ್ಲಿ ಲಿಕ್ವಿಡ್ ಬ್ಯಾಟರಿ ಕೂಲಿಂಗ್, ಲ್ಯಾಪ್‌ಟಾಪ್ ಚಾರ್ಜರ್, ಆ್ಯಪಲ್ ಕಾರ್ ಪ್ಲೇ TM, ಪನೋರಮಿಕ್ ಗ್ಲಾಸ್ ಸನ್ ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ನಿರ್ವಹಣಾ ವೆಚ್ಚ ಪ್ರತಿ ಕಿ.ಮೀ ಗೆ 0.5 ರೂ. ಆಗಿದೆಯಷ್ಟೆ. ಇದು ಪೆಟ್ರೋಲ್ ಕಾರಿಗಿಂತ ತುಂಬಾ ಅಗ್ಗವಾಗಿದೆ ಎನ್ನಲಾಗುತ್ತಿದೆ.