Viral Video – ಈ ಕಾಲವನ್ನು ಸೋಷಿಯಲ್ ಮಿಡಿಯಾ ಕಾಲ ಎಂದೇ ಕರೆಯಬಹುದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಪ್ರತಿನಿತ್ಯ ನುರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಈ ವಿಡಿಯೋಗಳಲ್ಲಿ ಹಾವುಗಳು, ಮೊಸಳೆ, ಪಕ್ಷಿಗಳು, ಕೋತಿಗಳು ಹೀಗೆ ಅನೇಕ ವಿಭಿನ್ನ ಹಾಗೂ ವಿಚಿತ್ರ ರೀತಿಯ ವಿಡಿಯೋಗಳು ಹರಿದಾಡುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾಡಾನೆಯೊಂದು ಮನೆಯೊಳಗೆ ನುಗ್ಗಿದ್ದು, ಮನೆಯಲ್ಲಿದ್ದ ಗ್ಯಾಸ್ ಸಿಲಂಡರ್ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಮಾಡಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಷಿಯಲ್ ಮಿಡಿಯಾದಲ್ಲಿ ಕಾಡು ಪ್ರಾಣಿಗಳು ಊರುಗಳ ಮೇಲೆ ಬಿದ್ದು ವಿಧ್ವಂಸ ಮಾಡುವಂತಹ ಕೆಲವೊಂದು ವಿಡಿಯೋಗಳು ಹರಿದಾಡಿರುತ್ತದೆ. ಅದರಂತೆ ಕಾಡಾನೆ ಸಹ ಆಹಾರ, ನೀರಿಗಾಗಿ ಕಾಡಿನಲ್ಲಿ ವಾಸ ಮಾಡುವಂತಹ ಜನರ ಮನೆಗೆಳಿಗೆ ಆನೆಗಳು ನುಗುತ್ತವೆ. ಊರಿನೊಳಗೆ ನುಗ್ಗಿದ ಆನೆಯೊಂದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಡೆದ ಘಟನೆ ತಮಿಳುನಾಡಿನ ಕೋಯಂಬತ್ತೂರಿನಲ್ಲಿ ನಡೆದಿದ್ದು ಎನ್ನಲಾಗುತ್ತಿದೆ. ಕಳೆದ ಜ.18 ರ ರಾತ್ರಿ ಕಾಡಾನೆಯೊಂದು ಮನೆಯೊಂದರೊಳಗೆ ನುಗ್ಗಿದೆ. ಆನೆ ಮನೆಗೆ ನುಗ್ಗಿದ ಕೂಡಲೇ ಮನೆಯಲ್ಲಿದ್ದ ನಾಲ್ಕು ಮಂದಿ ಭಯಭೀತರಾಗಿದ್ದಾರೆ. ಆದರೆ ಆ ನಾಲ್ಕು ಮಂದಿ ಆನೆಗೆ ಕಾಣಿಸಿದಂತೆ ಎಚ್ಚರಿಕೆ ವಹಿಸಿದ್ದಾರೆ. ನಂತರ ಆ ಆನೆ ಏನು ಮಾಡುತ್ತದೆ ಎಂಬುದನ್ನು ತಮ್ಮ ಪೋನ್ ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಅದೃಷ್ಟಾವಶಾತ್ ಆ ಆನೆಗೆ ಮನೆಯೊಳಗೆ ಪ್ರವೇಶಿಸೋಕೆ ಸಾಧ್ಯವಾಗಿಲ್ಲ. ಆದರೆ ಒಂದು ಪಾದವನ್ನು ಮನೆಯೊಳಗೆ ಹಾಕಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ನಾಶ ಮಾಡಿದೆ. ಅಡುಗೆ ಸಾಮಾಗ್ರಿಗಳು, ಗ್ಯಾಸ್ ಸ್ಟೌವ್ ಎಲ್ಲವನ್ನು ನಾಶ ಮಾಡಿದೆ. ಸ್ಟೌವ್ ಮೇಲಿದ್ದ ಅನ್ನವನ್ನು ಸಹ ನಾಶಮಾಡಿದೆ. ತನಗೆ ಏನು ಆಹಾರ ಸಿಗದೇ ಇದ್ದ ಕಾರಣದಿಂದ ಆ ಆನೆ ಮತ್ತಷ್ಟು ಆಕ್ರೋಷಗೊಂಡು ಮನೆಯೊಳಗೆ ನುಗ್ಗಲು ಯತ್ನಿಸಿದೆ. ಆ ಸಮಯದಲ್ಲಿ ಮನೆಯಲ್ಲಿದ್ದ ಓರ್ವ ಅಕ್ಕಿ ಮೂಟೆಯನ್ನು ಆನೆ ಮುಂದೆ ಎಸೆದಿದ್ದಾನೆ. ನಂತರ ಆ ಅಕ್ಕಿ ಮೂಟೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋಗುತ್ತದೆ. ಇದರಿಂದ ಮನೆಯಲ್ಲಿದ್ದ ನಾಲ್ಕು ಮಂದಿ ಸೇಫ್ ಆಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.