HomeNationalMarriage: ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ, ವೈರಲ್ ಆದ ಪೊಟೋಸ್….!

Marriage: ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ, ವೈರಲ್ ಆದ ಪೊಟೋಸ್….!

Marriage – ಇತ್ತೀಚಿಗೆ ಕೆಲವೊಂದು ಮದುವೆಗಳು ಅದ್ದೂರಿಯಾಗಿ ನಡೆಸಲು ವಿವಿಧ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತದೆ. ಕೆಲವರಂತೂ ಮದುವೆ ಮಾಡಲು ವರ್ಷಾನುಗಟ್ಟಲೇ ಪ್ಲಾನ್ ಗಳನ್ನು ಮಾಡುತ್ತಾರೆ. ಜೊತೆಗೆ ಕೋಟಿಗಟ್ಟಲೇ ಹಣ ಸಹ ವ್ಯಯಿಸುತ್ತಾರೆ. ಇದೀಗ ಅಂತಹುದೇ ವಿಭಿನ್ನ ಮದುವೆಯೊಂದು ನಡೆದಿದೆ. ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ (Marriage) ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Under sea marriage in dubai 0

ತಮ್ಮ ಜೀವನದಲ್ಲಿ ಮದುವೆ ಎಂಬ ಕ್ಷಣವನ್ನು ಜೀವನ ಪರ್ಯಂತ ಸ್ಮರಣೀಯವಾಗಿರಿಸಲು ವಿಶೇಷವಾಗಿ ಹಾಗೂ ಅದ್ದೂರಿಯಾಗಿ ಮದುವೆ (Marriage)  ಮಾಡಿಕೊಳ್ಳುತ್ತಾರೆ. ಕೆಲವರು ಕೋಟಿಗಟ್ಟಲೇ ಹಣ ಖರ್ಚು ಮಾಡಿ ರಾಯಲ್ ಥೀಮ್ ನಲ್ಲಿ ಅದ್ದೂರಿಯಾಗಿ ಮದುವೆಯಾದರೇ, ಮತ್ತೆ ಕೆಲವರು ತಮ್ಮ ನೆಚ್ಚಿನ ಸ್ಥಳ (Marriage)  ರಿದಂತೆ ವಿದೇಶಗಳಲ್ಲೂ ಡೆಸ್ಟಿನೇಷನ್ ವೆಡ್ಡಿಂಗ್ ಹೆಸರಿನಲ್ಲಿ ಮದುವೆಯಾಗುತ್ತಾರೆ. ಅದೇ ರೀತಿ ಇಲ್ಲೊಂದು ವಿಭಿನ್ನ ಮದುವೆಯೊಂದು ನಡೆದಿದೆ. ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ ಆಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶಿಷ್ಟ (Marriage) ಮದುವೆ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.

ಜೆಡ್ಡಾದ ಕೆಂಪು ಸಮುದ್ರದ ಆಳದಲ್ಲಿ ಸೌದಿ ಅರೇಬಿಯಾದ ಹಸನ್ ಅಬು ಅಲ್ ಓಲಾ ಹಾಗೂ ಯಾಸ್ಮಿನ್ ಮದುವೆ ವಿಶೇಷ ರೀತಿಯಲ್ಲಿ ನಡೆಯಿತು. ಸೌದಿ ಅರೇಬಿಯಾದ ಸಮುದ್ರದ ಆಳದಲ್ಲಿ ನಡೆದ ಮೊದಲ ಮದುವೆ ಎಂಬ ಹೆಗ್ಗಳಿಕೆಗೆ ಈ ಜೋಡಿಯ ಮದುವೆ ಪಾತ್ರವಾಗಿದೆ. ಸದ್ಯ ಈ ಮದುವೆಯ ಸುದ್ದಿ ಎಲ್ಲಾ ಕಡೆ (Marriage) ವೈರಲ್ ಆಗುತ್ತಿದೆ. ಇದೊಂದು ಮರೆಯಲಾಗದ ಅನುಭವ ಎಂದು ವರ ಹಸನ್ ತಮ್ಮ ಖುಷಿಯನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ವೈರಲ್​​ ಫೋಟೋ ಇಲ್ಲಿದೆ ನೋಡಿ:  Click Here

ಇನ್ನೂ ಹಸನ್ ಹಾಗೂ ಯಾಸ್ಮಿನ್ ಇಬ್ಬರಿಗೂ ಸ್ಕೂಬಾ ಡೈವಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ತುಂಬಾನೆ ಆಸಕ್ತಿಯನ್ನು ಹೊಂದಿದ್ದರು. ಈ ಕಾರಣದಿಂದಲೇ ತಮ್ಮ ಮದುವೆಯನ್ನು ವಿಭಿನ್ನವಾಗಿ ಮಾಡಿಕೊಳ್ಳಲು ತೀರ್ಮಾನಿಸಿಕೊಂಡರು. ಅದರಂತೆ ಸಮುದ್ರಾಳದಲ್ಲಿ ಮದುವೆಯಾಗಬೇಕೆಂದು (Marriage) ಇಬ್ಬರು ಪ್ಲಾನ್ ಮಾಡಿಕೊಂಡರು. ತಮ್ಮ ಇಷ್ಟದಂತೆ ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ಯಾಪ್ಟನ್‌ ಫೈಸಲ್‌ ಫ್ಲಾಂಬನ್‌ ನೇತೃತ್ವದ ಸ್ಥಳೀಯ ಡೈವರ್‌ಗಳ ಗುಂಪು ಈ ವಿಶಿಷ್ಟ ವಿವಾಹವನ್ನು ಆಯೋಜನೆ ಮಾಡಿತ್ತು. ಈ ವಿಶಿಷ್ಟ ಮದುವೆಯಲ್ಲಿ ದಂಪತಿಯ ಆಪ್ತರು ಮತ್ತು ಡೈವಿಂಗ್‌ ಪಟುಗಳು ಭಾಗವಹಿಸಿದ್ದರು. (Marriage) ಸದ್ಯ ಈ ಮದುವೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular