...
HomeStateSad News: ಸತತ 14 ಗಂಟೆಗಳ ಕಾರ್ಯಚರಣೆ ನಂತರ ವಿದ್ಯಾರ್ಥಿ ಮೃತದೇಹ ಪತ್ತೆ….!

Sad News: ಸತತ 14 ಗಂಟೆಗಳ ಕಾರ್ಯಚರಣೆ ನಂತರ ವಿದ್ಯಾರ್ಥಿ ಮೃತದೇಹ ಪತ್ತೆ….!

Sad News – ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿ ರಂಗನ ಬಾವಿ ಕಲ್ಯಾಣಿಯಲ್ಲಿ ಈಜಲು ಹೋಗಿ ಮೃತಪಟ್ಟ ವೆಂಕಟಾಚಲಪತಿ ಎಂಬ ವಿದ್ಯಾರ್ಥಿಯ ಮೃತದೇಹ ಸುಮಾರು 14 ಗಂಟೆಗಳ (Sad News) ನಿರಂತರ ಕಾರ್ಯಾಚರಣೆಯ ನಂತರ ಪತ್ತೆಯಾಗಿದೆ. ಅ.23ರ ಮದ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮೃತ ದೇಹ ಪತ್ತೆಯಾಗದ ಕಾರಣ ಕಲ್ಯಾಣಿಯಲ್ಲಿರುವ ನೀರು ಖಾಲಿ ಮಾಡಿ ಮೃತದೇಹವನ್ನು ಪತ್ತೆಹಚ್ಚಲಾಯಿತು.

ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿರಂಗನ ಬಾವಿ ಕಲ್ಯಾಣಿಯಲ್ಲಿ ಗುಡಿಬಂಡೆ ಐಟಿಐ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ (Sad News)  ವೆಂಕಟಾಚಲಪತಿ ಈಜಲು ಹೋಗಿ ಮೃತಪಟ್ಟಿದ್ದ. ಕಾಲೇಜಿನಿಂದ ಹಾಸ್ಟೆಲ್ ಗೆ ಮಧ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಹೋಗುವ ಮುನ್ನ ಸಮೀಪದ ಬಿಳಗಿರಿ ರಂಗನ ಬಾವಿಯಲು ಈಜಲು ಹೋಗಿದ್ದಾನೆ. (Sad News)  ಕಲ್ಯಾಣಿಗೆ ಬಿದ್ದು ಎರಡು ಭಾರಿ ಮೆಲಕ್ಕೆ ಬಂದು ಮತ್ತೆ ನೀರಿನ ಒಳಗಡೆ ಹೋದವರು ಮೇಲೆ ಬರದೆ ಇದ್ದಾಗ ಗಾಬರಿಗೊಂಡ ಸ್ನೇಹಿತರು ಕೂಗಿಕೊಂಡು ವಿದ್ಯಾರ್ಥಿನಿಲಯದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದರು. ಬಳಿಕ ಸಿಬ್ಬಂದಿ ಪೊಲೀಸರಿಗೆ ಮತ್ತು ಅಗ್ನಿಶಾಮಕದಳದ ಸಿಬ್ದಂದಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ನೀರಿಗೆ ಇಳಿದು ಕಾರ್ಯಚರಣೆಗೆ ಇಳಿದಿದ್ದರು. (Sad News)  ಮದ್ಯಾಹ್ನ 2 ರಿಂದ ರಾತ್ರಿ 9 ವರೆಗೆ ಸಿಗದ ಕಾರಣ ಕಲ್ಯಾಣಿ ನೀರನ್ನು ಹೊರಕುವಂತೆ ಸೂಚಿದ ನಂತರ ಗುರುವಾರ ಬೆಳಿಗ್ಗೆ 4  ಗಂಟೆ ವರೆಗೆ ಸತತ 14 ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿ ಮೃತದೇಹದ ಹೊರ ತೆಗೆದಿದ್ದಾರೆ.

 

ಈ ವೇಳೆ ಕಲ್ಯಾಣಿಯ ನೀರನ್ನ 6 ಪಂಪ್ ಸೆಟ್ ಮೂಲಕ ನೀರನ್ನ ಹೊರಗೆ ಹಾಕಿ ಶವ ಹುಡುಕುವ ಕೆಲಸಕ್ಕೆ (Sad News)  ನಡೆಸಿದರು. ಇನ್ನು ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾಪಂಚಾಯಿತಿ ಸಿಇಓ ಪ್ರಕಾಶ್ ಜಿ ನಿಟ್ಟಾಲಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತೇಜಾನಂದರೆಡ್ಡಿ, ಡಿವೈಎಸ್.ಪಿ ಶಿವಕುಮಾರ್, ಗುಡಿಬಂಡೆ ತಹಶೀಲ್ದಾರ್ ಸಿಗ್ಬತುಲ್ಲ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವ ಹುಡುಕಲು ಎಲ್ಲಾ ರೀತಿಯ ಕ್ರಮಕ್ಕೆ ಸೂಚಿಸಿದ್ದರು. ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ನದಿ, ಕೆರೆ, ಕುಂಟೆ, ಬಾವಿಗಳು ತುಂಬಿದ್ದು ಪೋಷಕರು, ಶಾಲಾ ಕಾಲೇಜು (Sad News)  ಶಿಕ್ಷಕರು ತಮ್ಮ ಮಕ್ಕಳನ್ನು ನೀರಿನ ಕಡೆಗೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

Most Popular

Seraphinite AcceleratorOptimized by Seraphinite Accelerator
Turns on site high speed to be attractive for people and search engines.