HomeNationalCrime News: ಪತಿಗೆ ಗುಟ್ಕಾ ಚಟ, ಬೇಸತ್ತ ಪತ್ನಿ ನೇಣಿಗೆ, ಕರ್ವಾ ಚೌತ್ ನಂದು ಪೂಜೆ...

Crime News: ಪತಿಗೆ ಗುಟ್ಕಾ ಚಟ, ಬೇಸತ್ತ ಪತ್ನಿ ನೇಣಿಗೆ, ಕರ್ವಾ ಚೌತ್ ನಂದು ಪೂಜೆ ಮುಗಿಸಿ ಆತ್ಮಹತ್ಯೆಗೆ ಶರಣು…!

ಕೆಲವರಿಗೆ ಗುಟ್ಕಾ ಸೇವನೆ, ಮದ್ಯ ಸೇವನೆ ಸೇರಿದಂತೆ ಹಲವು ದುಶ್ಚಟಗಳಿರುತ್ತವೆ. ಇದರಿಂದ ಹಲವಾರು ಸಮಸ್ಯೆಗಳು ಎದುರಾದರೂ ಸಹ ಆ ಚಟಗಳನ್ನು ಮಾತ್ರ ಬಿಡುವುದಿಲ್ಲ. ಗುಟ್ಕಾ ಸೇವನೆ ಮಾಡುವ ಪತಿಯ ವಿರುದ್ದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುಟ್ಕಾ ಸೇವನೆಯ ವಿಚಾರಕ್ಕೆ ಜಗಳ ಆರಂಭವಾಗಿ ಆ ಜಗಳ ಪತ್ನಿಯ (Crime News) ಆತ್ಮಹತ್ಯೆಯಿಂದ ಅಂತ್ಯಗೊಂಡಿದೆ. ಕರ್ವಾ ಚಥ್ ದಿನದಂದೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕಳೆದ ಭಾನುವಾರ (ಅ.20) ರ ರಾತ್ರಿ ಉತ್ತರಪ್ರದೇಶದ ಹಮೀರ್‍ ಪುರ ವ್ಯಾಪ್ತಿಯ ಜಲಾಲ್ ಪುರ ಎಂಬ ಗ್ರಾಮದ ಸರಿಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕರ್ವಾ ಚೌತ್ ದಿನಂದು ದಿನವಿಡೀ ಉಪವಾಸದಲ್ಲಿದ್ದ ಮಹಿಳೆ ಸಂಜೆಯ ವೇಳೆ ಪತ್ನಿಗೆ ಪೂಜೆ ಮಾಡಲು ಬಂದಿದ್ದಾಳೆ. ಈ ವೇಳೆ ಆಕೆಯ ಪತಿ ಗುಟ್ಕಾ ಜಗಿಯುತ್ತಿದ್ದಾನೆ. ಅದನ್ನು ಕಂಡ ಪತ್ನಿ ಬೇಸರಗೊಂಡಿದ್ದಾಳೆ. ಈ ವಿಚಾರದಿಂದಲೇ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ಪೂಜಾ ವಿಧಿವಿಧಾನ ಮುಗಿಸಿ ರಾತ್ರಿ 12 ಗಂಟೆಯ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

women suicide for husband having gutka 0

ಇನ್ನೂ ಮೃತ ಮಹಿಳೆಯನ್ನು ಸಾರಿಕಾ (24) ಎಂದು ಗುರ್ತಿಸಲಾಗಿದೆ. ಮೃತ ದುರ್ದೈವಿ ಸಾರಿಕಾ ಜಲಾಲ್ ಪುರ ನಿವಾಸಿಯಾದ ಸುಲಭ್ ನಾಮದೇವ್ ನನ್ನು 2021 ರಲ್ಲಿ ಪ್ರೀತಿಸಿ ಮದುವೆಯಾಗಿದ್ದಳು. ಪತಿಗೆ ಗುಟ್ಕಾ ಜಗಿಯುವ ಅಭ್ಯಾಸ ಹೆಚ್ಚಾಗಿಯೇ ಇತ್ತು. ಈ ಕಾರಣದಿಂದ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳ ಸಹ ನಡೆದಿದೆ ಎನ್ನಲಾಗಿದೆ. ಅದೇ ರೀತಿ ಕರ್ವಾ ಚೌತ್ ದಿನದಂದು ಸಹ ಮತ್ತೆ ಗುಟ್ಕಾ ವಿಚಾರದಿಂದ ಜಗಳವಾಗಿದೆ. ನಂತರ ಪೂಜಾ ವಿಧಿವಿಧಾನಗಳನ್ನು ಮುಗಿಸಿದ್ದಾರೆ. ದಂಪತಿ ಇಬ್ಬರೂ ರಾತ್ರಿ ಊಟ ಮಾಡದೇ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದ್ದಾರೆ. ಸೋಮವಾರ ಬೆಳಿಗ್ಗೆ ಪತಿ ಎದ್ದು ನೋಡಿದಾಗ ಪತ್ನಿ ಮಲಗಿದ್ದ ಕೋಣೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಇನ್ನೂ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt