Bulls Viral Video: ರೈಲ್ವೆ ಗೇಟ್ ಬಳಿ ಹಸುಗಳ ಕಾಳಗ, ಮಧ್ಯೆ ಬಂದ ರೈಲು, ಬಳಿಕ ಆಗಿದ್ದೇನು ಗೊತ್ತಾ?

ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ಭಾರಿ ಸದ್ದು ಮಾಡುತ್ತಿರುತ್ತವೆ. ಇದೀಗ ರೈಲು ಗೇಟ್ ಬಳಿ ಎರಡು ಹಸುಗಳ Bulls Viral Video ಭೀಕರ ಫೈಟ್ ಮಾಡಿದೆ. ಆ ರೈಲು ಮಾರ್ಗದಲ್ಲಿ ಎಕ್ಸ್ ಪ್ರೆಸ್ ರೈಲ್ ಬರುತ್ತಿದೆ. ರೈಲು ಬರುತ್ತಿರುವ ಸದ್ದಿಗೂ ಕಿವಿಗೊಡದೇ ಎರಡೂ ಹಸುಗಳು ಭೀಕರ ಯುದ್ದವೇ ಮಾಡುತ್ತಿದೆ. ಕೊಂಬುಗಳ ಮೂಲಕ ಗುದ್ದಾಡುತ್ತಿದ್ದರೇ, ಒಂದು ರೈಲು ದೂರವಾಗಿ ಬರುತ್ತಿದೆ. ಬಳಿಕ ಏನಾಯ್ತು ಗೊತ್ತಾ? ಮುಂದೆ ಓದಿ, ಅಂದಹಾಗೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Bulls Fighting at railway gate

ಸದ್ಯ ವೈರಲ್ (Viral Video) ಆಗುತ್ತಿರುವ ವಿಡಿಯೋದಲ್ಲಿರುವಂತೆ ಎರಡು ಹಸುಗಳು ಗುದ್ದಾಡುತ್ತಿವೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಎರಡು ಹಸುಗಳು ಇದ್ದಕ್ಕಿದ್ದಂತೆ ದೊಡ್ಡ ಕಾಳಗಕ್ಕೆ ಇಳಿದಿವೆ. ಎರಡೂ ಹಸುಗಳು ತಮ್ಮ ಚೂಪಾದ ಕೊಂಬುಗಳ ಮೂಲಕ ಡಿಕ್ಕಿ ಹೊಡೆದುಕೊಳ್ಳುತ್ತಾ ಒಂದನ್ನೊಂದು ತಳ್ಳುತ್ತಿವೆ. ಈ ಕಾಳಗ ನೋಡಿದ ಅಲ್ಲಿದ್ದ ಜನರು ನಮ್ಮ ಮೇಲೆ ಎಲ್ಲಿ ಬರುತ್ತೋ ಎಂದು ಭಯದಿಂದ ನಡುಗಿದ್ದಾರೆ. ಇನ್ನೂ ಆ ಎರಡೂ ಹಸುಗಳು ತಮ್ಮ ಯುದ್ದವನ್ನು ಮುಂದುವರೆಸುತ್ತಿದ್ದರೇ, ಅತ್ತ ರೈಲು ಹಳ್ಳಿಗಳ ಮೇಲೆ ಓಂದು ರೈಲು ಬರುತ್ತಿದೆ. ಆದರೂ ಈ ಹಸುಗಳು ಮಾತ್ರ ತಮ್ಮ ಕಾಳಗವನ್ನು ನಿಲ್ಲಿಸಿಲ್ಲ.

ಈ ವಿಡಿಯೋ ನೋಡಲು ಕ್ಲಿಕ್ ಮಾಡಿ: https://x.com/Ananth_IRAS/status/1809210047148552305

ಈ ಸಮಯದಲ್ಲಿ ರೈಲು ಚಾಲಕ ಹಸುಗಳ ಕಾಳಗವನ್ನು ದೂರದಿಂದಲೇ ನೋಡಿ ರೈಲಿನ ವೇಗವನ್ನು ಕಡಿಮೆ ಮಾಡಿದ್ದಾನೆ. ಸರಿಯಾಗಿ ಹಸುಗಳ ಬಳಿ ಬಂದ ಕೂಡಲೇ ಬ್ರೇಕ್ ಹಾಕಿದ್ದಾನೆ. ಅನೇಕರು ಕೊಂಚ ಸಮಯ ಹೋರಾಡಿ ಬಳಿಕ ಅವೇ ಹೋಗುತ್ತವೆ ಎಂದು ಭಾವಿಸಿದ್ದರು. ಆದರೆ ಸುಮಾರು ಸಮಯ ಆ ಹಸುಗಳು ತಮ್ಮ ಹೊಡೆದಾಟ ನಿಲ್ಲಿಸಿಲ್ಲ. ತುಂಬಾ ಸಮಯದ ಬಳಿಕ ಆ ಹಸುಗಳು ಅಲ್ಲಿಂದ ಪಕ್ಕಕ್ಕೆ ಸರಿದವು. ಬಳಿಕ ಈ ಘಟನೆ ತಣ್ಣಾಗಾಯ್ತು. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿರೋದು ಎಂಬುದು ಮಾತ್ರ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

Next Post

Crime News: ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಕೊಲೆ, ಅರಣ್ಯದಲ್ಲಿ ಪತ್ತೆಯಾದ ಪೂಜಾ ಮೃತ ದೇಹ….!

Sun Jul 7 , 2024
ಕೆಲವು ದಿನಗಳ ಹಿಂದೆಯಷ್ಟೆ ನಾಪತ್ತೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಮೃತ ದೇಹ (crime news) ಅರಣ್ಯದಲ್ಲಿ ಪತ್ತೆಯಾಗಿದೆ. ಜೂನ್ 30 ರಂದು ಕಾಣೆಯಾಗಿದ್ದ ಪೂಜಾ (24) ಮೃತದೇಹ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಆಗುಂಬೆಯ ಕುಶಾಲ್ ಎಂಬುವವರ ಪುತ್ರಿ ಪೂಜಾ ಕಾಣೆಯಾಗಿದ್ದಾಗಿ ದೂರು ನೀಡಲಾಗಿತ್ತು. ಆದರೆ ಇದೀಗ ಪೂಜಾ ಮೃತ ದೇಹ ಪತ್ತೆಯಾಗಿದ್ದು, ಪೂಜಾ ಸ್ನೇಹಿತನೇ ಆಕೆಯನ್ನು ಕೊಲೆ ಮಾಡಿದ್ದಾನೆ […]
Shivamogga pooja murdered 0
error: Content is protected !!