Crime News: ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಕೊಲೆ, ಅರಣ್ಯದಲ್ಲಿ ಪತ್ತೆಯಾದ ಪೂಜಾ ಮೃತ ದೇಹ….!

ಕೆಲವು ದಿನಗಳ ಹಿಂದೆಯಷ್ಟೆ ನಾಪತ್ತೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಮೃತ ದೇಹ (crime news) ಅರಣ್ಯದಲ್ಲಿ ಪತ್ತೆಯಾಗಿದೆ. ಜೂನ್ 30 ರಂದು ಕಾಣೆಯಾಗಿದ್ದ ಪೂಜಾ (24) ಮೃತದೇಹ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಆಗುಂಬೆಯ ಕುಶಾಲ್ ಎಂಬುವವರ ಪುತ್ರಿ ಪೂಜಾ ಕಾಣೆಯಾಗಿದ್ದಾಗಿ ದೂರು ನೀಡಲಾಗಿತ್ತು. ಆದರೆ ಇದೀಗ ಪೂಜಾ ಮೃತ ದೇಹ ಪತ್ತೆಯಾಗಿದ್ದು, ಪೂಜಾ ಸ್ನೇಹಿತನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಆಗುಂಬೆಯ ಕುಶಾಲ್ ಎಂಬುವವರ ಪುತ್ರಿ ಪೂಜಾ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿದ್ದು, ಜೂನ್‌ 30ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದಳು, ಬಳಿಕ ನಾಪತ್ತೆಯಾಗಿದ್ದಳು. ಎಲ್ಲೂ ಪತ್ತೆಯಾಗದ ಕಾರಣ ಪೂಜಾ ಪೋಷಕರು ಈ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಯುವತಿಯ ತಂದೆ ಕುಶಾಲ್‌ಗೆ ಪರಿಚಯವಿದ್ದ, ಸ್ನೇಹಿತನಾಗಿದ್ದ ಮಣಿಕಂಠ ಎಂಬುವವನೇ ಪೂಜಾಳನ್ನು ಕೂಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಪೂಜಾ ಕತ್ತು ಹಿಸುಕಿ ಕೊಲೆ (crime news) ಮಾಡಿದ್ದಾಗಿ ಮಣಿಕಂಠ ಒಪ್ಪಿಕೊಂಡಿದ್ದಾನೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪೂಜಾಳನ್ನು ಕೊಲೆ ಮಾಡಿದ್ದಾಗಿ ಮಣಿಕಂಠ ತಪ್ಪೊಪ್ಪಿಕೊಂಡಿದ್ದಾನೆ.

Shivamogga pooja murdered 2

ಇನ್ನೂ ಪೂಜಾ ಶವ ಭಾನುವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಗುಂಬೆ ಪೊಲೀಸರು ಕೊಲೆ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿ ಮಣಿಕಂಠ ನಾಲೂರು ಸಮೀಪದ ನಿವಾಸಯಾಗಿದ್ದು, ಕತ್ತು ಹಿಸುಕಿ ಪೂಜಾಳನ್ನು ಕೊಲೆ ಮಾಡಿ (crime news), ನಾಲೂರು ಸಮೀಪದ ಹೊಂಡಕ್ಕೆ ಶವವನ್ನು ಬಿಸಾಡಿದ್ದ. ಶನಿವಾರ ರಾತ್ರಿ 11 ಗಂಟೆ ಸಮಯದಲ್ಲಿ ಪೊಲೀಸರು ಆರೋಪಿ ಮಣಿಯನ್ನು ಕೊಲೆ ಮಾಡಿ ಶವ ಎಸೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಶವವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *

Scroll to Top