ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿಯ (Town Panchayath) ಎರಡನೇ ಅವಧಿಯ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ ಸೆ.25 ರಂದು ನಡೆಯಲಿದ್ದು, ಎರಡನೇ ಅವಧಿಯ ಅಧಿಕಾರವನ್ನು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಸದಸ್ಯರು ಪ್ರವಾಸದಲ್ಲಿದ್ದು, ಸೆ.25 ಚುನಾವಣೆ ಸಮಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸೆ 25 ನೇ ದಿನಾಂಕದಂದು (Town Panchayath) ಪಟ್ಟಣ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳನ್ನು ಆಯ್ಕೆ ಮಾಡಲು ಚುನಾವಣಾಧಿಕಾರಿಗಳಾದ ಸಿಗ್ಬತ್ತುಲ್ಲಾ ರವರು ಈಗಾಗಲೇ ಎಲ್ಲಾ ಪಟ್ಟಣ ಪಂಚಾಯಿತ್ತಿ ಸದಸ್ಯರಿಗೆ ತಿಳುವಳಿಕೆಯ ಪತ್ರದ ನೋಟೀಸ್ ಗಳನ್ನು ಜಾರಿ ಮಾಡಿರುತ್ತಾರೆ. ಪಟ್ಟಣ ಪಂಚಾಯಿತ್ತಿಯಲ್ಲಿ (Town Panchayath) ಒಟ್ಟು ಸದಸ್ಯರು 11 ಜನ ಇದ್ದು ಇವರಲ್ಲಿ ಕಾಂಗ್ರೆಸ್ ನಿಂದ 6, ಜೆಡಿಎಸ್ ನಿಂದ 2 ಹಾಗೂ ಪಕ್ಷೇತರರು 3 ಮಂದಿ ಸದಸ್ಯರಿದ್ದಾರೆ. ಪಕ್ಷೇತರ ಸದಸ್ಯರಲ್ಲೊಬ್ಬರು ಈಗಾಗಲೇ ಕಾಂಗ್ರೇಸ್ ಪಕ್ಷವನ್ನು ಸೇರಿದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೇಸ್ ಗೆ ಬಹುಮತ ಇದೆ ಎನ್ನಲಾಗಿದೆ.
ಇನ್ನೂ (Town Panchayath) ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲು ಘೋಷಣೆಯಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಕಾರಣದ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿತ್ತು. ಅದರಲ್ಲಿ ಪ್ರಬಲವಾಗಿ ಮೂರನೇ ವಾರ್ಡಿನ ವಿಕಾಸ್ ಹಾಗೂ ಎಂಟನೇ ವಾರ್ಡಿನ ಇಸ್ಮಾಯಿಲ್ ಆಜಾದ್ ಬಾಬು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಇಬ್ಬರ ನಡುವೆ ಭಾರಿ ಪೈಪೋಟಿಯಿದ್ದ ಕಾರಣದಿಂದ ಕ್ಷೇತ್ರದ (Town Panchayath) ಶಾಸಕ ಸುಬ್ಬಾರೆಡ್ಡಿಯವರು ಮಧ್ಯಸ್ಥಿಕೆ ವಹಿಸಿ ಅಧಿಕಾರವನ್ನು ಹಂಚಿಕೆ ಮಾಡಿಕೊಳ್ಳುವಂತೆ ಸಲಹೆ ಸೂಚನೆ ನೀಡಿದ್ದರು. ಅದರಂತೆ ಗುಡಿಬಂಡೆ ಪ.ಪಂ ಅಧ್ಯಕ್ಷ ಗಾದಿಗೆ ಮೊದಲ ಅವಧಿ ಅಂದರೇ ಒಂದು ವರ್ಷ 3ನೇ ವಾರ್ಡಿನ ವಿಕಾಸ್ ಬಳಿಕ ಒಂದು ವರ್ಷ 8ನೇ ವಾರ್ಡಿನ ಇಸ್ಮಾಯಿಲ್ ಆಜಾದ್ ಬಾಬು ವಹಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿದ್ದು, ಈ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದಿಂದ ಗೆದ್ದ 5ನೇ ವಾರ್ಡಿನ ಸದಸ್ಯ ಗಂಗರಾಜು ಉಪಾಧ್ಯಕ್ಷ ಸ್ಥಾನಕ್ಕೆ ಅಂತಿಮ ಎಂದು ಹೇಳಲಾಗಿದೆ. (Town Panchayath) ಈ ನಡುವೆ ಕಳೆದೆರಡು ದಿನಗಳ ಹಿಂದೆಯೇ ಕಾಂಗ್ರೇಸ್ ಪಕ್ಷದ ಸದಸ್ಯರು ಹಾಗೂ ಇತರೆ ಕೆಲ ಸದಸ್ಯರು ಪ್ರವಾಸ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ ಒಟ್ಟು ಎಂಟು ಮಂದಿ ಸದಸ್ಯರು ಪ್ರವಾಸದಲ್ಲಿದ್ದು, ಚುನಾವಣೆಯ ಸಮಯಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಏನಾದರೂ ಮಾಡಿ ತಾನು ಅಧ್ಯಕ್ಷನಾಗಬೇಕು ಎಂದು ಉಪಚುನಾವಣೆಯಲ್ಲಿ (Town Panchayath) ಗೆದ್ದಂತಹ 2ನೇ ವಾರ್ಡಿನ ಸದಸ್ಯ ರಾಜೇಶ್ ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್ ನ 2 ಸದಸ್ಯರು, 3 ಮಂದಿ ಪಕ್ಷೇತರರು ಸೇರಿ ಇಬ್ಬರು ಕಾಂಗ್ರೇಸ್ ಸದಸ್ಯರನ್ನು ತನ್ನ ಕಡೆ ಸೆಳೆದುಕೊಂಡು ಅಧ್ಯಕ್ಷ ಗಾದಿ ಹಿಡಿಯುವುದಾಗಿ ನಿರೀಕ್ಷೆಯಲ್ಲಿದ್ದಾರೆ (Town Panchayath) ಎಂದು ಹೇಳಲಾಗಿದೆ. ಪ.ಪಂ ನ ಮೊದಲ ಅವಧಿಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹುಮತವಿದ್ದರೂ ಸಹ ಹಲವು ಕಾರಣಗಳಿಂದ ಅಧಿಕಾರವನ್ನು ಬಿಜೆಪಿ ಪಕ್ಷಕ್ಕೆ ಬಿಟ್ಟುಕೊಡಬೇಕಾಯ್ತು. ಆದರೆ ಈ ಬಾರಿ ಆ ರೀತಿಯಲ್ಲಿ ಆಗದಂತೆ (Town Panchayath) ಕಾಂಗ್ರೇಸ್ ಪಕ್ಷ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.