Tuesday, July 15, 2025
HomeEntertainmentTirupati Laddu: ಸನಾತನ ಧರ್ಮದ ಮೇಲಿನ ಧಾಳಿ ಸಹಿಸೊಲ್ಲ ಎಂದು ಪ್ರಕಾಶ್ ರಾಜ್ ಗೆ ಎಚ್ಚರಿಕೆ...

Tirupati Laddu: ಸನಾತನ ಧರ್ಮದ ಮೇಲಿನ ಧಾಳಿ ಸಹಿಸೊಲ್ಲ ಎಂದು ಪ್ರಕಾಶ್ ರಾಜ್ ಗೆ ಎಚ್ಚರಿಕೆ ಕೊಟ್ಟ ಪವನ್ ಕಲ್ಯಾಣ್….!

ದೇಶದಾದ್ಯಂತ ಕೆಲವು ದಿನಗಳಿಂದ ಕಲಿಯುಗ ದೈವ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಚರ್ಚೆ ಜೋರಾಗಿದೆ. ಲಡ್ಡು ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಬಳಸಲಾಗಿದೆ ಎಂದು ವರದಿ ಬಂದ ಬಳಿಕ ಈ ಕುರಿತು ಚರ್ಚೆ ಜೋರಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ನಡುವೆ ಜಟಾಪಟಿ ಉದ್ಬವಿಸಿದೆ. ಪ್ರಕಾಶ್ ರಾಜ್ ನೀಡಿದ ಹೇಳಿಕೆಗೆ ಡಿಸಿಎಂ ಪವನ್ ಕಲ್ಯಾಣ್ (Tirupati Laddu) ಕೌಂಟರ್‍ ಕೊಟ್ಟಿದ್ದು, ಸನಾತನ ಧರ್ಮದ ಮೇಲಿನ ಧಾಳಿಯನ್ನು ಸಹಿಸೊಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Pawan Kalyan fires on prakash raj

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಕಲಬೆರಕೆಯಾಗಿದೆ ಎಂಬ ವರದಿ ಬಂದಿದ್ದು, ಈ ಹಿನ್ನೆಲಯಲ್ಲಿ ಡಿಸಿಎಂ ಪವನ್ ಕಲ್ಯಾಣ್ 11 ದಿನಗಳ ಕಾಲ ಪ್ರಾಯಶ್ವಿತ ದೀಕ್ಷೆಯನ್ನು ಸಹ ಪಡೆದುಕೊಂಡಿದ್ದಾರೆ. ಸನಾತನ ಧರ್ಮದ ಮೇಲಿನ ಧಾಳಿಯನ್ನು ತಾನು ಸಹಿಸೊಲ್ಲ ಎಂದು ಖಡಕ್ ಆಗಿಯೇ ಮಾತನಾಡಿದ್ದಾರೆ.  ಇನ್ನೂ ಈ ಕುರಿತು ಮಾತನಾಡಿದ ಪವನ್ ಕಲ್ಯಾಣ್ ರವರ ಹೇಳಿಕೆಗಳಿಗೆ ಹಾಗೂ ಅವರ ದೀಕ್ಷೆಯನ್ನು ಕೆಲವರು  ಟೀಕೆ ಮಾಡಿದ್ದರು. ಟೀಕಾಕಾರರಿಗೆ ಕೌಂಟರ್‍ ಕೊಟ್ಟ ಪವನ್ ಕಲ್ಯಾಣ್ ನಾನೇಕೆ ಮಾತನಾಡಬಾರದು. ನಾನು ಬಾಲ್ಯದಿಂದಲೂ ಸನಾತನ ಧರ್ಮದ ಕಟ್ಟಾ ಅನುಯಾಯಿ. ನನ್ನ ಮನೆಯ ಮೇಲೆ ಧಾಳಿ ನಡೆದಾಗ ನಾನು ಮಾತನಾಡಬಾರದೇ, ನನ್ನ ಧರ್ಮದ ಮೇಲೆ ದಾಳಿ ನಡೆದರೇ ಸುಮ್ಮನಿರುವುದಿಲ್ಲ. ಪ್ರಕಾಶ್ ರಾಜ್ ರವರೇ ನಿಮ್ಮ ಮೇಲೆ ಅಪಾರವಾದ ಗೌರವವಿದೆ ಆದರೆ ನಿಮ್ಮ ಪಾಠಗಳನ್ನು ನೀವು ಕಲಿಯಬೇಕು ಎಂದು ಖಾರವಾಗಿ ನುಡಿದಿದ್ದಾರೆ.

Pawan Kalyan fires on prakash raj 2

ಇನ್ನೂ ಇದು ಕೇವಲ ಪ್ರಕಾಶ್ ರಾಜ್ ಗೆ ಮಾತ್ರವಲ್ಲ. ಜಾತ್ಯತೀತತೆ ಹೆಸರಿನಲ್ಲಿ ಯೋಚನೆ ಮಾಡುವ ಎಲ್ಲ ಜನರನ್ನು ನೀವು ಅಳೆಯಬಹುದು. ನಮಗೆ ತುಂಬಾ ನೋವಾಗಿದೆ. ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡಬೇಡಿ. ಸನಾತನ ಧರ್ಮದ ಬಗ್ಗೆ ಮಾತನಾಡೋದಕ್ಕೂ ಮುಂಚೆ ನೂರು ಬಾರಿ ಯೋಚನೆ ಮಾಡಿ ಮಾತನಾಡಿ. ಸನಾತನ ಧರ್ಮ ಹಾಗೂ ಹಿಂದೂ ದೇವರ ಮೇಲಿನ ಧಾಳಿಯ ಕುರಿತು ತಮ್ಮ ನೋವನ್ನು ವ್ಯಕ್ತಪಡಿಸಿದ ಪವನ್ ಕಲ್ಯಾಣ್, ಇತರೆ ಧರ್ಮಗಳ ಬಗ್ಗೆ ಅದೇ ರೀತಿ ಮಾತನಾಡಲು ನೀವು ಧೈರ್ಯ ಮಾಡುತ್ತೀರಾ ಎಂದು ಕಿಡಿಕಾರಿದರು ಇದೇ ಸಮಯದಲ್ಲಿ ಸನಾತನ ಧರ್ಮ ರಕ್ಷಣೆಗೆ ಮಂಡಳಿಯೊಂದು ರಚನೆಯಾಗಬೇಕಿದೆ ಎಂದು ಆಗ್ರಹಿಸಿದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular