Theft – ಚಿನ್ನದ ಅಂಗಡಿಗಳು, ಮೊಬೈಲ್ ಶಾಪ್ ಗಳು ಸೇರಿದಂತೆ ವಿವಿಧ ಅಂಡಿಗಳಲ್ಲಿ ಕಳ್ಳತನ ಮಾಡುವಂತಹ ಘಟನೆಗಳು ಅಂಗಡಿಗಳಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿರುತ್ತದೆ. (Theft) ಅದರಲ್ಲೂ ಕೆಲ ಮಹಿಳೆಯರು ಚಿನ್ನದ ಅಂಗಡಿಗಳನ್ನು ಟಾರ್ಗೆಟ್ ಮಾಡಿಕೊಂಡು ಗ್ರಾಹಕರಂತೆ ಅಂಗಡಿಗಳಿಗೆ ನುಗ್ಗಿ ಚಿನ್ನಾಭರಣ ಎಗರಿಸಿ ಪರಾರಿಯಾಗುವಂತಹ ವಿಡಿಯೋಗಳು ಸಹ ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಚಿನ್ನ ಖರೀದಿ ಮಾಡುವ ನೆಪದಲ್ಲಿ ಅಂಗಡಿಯೊಂದಕ್ಕೆ ನುಗ್ಗಿದ ನಾಲ್ವರು ಕಿಲಾಡಿ ಕಳ್ಳಿಯರು ಅಂಗಡಿ ಮಾಲೀಕನಿಗೆ ಟೋಪಿ ಹಾಕಿ ಬರೊಬ್ಬರಿ 16 ಲಕ್ಷ ಮೌಲ್ಯದ ಚಿನ್ನಾಭರಣ (Theft) ಎಗರಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ನಾಲ್ವರು ಖತರ್ನಾಕ್ ಕಳ್ಳಿಯರು ಚಿನ್ನದ ಅಂಗಡಿಯೊಳಗೆ ನುಗ್ಗಿ ಚಿನ್ನ ಖರೀದಿ ಮಾಡುವ ಡ್ರಾಮಾ ಆಡಿದ್ದಾರೆ. ಅಂಗಡಿ ಮಾಲೀಕನಿಗೆ ಟೋಪಿ ಹಾಕಿ ಲಕ್ಷಾಂತರ ಬೆಲೆಯ ಚಿನ್ನವನ್ನು ಕದ್ದಿದ್ದಾರೆ. ಮಾಲೀಕನಿಗೆ ಟೋಪಿ ಹಾಕಿ ಬರೋಬ್ಬರಿ 16.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ್ದಾರೆ. ಓರ್ವ ಮಹಿಳೆ ಕಿವಿಗೆ ಓಲೆ ಹಾಕಿಸಿಕೊಳ್ಳುವಂತೆ ನಾಟಕವಾಡಿದರೇ, ಮತ್ತೋರ್ವ ಮಹಿಳೆ ಅಂಗಡಿಯವನಿಗೆ ಅಡ್ಡನಿಂತು ಚಿನ್ನ ಕಳ್ಳತನ ಮಾಡುವಂತೆ ಸಿಗ್ನಲ್ ಕೊಟ್ಟಿದ್ದಾಳೆ. ಉಳಿದ ಇಬ್ಬರು ಮಹಿಳೆಯರು ಚಿನ್ನ ಎಗರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು @gharkekalesh ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನಾಲ್ವರು ಮಹಿಳೆಯರಿಂದ 16.5 ಲಕ್ಷಕ್ಕೂ ಅಧಿಕ ಚಿನ್ನಾಭರಣ ಲೂಟಿ ಎಂಬ ಟೈಟಲ್ ನಡಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ನಾಲ್ವರು ಮಹಿಳೆಯರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ದೃಶ್ಯಗಳು ಸೆರೆಯಾಗಿದೆ. ಕಳೆದ ನ.10 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ನೆಟ್ಟಿಗರೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.