Yogi Adityanath – ನಿಮ್ಮ ಗ್ರಾಮವನ್ನು ಸುಟ್ಟು ಹಾಕಿದ ಹೈದರಾಬಾದ್ ನಿಜಾಮರ ಮೇಲೆ ನಿಮ್ಮ ಸಿಟ್ಟು ತೋರಿಸಿ, ರಝಾಕರ್ ಗಳಿಂದಲೇ (Mallikarjun Kharge) ಮಲ್ಲಿಕಾರ್ಜುನ್ ರವರ ಕುಟುಂಬದವರ ಹತ್ಯೆಯಾಗಿದೆ. ಆದರೆ ಮುಸ್ಲಿಂರ ವೋಟು ಗಳಿಗಾಗಿ ಖರ್ಗೆಯವರು ಏನೂ ಮಾತನಾಡುತ್ತಿಲ್ಲ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಚಲಪುರದಲ್ಲಿ ಮಂಗಳವಾರ(ನ.12) ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ನನ್ನ ಮೇಲೆ ಕೋಪಗೊಳ್ಳುತ್ತಿದ್ದಾರೆ. ಖರ್ಗೆ ಜಿ, (Yogi Adityanath) ನಾನು ನಿಮ್ಮ ವಯಸ್ಸಿಗೆ ಗೌರವ ನೀಡುತ್ತೇನೆ. ನನ್ನ ಮೇಲೆ ಕೋಪಗೊಳ್ಳಬೇಡಿ, ಒಂದು ವೇಳೆ ಕೋಪಗೊಳ್ಳುವುದಿದ್ದರೆ ಹೈದರಾಬಾದ್ ನಿಜಾಮರ ಮೇಲೆ ಸಿಟ್ಟಾಗಿ ಎಂದು ವಾಗ್ದಾಳಿ ನಡೆಸಿದರು. ಖರ್ಗೆಯವರ ಗ್ರಾಮವಾದ ವಾರ್ವಟ್ಟಿ ಒಮ್ಮೆ ಹೈದರಾಬಾದ್‌ನ ನಿಜಾಮರ (Hyderabad Nizam) ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ಬ್ರಿಟಿಷರು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ (Muslim League) ಅನ್ನು ಪ್ರೋತ್ಸಾಹಿಸಿಸರು ಅದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಸ್ವಾತಂತ್ರ್ಯದ ನಂತರ ನಿಜಾಮರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಯಿತು ನಂತರ ಹಿಂಸಾಚಾರ ಆರಂಭವಾಯಿತು. (Yogi Adityanath) ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟುಹಾಕಿದರು. ಹಿಂದೂಗಳನ್ನು (Hindu) ಬರ್ಬರವಾಗಿ ಕೊಂದರು ಮತ್ತು ನಿಮ್ಮ ತಾಯಿ, ಸಹೋದರಿ, ನಿಮ್ಮ ಕುಟುಂಬ ಸದಸ್ಯರನ್ನು ಸುಟ್ಟುಹಾಕಿದರು. ಆದರೆ ಮತ ಬ್ಯಾಂಕ್ ಗಾಗಿ ಖರ್ಗೆ ಅವರು, ತಮ್ಮ ಕುಟುಂಬದ ತ್ಯಾಗವನ್ನೇ ಮರೆತ್ತಿದ್ದಾರೆ ಎಂದು ಗುಡುಗಿದರು.

ಕಳೆದ ಭಾನುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ (Mallikarjun Kharge) ಮಲ್ಲಿಕಾರ್ಜುನ್ ಖರ್ಗೆಯವರು ಕೆಲ ರಾಜಕಾರಣಿಗಳು ಕೇಸರಿ ಬಟ್ಟೆಗಳನ್ನು ಧರಿಸಿ ಸಾಧುಗಳ ವೇಷದಲ್ಲಿ ಬದುಕುತ್ತಿದ್ದಾರೆ. ಅಲ್ಲದೇ, ದ್ವೇಷ ಹರಡುತ್ತಿದ್ದಾರೆ ಮತ್ತು ಜನರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ನೈಜ ಯೋಗಿಗಳಾದವರು ವಿಭಜನೆಗೊಂಡರೆ ನಾಶವಾಗುತ್ತೇವೆ (ಬಟೆಂಗೇ ತೋ ಕಟೆಂಗೇ) ಎನ್ನುವ ಹೇಳಿಕೆಗಳನ್ನು ನೀಡುವುದಿಲ್ಲ. ಈ ರೀತಿಯ ಭಾಷೆಗಳನ್ನು ಬಳಸುವವರು ಉಗ್ರರು. (Mallikarjun Kharge) ಬಿಜೆಪಿಯಲ್ಲಿ ಸಾಧುಗಳ ವೇಷ ಧರಿಸುವ ರಾಜಕಾರಣಿಗಳಿದ್ದಾರೆ. ಕಾವಿ ಧರಿಸುವ ಅವರ ತಲೆಯಲ್ಲಿ ಕೂದಲು ಇಲ್ಲ. ಸಮಾಜವನ್ನು ಒಂದುಗೂಡಿಸುವ ಹೇಳಿಕೆ ನೀಡುವ ಬದಲು ಸಮಾಜವನ್ನು ಒಡೆಯುವ ಹೇಳಿಕೆ ನೀಡುತ್ತಿದ್ದಾರೆ ಎಂದು ಎಂದು ಸಿಎಂ ಯೋಗಿ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೌಂಟರ್ ಕೊಟ್ಟಿದ್ದಾರೆ.