ವಿಶ್ವದಲ್ಲಿ ಕೆಲವೊಂದು ಭಾಗಗಳಲ್ಲಿ ಚಿತ್ರ-ವಿಚಿತ್ರ ಪದ್ದತಿಗಳು ನಡೆದುಕೊಂಡು ಬರುತ್ತಿರುತ್ತವೆ. ನಾಗರೀಕತೆ ಬೆಳೆದರೂ ಸಹ ಇನ್ನೂ ಕೆಲವು ಕಡೆ ತಮ್ಮ ವಿಶಿಷ್ಠ ಸಂಪ್ರದಾಯಗಳನ್ನು ಪಾಲನೆ ಮಾಡುತ್ತಿದ್ದಾರೆ. (Strange News) ಕೆಲವೊಂದು ಆಚಾರ-ವಿಚಾರಗಳು ಜನರ ಮೆಚ್ಚುಗೆಗೆ ಪಾತ್ರವಾದರೇ, ಕೆಲವೊಂದು ಆಚಾರ-ವಿಚಾರಗಳು ಜನರ ಆಕ್ರೋಷಕ್ಕೆ ಗುರಿಯಾಗಬಹುದು. ಭಾರತದ ಈ ಪ್ರದೇಶದಲ್ಲಿ ವಿಚಿತ್ರ ಪದ್ದತಿಯೊಂದು ಆಚರಣೆಯಲ್ಲಿದ್ದು, ಇದನ್ನು ಅನಿಷ್ಠ ಪದ್ದತಿಯೆಂದೇ ಕರೆಯಬಹುದಾಗಿದೆ. ಅಷ್ಟಕ್ಕೂ ಆ ಅನಿಷ್ಟ ಪದ್ದತಿ ಏನು, ಎಲ್ಲಿ ಪ್ರಚಲಿತದಲ್ಲಿದೆ ಎಂಬ ವಿಚಾರಕ್ಕೆ ಬಂದರೇ,
ಅಂದಹಾಗೆ ಈ ಪದ್ದತಿಯನ್ನು ಧಾಡಿಚಾ ಎಂದು ಕರೆಯಲಾಗುತ್ತದೆ. ಇದು (Madhya Pradesh) ಮಧ್ಯಪ್ರದೇಶದ ಶಿವಪುರಿಯಲ್ಲಿ (Shivapuri) ನಡೆಯುತ್ತದೆ ಎನ್ನಲಾಗಿದೆ. ಧಾಡಿಚಾ (dhaadicha) ಎಂದರೇ, ಮಾರುಕಟ್ಟೆಯಲ್ಲಿ ಒಂದು ಒಪ್ಪಂದದ ಪ್ರಕಾರ ಬಾಡಿಗೆಗೆ ಮಹಿಳೆಯರನ್ನು ತೆಗೆದುಕೊಂಡು ಹೋಗುವ ಪದ್ದತಿ (Strange News) ಎಂದು ಹೇಳಲಾಗುತ್ತದೆ. ಜನರು ಈ ಮಾರುಕಟ್ಟೆಗೆ ಬಂದು ಒಪ್ಪಂದದ ಪ್ರಕಾರ ಬಾಡಿಗೆಗೆ ಮಹಿಳೆಯರನ್ನು ತೆಗೆದುಕೊಳ್ಳುತ್ತಾರೆ. ಬಾಡಿಗೆಯ ಅವಧಿಯನ್ನೂ ಸಹ ಒಪ್ಪಂದದಲ್ಲಿ ನಿರ್ಧಾರ ಮಾಡಲಾಗುತ್ತದೆ. ಈ ಸಂಬಂಧ ದೂರದ ಊರುಗಳಿಂದ ಪುರುಷರು ಬಂದು, ತಮ್ಮ ಆಯ್ಕೆಯ ಹುಡುಗಿ ಅಥವಾ ಮಹಿಳೆಯನ್ನು ನೋಡುತ್ತಾರಂತೆ. ಬಳಿಕ ಆಕೆಯ ಬೆಲೆಯನ್ನು ನಿರ್ಧರಿಸಿ ಅವಳನ್ನು ಕರೆದುಕೊಂಡು ಹೋಗುತ್ತಾರಂತೆ.
ಇನ್ನೂ ಈ ಭಾಗದಲ್ಲಿನ ಬಡ ಕುಟುಂಬಗಳು ಮಹಿಳೆಯರನ್ನು ಈ ಮಾರುಕಟ್ಟೆಗೆ ತರುತ್ತವೆ. ಪುರುಷರು ತಮ್ಮ ಆಯ್ಕೆಯ ಮಹಿಳೆಯ ಬೆಲೆಯನ್ನು ನಿರ್ಧಾರ ಮಾಡುತ್ತಾರೆ ಬಳಿಕ ಅವಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ. ಇನ್ನೂ ಈ ಮಾರುಕಟ್ಟೆಯಲ್ಲಿ ಪುರುಷರು ವಿವಿಧ ಕಾರಣಗಳಿಗಾಗಿ ಮಹಿಳೆಯರನ್ನು ಖರೀದಿ ಮಾಡುತ್ತಾರಂತೆ. ತಮಗೆ ಮದುವೆಯಾಗಲು ಸಾಧ್ಯವಿಲ್ಲದಂತಹವರು. ಈ ಮಾರುಕಟ್ಟೆಯಲ್ಲಿ ಕೆಲಕಾಲ ಹೆಂಡತಿಯರನ್ನು ಖರೀದಿಸಿ ತಮ್ಮ ಕುಟುಂಬದ ಹಿರಿಯರ ಸೇವೆ ಮಾಡಲು ಕರೆದುಕೊಂಡು ಹೋಗುತ್ತಾರಂತೆ. ಆದರೆ ಈ ಒಪ್ಪಂದವನ್ನು ನಿರಾಕರಿಸುವಂತಹ ಸಂಪೂರ್ಣ ಹಕ್ಕು ಆ ಮಹಿಳೆಯರಿಗೆ ಇರುತ್ತದೆಯಂತೆ.
ಈ ಮಾರುಕಟ್ಟೆಯಲ್ಲಿ ಮಹಿಳೆಯನ್ನು ಖರೀದಿಸಿದ ಬಳಿಕ ಒಪ್ಪಂದವನ್ನು ಸಹ ಮಾಡಲಾಗುತ್ತದೆ ಎನ್ನಲಾಗಿದೆ. ಹದಿನೈದು ಸಾವಿರದಿಂದ ಮಹಿಳೆಯರನ್ನು ಖರೀದಿ ಮಾಡಲಾಗುತ್ತದೆಯಂತೆ. ಕನ್ಯೆ ಹುಡುಗಿಯರಿಗೆ ಹೆಚ್ಚು ಬೆಲೆ, ಒದು ವರ್ಷ ಅಥವಾ ಕೆಲವು ತಿಂಗಳುಗಳ ಕಾಲ ಮಹಿಳೆಯನ್ನು ಅವರೊಂದಿಗೆ ಇಟ್ಟುಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆಯಂತೆ. ಇದಕ್ಕಾಗಿ 10 ರೂಪಾಯಿಗಳಿಂದ ಆರಂಭವಾಗುವ ಸ್ಟಾಂಪ್ ಪೇಪರ್ ಗಳನ್ನು ಸಹ ತಯಾರಿಸಲಾಗುತ್ತದೆ. ಇನ್ನೂ ಭಾರತದ ಅನೇಕ ಭಾಗಗಳಲ್ಲಿ ಈ ರೀತಿಯ ವಿಚಿತ್ರ ಪದ್ದತಿಗಳು ಆಚರಣೆಯಲ್ಲಿದೆ ಎಂದು ಹೇಳಲಾಗಿದೆ.