Crime News: ಶಿಡ್ಲಘಟ್ಟದಲ್ಲಿ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ…!

ಶಾಲೆಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕಾದ ಬಾಲಕಿ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಶಿಡ್ಲಘಟ್ಟ ತಾಲ್ಲೂಕಿನ ಬೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.‌

ಮೃತ ಯುವಕನನ್ನು ಚಿಂತಾಮಣಿ ತಾಲೂಕಿನ ಸೀತರಾಮಪುರ ಗ್ರಾಮದ ನವೀನ್ (22) ಹಾಗೂ ಬಾಲಕಿ (16) ಮೃತ ಪ್ರೇಮಿಗಳು ಎಂದು ತಿಳಿದು ಬಂದಿದೆ. ಗ್ರಾಮದ ನವೀನ್ ಡ್ರೈವರ್ ಕೆಲಸವನ್ನು ಮಾಡುತ್ತಿದ್ದು ತಮ್ಮದೇ ಸಮುದಾಯದ ಮೃತ ಬಾಲಕಿ ಜೊತೆ ಪ್ರೀತಿಯಲ್ಲಿದ್ದನಂತೆ. ಇದೇ ವಿಚಾರ ಪೋಷಕರ ಗಮನಕ್ಕೆ ಬಂದು ಮಾರ್ಚ್ 30 ರಂದು ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪೋಕ್ಸೋ ಕೇಸ್ ಅಡಿ ದೂರು ದಾಖಲಿಸಿಕೊಂಡು ಬಾಲಕಿಯನ್ನು ಸಾಂತ್ವಾನ ಕೇಂದ್ರಕ್ಕೆ ರವಾನಿಸಿದ್ದರು.

ಇನ್ನೂ ಕಳೆದ ದಿನವಷ್ಟೇ ಇಬ್ಬರು ಒಂದು ಕಡೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ.ಅದರಂತೆ ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯ ಬೀರಪ್ಪನಹಳ್ಳಿ ಗ್ರಾಮದ ಅರಣ್ಯ ಪ್ರದೇಶಕ್ಕೆ ಹೋಗಿ ಕಳೆದ ಸೆ.13 ರ ಸಂಜೆ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶಾಲಾ ಸಮವಸ್ತ್ರದಲ್ಲೆ ಹುಡಗಿಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮರಕ್ಕೆ ನೇತಾಡುತ್ತಿರುವುದು ಕಂಡುಬಂದಿದೆ. ಬ್ಯಾಗ್ ಸಹ ಸ್ಥಳದಲ್ಲೆ ಬಿದ್ದಿದೆ. ಅಪ್ರಾಪ್ತ ವಯಸ್ಸಿನವರಾಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top