Soldier – ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ದೇಶದ ಹೆಮ್ಮೆಯ ಪುತ್ರ, ವೀರ ಯೋಧ ಮುರಳೀ ನಾಯಕ್ ಅವರ 11ನೇ ಪುಣ್ಯ ಸ್ಮರಣೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು. ಕನ್ನಡ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿ ಹುತಾತ್ಮ ಯೋಧನಿಗೆ ಗೌರವ ನಮನ ಸಲ್ಲಿಸಿದರು.
Soldier – ಸೈನಿಕರನ್ನು ಸ್ಮರಿಸಬೇಕು : ಚಿನ್ನಕೈವಾರಮಯ್ಯ
ಕಸಾಪ ತಾಲೂಕು ಅಧ್ಯಕ್ಷ ಚಿನ್ನಕೈವಾರಮಯ್ಯ ಅವರು ಮಾತನಾಡಿ, “ವೀರ ಯೋಧ ಮುರಳಿ ನಾಯಕ್ ಅವರು ಭೌತಿಕವಾಗಿ ನಮ್ಮಿಂದ ದೂರವಾಗಿದ್ದರೂ, ಅವರ ವೀರ ಬಲಿದಾನ ಭಾರತದ 140 ಕೋಟಿ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ದೇಶ ಕಾಯುವ ಸೈನಿಕರು ಮತ್ತು ಅನ್ನ ನೀಡುವ ರೈತರ ಶ್ರಮದಿಂದಲೇ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಇಂತಹ ವೀರರು ಮತ್ತು ದೇಶದ ಬೆನ್ನೆಲುಬು ಆದ ರೈತರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.
Soldier – ಯೋಧರ ತ್ಯಾಗ ಎಂದಿಗೂ ಮರೆಯಲಾಗದು: ಪತ್ರಕರ್ತ ಡಿ.ಎನ್.ಕೃಷ್ಣಾರೆಡ್ಡಿ
ಪತ್ರಕರ್ತ ಡಿ.ಎನ್.ಕೃಷ್ಣಾರೆಡ್ಡಿ ಅವರು ಮುರಳೀ ನಾಯಕ್ ಅವರ ವೀರ ಕೃತ್ಯಗಳು ಮತ್ತು ದೇಶಪ್ರೇಮ ಕುರಿತು ಮಾತನಾಡಿದರು. “ಮುರಳೀ ನಾಯಕ್ ಅವರ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಪೋಷಕರು ಬೇಡ ಎಂದರೂ ಸೈನ್ಯ ಸೇರಿ ದೇಶ ಸೇವೆ ಮಾಡಬೇಕೆಂಬ ಅವರ ಛಲ ಅನನ್ಯ. ಅವರ ಅಂತ್ಯಕ್ರಿಯೆಯಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಭಾಗವಹಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಅವರ ವೀರ ವ್ಯಕ್ತಿತ್ವಕ್ಕೆ ಸಾಕ್ಷಿ. ಇಂತಹ ಹುತಾತ್ಮ ಯೋಧರು ಗಳನ್ನು ಸ್ಮರಿಸುವ ಕರವೇ ಸ್ವಾಭಿಮಾನಿ ಬಣದ ಕಾರ್ಯ ಶ್ಲಾಘನೀಯ” ಎಂದು ಅವರು ಅಭಿಪ್ರಾಯಪಟ್ಟರು.
Soldier – ನಾಡು, ನುಡಿ, ಗಡಿ ರಕ್ಷಣೆ ನಮ್ಮೆಲ್ಲರ ಹೊಣೆ: ಬಿಟಿಸಿ ಸೀನಾ
ತಾಲೂಕು ಕನ್ನಡ ರಕ್ಷಣಾ ವೇದಿಕೆ (ಸ್ವಾಭಿಮಾನಿ) ಬಳಗದ ತಾಲೂಕು ಅಧ್ಯಕ್ಷ ಬಿಟಿಸಿ ಸೀನಾ ಅವರು ಮಾತನಾಡಿ, “ನಮ್ಮ ನಾಡು, ನುಡಿ, ಜಲ ಮತ್ತು ಗಡಿ ಸಮಸ್ಯೆಗಳಿಗಾಗಿ ನಾವು ಹೋರಾಟಕ್ಕೆ ನಿಲ್ಲುತ್ತೇವೆ. ಅದೇ ರೀತಿ, ದೇಶಕ್ಕೆ ಶತ್ರುಗಳಿಂದ ತೊಂದರೆಯಾದಾಗ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ನಾವೆಲ್ಲರೂ ಜಾತಿ, ಮತ, ಧರ್ಮ ಭೇದವಿಲ್ಲದೆ ಬೆಂಬಲ ನೀಡಬೇಕು. ಹುತಾತ್ಮ ಮುರಳೀ ನಾಯಕ್ ಸೇರಿದಂತೆ ದೇಶದ ಎಲ್ಲಾ ವೀರ ಸೈನಿಕರು ಗಳನ್ನು ಸ್ಮರಿಸುವ ಉದ್ದೇಶದಿಂದಲೇ ಈ ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದರು.
Read this also : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್ ರಹೇ…!
Soldier – ಅನ್ನದಾನ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಜಭೀವುಲ್ಲಾ, ಮಂಜುನಾಥ, ಬಂಜಾರ ಸಮುದಾಯದ ಅಧ್ಯಕ್ಷ ನಾರಾಯಣ ನಾಯಕ್, ವೆಂಕಟರಾಮಪ್ಪ, ವಕೀಲರಾದ ಬಾಲು ನಾಯಕ್, ನಾಗಭೂಷಣ್, ಶಂಕರ ನಾಯಕ್, ವೆಂಕಟ ಸುಬ್ಬಯ್ಯ, ಸುಧಾಕರ್, ಲೋಕಿ, ತಿಮ್ಮಪ್ಪ, ಬಾಬುರೆಡ್ಡಿ, ಗೋಪಿ ನಾಯಕ್, ಜ್ಯೋತಿ, ಈಶ್ವರಪ್ಪ, ನೂರ್ ಭಾಷಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.