Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು ಹೋಬಳಿಯ ನಿಚ್ಚನಬಂಡಹಳ್ಳಿ ಗ್ರಾಮದ ರೈತರೊಬ್ಬರು ಕಟಾವಿಗೆ ಸಿದ್ಧವಾಗಿದ್ದ ಚೆಂಡು ಹೂವಿನ ಬೆಳೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನೆಲಕಚ್ಚಿದ್ದು, ರೈತ ಕಂಗಾಲಾಗಿದ್ದಾರೆ.
Chikkaballapur – ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ
ಇತ್ತೀಚೆಗೆ ಸುರಿದ ಮಳೆ ಕೆಲವರಿಗೆ ಸಂತಸ ತಂದಿದ್ದರೂ, ಹೂವಿನ ಕೃಷಿ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದು ಬರಸಿಡಿಲಿನಂತೆ ಬಂದೆರಗಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ನಿಚ್ಚನಬಂಡಹಳ್ಳಿಯ ರೈತ ವೆಂಕಟರಾಯಪ್ಪ ಅವರ ಒಂದು ಎಕರೆಯಲ್ಲಿ ಬೆಳೆದಿದ್ದ ಸುಮಾರು 10 ಸಾವಿರ ಚೆಂಡು ಹೂವಿನ ಗಿಡಗಳು ನೆಲಕ್ಕುರುಳಿವೆ. ಮಾರುಕಟ್ಟೆಯಲ್ಲಿ ಬೆಂಡು ಹೂವಿಗೆ ಉತ್ತಮ ಬೆಲೆ (Flower Price) ಇದ್ದ ಕಾರಣ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಕನಸು ಕಂಡಿದ್ದ ರೈತನಿಗೆ ಈ ಅಕಾಲಿಕ ಮಳೆ ತೀವ್ರ ಆಘಾತವನ್ನುಂಟು ಮಾಡಿದೆ.
Chikkaballapur – ಕಟಾವಿಗೆ ಕೆಲವೇ ದಿನಗಳಿದ್ದಾಗ ಸಂಭವಿಸಿದ ದುರಂತ
ಕಟಾವಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದ ಚೆಂಡು ಹೂವು ಉತ್ತಮ ಇಳುವರಿ ನೀಡುವ ಭರವಸೆಯಲ್ಲಿದ್ದ ರೈತನಿಗೆ ಭಾರಿ ನಷ್ಟ ಉಂಟಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಂಡು ಹೂವಿಗೆ 70 ರಿಂದ 100 ರೂಪಾಯಿಗಳವರೆಗೆ ಬೆಲೆ ಇದೆ. ಈ ಲೆಕ್ಕಾಚಾರದ ಪ್ರಕಾರ, ರೈತ ಕನಿಷ್ಠವೆಂದರೂ 2-3 ಲಕ್ಷ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ, ಭಾರಿ ಮಳೆ ಮತ್ತು ಗಾಳಿಯಿಂದಾಗಿ ಎಲ್ಲವೂ ನಾಶವಾಗಿದ್ದು, ರೈತ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. Read this also : ಕರ್ನಾಟಕದಲ್ಲಿ ಮುಂದುವರಿದ ಮಳೆ ಆರ್ಭಟ: ಬೆಂಗಳೂರು ಸೇರಿದಂತೆ 22 ಜಿಲ್ಲೆಗಳಿಗೆ ಮೇ 22ರವರೆಗೆ ಎಲ್ಲೋ ಅಲರ್ಟ್…!
Chikkaballapur – ಸಂಕಷ್ಟದ ಕಥೆ ಹೇಳಿಕೊಂಡ ರೈತ ವೆಂಕಟರಾಯಪ್ಪ
ತಮ್ಮ ನೋವನ್ನು ಹಂಚಿಕೊಂಡ ರೈತ ವೆಂಕಟರಾಯಪ್ಪ ಅವರು, ನಾನು ಗುಡಿಬಂಡೆ ತಾಲೂಕಿನ ಈಗೇನಹಳ್ಳಿ ಸರ್ವೆ ನಂಬರ್ 22/2 ರಲ್ಲಿ ಒಂದು ಎಕರೆ ಜಮೀನಿನಲ್ಲಿ 13 ಸಾವಿರ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಿದ್ದೆ. ಒಂದು ಸಸಿಗೆ ₹3 ರಂತೆ ಒಟ್ಟು ₹40 ಸಾವಿರ ಖರ್ಚು ಮಾಡಿದ್ದೆ. ಇದರ ಜೊತೆಗೆ ಜಮೀನು ಉಳುಮೆ, ಗೊಬ್ಬರ, ಔಷಧಿ ಮತ್ತು ಕೂಲಿ ಸೇರಿ ಸುಮಾರು 1.20 ಲಕ್ಷ ರೂಪಾಯಿ ಖರ್ಚಾಗಿದೆ. ಹೂವುಗಳು ಬಹಳ ಚೆನ್ನಾಗಿ ಬಂದಿದ್ದವು ಮತ್ತು ಇನ್ನೆರಡು ಮೂರು ದಿನಗಳಲ್ಲಿ ಕಟಾವು ಮಾಡಬೇಕೆಂದುಕೊಂಡಿದ್ದೆ. ಆದರೆ ಭಾನುವಾರ ಸುರಿದ ಭಾರಿ ಗಾಳಿ ಮಳೆಯಿಂದ ಸುಮಾರು 10 ಸಾವಿರ ಗಿಡಗಳು ನೆಲಕಚ್ಚಿವೆ. 2-3 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ನನಗೆ ಈಗ ಭಾರಿ ನಷ್ಟವಾಗಿದೆ. ಸರ್ಕಾರ ನನಗೆ ಸೂಕ್ತ ಪರಿಹಾರ (Government Relief) ನೀಡಬೇಕು ಎಂದು ಮನವಿ ಮಾಡಿದ್ದಾರೆ.