Thursday, November 21, 2024

ಇಂಡಿ ಒಕ್ಕೂಟ ಗೆಲ್ಲಬೇಕು, ಮೋದಿ ಸೋಲಬೇಕು ಎಂದು ಪಾಕ್ ಮಾಜಿ ಸಚಿವ ಹೇಳಿಕೆ, ವಿಡಿಯೋ ವೈರಲ್….!

ಶತ್ರು ರಾಷ್ಟ್ರ ಪಾಕಿಸ್ತಾನ ಸದ್ಯ ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪದೇ ಪದೇ ಮೂಗು ತೂರಿಸುತ್ತಿದೆ. ಈ ಹಿಂದೆ ಪಾಕ್ ಸಚಿವರು ಕಾಂಗ್ರೇಸ್ ಹಾಗೂ ಆಪ್ ಪಕ್ಷವನ್ನು ಬೆಂಬಲಿಸುವಂತೆ ಹೇಳಿಕೆ ನೀಡಿದ್ದರು. ಇದೀಗ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಇಂಡಿ ಕೂಟವನ್ನು ಬೆಂಬಲಿಸಿದ್ದಾರೆ. ಜೊತೆಗೆ ಅದರ ಹಿಂದಿನ ಕಾರಣ ಏನು ಎಂಬುದನ್ನೂ ಸಹ ತಿಳಿಸಿದದ್ದಾರೆ. ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೋಲಬೇಕು ಎಂದು ಪಾಕಿಸ್ತಾನ ಏಕೆ ಬಯಸುತ್ತದೆ ಎಂಬುದನ್ನು ವಿಡಿಯೋ ಮೂಲಕ ಹೊರಹಾಕಿದ್ದು, ಈ ವಿಡಿಯೋ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

pak politician support to indi team 1

ಪಾಕಿಸ್ತಾನ ಮಾಜಿ ಸಚಿವ ಫವಾದ್ ಚೌಧರಿ ನರೇಂದ್ರ ಮೋದಿ ಸೋಲಬೇಕು, ಇಂಡಿ ಕೂಟ ಗೆಲ್ಲಬೇಕು ಎಂದು ಅದರ ಹಿಂದಿನ ಉದ್ದೇಶವನ್ನು ಸಹ ವಿಡಿಯೋ ಮೂಲಕ ಹೇಳಿದ್ದಾರೆ. ವಿಡಿಯೋದಲ್ಲಿ ಆತ ಹೇಳಿದಂತೆ ವಿಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ಕೇಜ್ರಿವಾಲ್ ಅಥವಾ ಮಮತಾ ಬ್ಯಾನರ್ಜಿ ಗೆಲ್ಲಬೇಕು. ವಿಪಕ್ಷಗಳ ಇಂಡಿ ಕೂಟ ಗೆಲ್ಲಬೇಕು. ಅವರು ಪಾಕಿಸ್ತಾನದ ಪರ ಇದ್ದಾರೆ. ಭಾರತದಲ್ಲಿನ ಮುಸ್ಲೀಂರು ಸುರಕ್ಷಿತವಾಗಿರಲು ಹಾಗೂ ಭಾರತ-ಪಾಕ್ ಸಂಬಂಧ ಸುಧಾರಿಸಬೇಕೆಂದರೇ ಖಟ್ಟರ್‍ ಆಲೋಚನೆಯ ಬಿಜೆಪಿ ನೇತೃತ್ವದ ಎನ್.ಡಿ.ಎ ಮತ್ತೆ ಅಧಿಕಾರಕ್ಕೆ ಬರಬಾರದು. ಬಿಜೆಪಿ ಪಾಕಿಸ್ತಾನದ ವಿರುದ್ದ ದ್ವೇಷ ಬಿತ್ತರಿಸುತ್ತಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇನ್ನೂ ಪಾಕ್ ನಿಂದ ವಿಪಕ್ಷ ನಾಯಕರಿಗೆ ಬೆಂಬಲ ವ್ಯಕ್ತವಾಗುತ್ತಿರುವ ಕುರಿತು ತನಿಖೆ ಯಾಗಬೇಕೆಂದು ಪ್ರಧಾನಿ ಮೋದಿ ಸಹ ಹೇಳಿದ್ದರು. ಇನ್ನೂ ಕಳೆದೆರಡು ದಿನಗಳ ಹಿಂದೆ ದೆಹಲಿ ಸಿಎಂ ಕೇಜ್ರಿವಾಲ್ ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿದ ಪೊಟೋ ಶೇರ್‍ ಮಾಡಿ, ನಾನು ನನ್ನ ಕುಟುಂಬದೊಂದಿಗೆ ಮತ ಚಲಾಯಿಸಿದ್ದೇನೆ.  ನಾನು ಸರ್ವಾಧಿಕಾರ, ನಿರುದ್ಯೋಗ ಹಾಗೂ ಹಣ ದುಬ್ಬರದ ವಿರುದ್ದ ಮತ ಹಾಕಿದ್ದೇನೆ ನೀವೂ ಮತ ಹಾಕಿ ಎಂದು ಹೇಳಿದ್ದರು. ಈ ಪೋಸ್ಟ್ ಗೆ ಪಾಕ್ ಮಾಜಿ ಸಚಿವ ಫವಾದ್ ಹುಸೇನ್ ಶಾಂತಿ, ಸಾಮರಸ್ಯವು ದ್ವೇಷ ಹಾಗೂ ಉಗ್ರವಾದ ಶಕ್ತಿಗಳನ್ನು ಸೋಲಿಸಲಿ ಎಂದು ಕಾಮೆಂಟ್ ಮಾಡಿದ್ದರು.

ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://x.com/ians_india/status/1795456771227529513

ಇನ್ನೂ ಈ ಹೇಳಿಕೆಗೆ ಕೇಜ್ರಿವಾಲ್ ಖಾರವಾಗಿಯೇ ಉತ್ತರಿಸಿದ್ದರು. ಚೌಧರಿ ಸಾಹಿ, ನಾನು ಹಾಗೂ ನನ್ನ ದೇಶದ ಜನರು ನಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಶಕ್ತಿಯನ್ನು ಹೊಂದಿದ್ದೇವೆ. ನಿಮ್ಮಟ್ವೀಟ್ ನಮಗೆ ಅಗತ್ಯವಿಲ್ಲ. ಈಗ ಪಾಕಿಸ್ತಾನದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನಿಮ್ಮ ದೇಶವನ್ನು ನೋಡಿಕೊಳ್ಳಿ. ಭಾರತದಲ್ಲಿ ನಡೆಯುವ ಚುನಾವಣೆಗಳು ನಮ್ಮ ಆಂತರಿಕ ವಿಷಯ. ಭಯೋತ್ಪಾದನೆಯ ದೊಡ್ಡ ಪ್ರಾಯೋಜಕ ಹಸ್ತಕ್ಷೇಪ ಭಾರತ ಸಹಿಸೊಲ್ಲ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

1 COMMENT

  1. ಭಾರತದೇಶದ ಬಗ್ಗೆ ನಿಮಗ್ಯಕೆ ಕಾಳಜಿ, ನಿಮ್ಮ ದೇಶವನ್ನು ನೀವು ಮೊದಲು ರಕ್ಷಣೆ ಮಾಡಿಕೊಳ್ಳಿ, ಬಾರತದ ಬಗ್ಗೆ ಮೂಗು ತೂರಿಸಬೇಡಿ ಪಾಕ್ ಆಟ ಬಾರತದಲ್ಲಿ ಇನ್ನೂ ನಡೆಯಲ್ಲ ನಿಮ್ಮ ದೇಶದ ಅವನತಿಗೆ ಕಾರಣರಾಗಬೇಡಿ, ಜೈಭಾರತ್, ಜೈ ಹಿಂದ್,

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!