Online Dhoka: ಫೇಸ್ ಬುಕ್ ಗೆಳೆತನ, ಲಂಡನ್ ನಿಂದ ಚಿನ್ನ ಬಂದಿದೆ ಎಂದು ಬೆದರಿಸಿ 12 ಲಕ್ಷ ವಂಚನೆ…!

Online Dhoka – ಆನ್ ಲೈನ್ ವಂಚನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅರಿವು ಮೂಡಿಸುತ್ತಿದ್ದರೂ ಸಹ ಸೈಬರ್‍ ಕಳ್ಳರ ಅಟ್ಟಹಾಸ ಕಡಿಮೆಯಾಗುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ತೂರಿದರೇ, ಸೈಬರ್‍ ಕಳ್ಳರು ರಂಗೋಲಿ ಕೆಳಗೆ (Online Dhoka) ದೂರುತ್ತಿದ್ದಾರೆ. ಇದೀಗ ಫೇಸ್ ಬುಕ್ ಮೂಲಕ ವಂಚನೆಗೆ ಒಳಗಾಗಿದ್ದು, ವ್ಯಕ್ತಿಯೊಬ್ಬರಿಂದ ಬರೊಬ್ಬರಿ 12 ಲಕ್ಷ ಕಳೆದುಕೊಂಡಿದ್ದಾರೆ. ಲಂಡನ್ ನಿಂದ ಚಿನ್ನದ ವಸ್ತುಗಳು ಹಾಗೂ ಪೌಂಡುಗಳು ಬಂದಿದೆ (Online Dhoka) ಎಂದು ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Cyber Scam in Udupi and hubli

ಉಡುಪಿಯ ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ ಮಹಿಳೆಯೊಬ್ಬರು ಇದೀಗ ಈ (Online Dhoka) ವಂಚನೆಗೆ ಬಲಿಯಾಗಿದ್ದಾರೆ. ವಂಚನೆಗೆ ಒಳಗಾದ ಮಹಿಳೆಯ ಫೇಸ್ ಬುಕ್ ಖಾತೆಯಲ್ಲಿ ಮಾರ್ಕ್ ಸೀಮಾ ಎಂಬ ಮಹಿಳೆ ಪರಿಚಯವಾಗಿದ್ದರು. ಈ ಪರಿಚಯ ಸ್ನೇಹವಾಗಿ ಬದಲಾಯ್ತು. ಬಳಿಕ ವಂಚನೆಗೆ ಒಳಗಾದ ಮಹಿಳೆ ತಮ್ಮ ವಿಳಾಸವನ್ನು ಸಹ ನೀಡಿದ್ದಾರೆ. ವಿಳಾಸವನ್ನು ಪಡೆದುಕೊಂಡ ವಂಚಕರು ಲಂಡನ್ ನಿಂದ ಚಿನ್ನದ ವಸ್ತು ಹಾಗೂ ಪೌಂಡ್ ಗಳ ಹಣದ ಪಾರ್ಸೆಲ್ ಬಂದಿದೆ (Online Dhoka) ಎಂದು ಹೇಳಿದ್ದಾರೆ. ಬಳಿಕ ಕಸ್ಟಮ್ ಚಾಜ್ ಹಾಗೂ ಐಟಿ ರೈಡ್ ಮಾಡುವುದಾಗಿ ಆಕೆಯನ್ನು ಬೆದರಿಸಿದ್ದಾರೆ. ಇದನ್ನು ನಂಬಿದ ಆ ಮಹಿಳೆ ಹಂತ ಹಂತವಾಗಿ ಗೂಗಲ್ ಪೇ ಮೂಲಕ 11,94,490 ರೂಪಾಯಿಗಳನ್ನು (Online Dhoka) ವಸೂಲಿ ಮಾಡಿದ್ದಾರೆ. ಈ ಸಂಬಂಧ ಇದೀಗ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Cyber Scam in Udupi and hubli 2

ಇನ್ನೂ ಹುಬ್ಬಳಿಯಲ್ಲೂ (Online Dhoka) ಸಹ ಇದೇ ಮಾದರಿಯಲ್ಲಿ ವಂಚನೆಯೊಂದು ನಡೆದಿದೆ. ಹುಬ್ಬಳಿಯ ವಿದ್ಯಾನಗರ ಶಿರೂರು ಪಾರ್ಕನ ಆರ್‍.ಆರ್‍. ಈಜಿ ಟ್ರೇಡಿಂಗ್ ಕಂಪನಿ ಹಾಗೂ ಅಕ್ಯೂಮನ್ ಕ್ಯಾಪಿಟಲ್ ಟ್ರೇಡಿಂಗ್ ಲಿಮಿಟಿಡ್ ಕಂಪನಿಯ ಹೆಸರಿಲ್ಲಿ ಮೋಸ ಮಾಡಲಾಘಿದೆ. ಈ ಕಂಪನಿಯ ಪಾಲುದಾರರಿಬ್ಬರು ಈ ಕಂಪನಿಯಲ್ಲಿ (Online Dhoka) ಹಣ ಹೂಡಿಕೆ ಮಾಡಿದರೇ ಶೇ.4-5 ರಷ್ಟು ಲಾಭಾಂಶ ನೀಡುವುದಾಗಿ ಹೇಳಿ ಅನೇಕರಿಂದ ಬರೊಬ್ಬರಿ ಮೂರುವರೆ ಕೋಟಿ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಂಪನಿಯ ಸಂತೋಷ ಹಾಗೂ ಆನಂದ ಎಂಬುವವರು (Online Dhoka) ಮೋಸ ಮಾಡಿದ್ದಾರೆ ಎಂದು ಸಹದೇವಪ್ಪ ಎಂಬುವವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Next Post

Independence day 2024: ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಸಡಗರದಿಂದ ಆಚರಿಸಬೇಕು: ಶಾಸಕ ಸುಬ್ಬಾರೆಡ್ಡಿ

Thu Aug 15 , 2024
Independence day 2024- ಪ್ರತಿಯೊಂದು ಧರ್ಮದವರಿಗೂ ತಮ್ಮದೇ ಆದ ಹಬ್ಬಗಳು ಇರುತ್ತವೆ, ಅವುಗಳನ್ನು ಅದ್ದೂರಿಯಾಗಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತೇವೆ. ಆದರೆ (Independence day 2024) ಸ್ವತಂತ್ರ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೇವೆ. ಎಲ್ಲಾ ಹಬ್ಬಗಳಂತೆ ರಾಷ್ಟ್ರೀಯ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮನವಿ ಮಾಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಿನಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ […]
Independence Day in Gudibande
error: Content is protected !!