Recruitment Update – ಇಂದಿನ ಕಾಲದಲ್ಲಿ ಉದ್ಯೋಗ ಸಿಗುವುದು ತುಂಬಾನೆ ಕಷ್ಟ ಎಂದು ಹೇಳಬಹುದಾಗಿದೆ. ಡಿಗ್ರಿಗಳನ್ನು ಪಡೆದವರೂ ಉದ್ಯೋಗ ಸಿಗದೇ ಪರದಾಡುತ್ತಿದ್ದಾರೆ. ಇದೀಗ ನಿರುದ್ಯೋಗಿಗಳಿಗೆ ಹೆಸ್ಕಾಂ ಗುಡ್ ನ್ಯೂಸ್ ಕೊಟ್ಟಿದೆ. (Recruitment Update) ಹೆಸ್ಕಾಂನಲ್ಲಿ ಖಾಲಿಯಿರುವ ಒಟ್ಟು 338 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆ.20 ಕೊನೆಯ ದಿನಾಂಕವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಆಗಸ್ಟ್/ಸೆಪ್ಟೆಂಬರ್ 2024 ರಿಂದ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (HESCOM) ಅರ್ಹ ಅಭ್ಯರ್ಥಿಗಳಿಂದ (Recruitment Update) ಹುಬ್ಬಳ್ಳಿಯಲ್ಲಿ ಖಾಲಿ ಇರುವ ಡಿಪ್ಲೋಮೊ ಅಪ್ರೆಂಟಿಸ್ – 138, ಗ್ರಾಜುಯೇಟ್ ಅಪ್ರೆಂಟಿಸ್ – 200 ಸೇರಿ ಒಟ್ಟು 338 ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, (Recruitment Update) ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಪ್ಲೊಮಾ ಇಲ್ಲವೇ ಎಂಜಿನಿಯರಿಂಗ್ ಮಾಡಿದ್ದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹುದ್ದೆ ಪಡೆಯಬಹುದಾಗಿದೆ. ಆ.20 ಕೊನೆಯ ದಿನಾಂಕವಾಗಿದೆ. ಆಯ್ಕೆಯಾದವರು ಹುಬ್ಬಳಿಯಲ್ಲಿ ಕೆಲಸ ಮಾಡಬೇಕಿದೆ.
ಇನ್ನೂ ವಿದ್ಯಾರ್ಹತೆಯ ವಿಚಾರಕ್ಕೆ ಬಂದರೆ, (Recruitment Update) ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್ ನಲ್ಲಿ ಪದವಿ ಹಾಗೂ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. (Recruitment Update) ಇನ್ನೂ ಈ ಬೆಸ್ಕಾಂ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯಸ್ಸಿನ ಮಿತಿ ಇದೆ. ಜಾತಿ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. (Recruitment Update) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಅರ್ಹರನ್ನು ಆಯ್ಕೆಮಾಡಿಕೊಳ್ಳುವುದಾಗಿ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನೂ (Recruitment Update) ಆಯ್ಕೆಯಾದ ಅಭ್ಯರ್ಥಿಗಳಿಗೆ ಅಂದರೇ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಯವರಿಗೆ ಮಾಸಿಕ 9000 ರೂ. ಹಾಗೂ ಡಿಪ್ಲೊಮಾ ಅಪ್ರೆಂಟಿಸ್ ಗೆ ಆಯ್ಕೆ ಆದವರಿಗೆ ಮಾಸಿಕ 8000 ರೂ. ವೇತನ ನಿಗಧಿಪಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ ಹೆಚ್ಚಿನ ಮಾಹಿತಿಗಾಗಿ (Recruitment Update) ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
HESCOM Recruitment 2024:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಹೆಸ್ಕಾಂ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ