Tuesday, June 24, 2025
HomeStateLocal News: ಬಡವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ: ಶಾಸಕ ಸುಬ್ಬಾರೆಡ್ಡಿ

Local News: ಬಡವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ: ಶಾಸಕ ಸುಬ್ಬಾರೆಡ್ಡಿ

Local News – ಬಡವರು ತಮ್ಮ ಮಕ್ಕಳ  ಮದುವೆಗೆ ಸಾಲ ಮಾಡುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ  ಕಳೆದ 22 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ನನ್ನ ಜೀವ ಇರುವವರೆವಿಗೂ ಕ್ಷೇತ್ರದಲ್ಲಿ ಸಮಾಜ ಸೇವೆ ಮತ್ತು ಉಚಿತ ಸಾಮೂಹಿಕ ವಿವಾಹಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು

Mass Marriages event bagepalli news 2

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಶಾಸಕರ ಗೃಹ ಕಚೇರಿಯ ಆವರಣದಲ್ಲಿ  ಡಿ.6ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು ಹಾಗೂ ಅವರ ಪೋಷಕರಿಗೆ ನೂತನ ವಸ್ತ್ರಗಳನ್ನು ಮತ್ತು ಸೀಮೆಹಸುಗಳನ್ನು ಖರೀದಿಸಲು ಮುಂಗಡ ನಗದು ಹಣ ವಿತರಿಸಿ ಮಾತನಾಡಿದ ಅವರು  ಬಾಗೇಪಲ್ಲಿ  ತಾಲೂಕು ಹಿಂದುಳಿದ ಪ್ರದೇಶವಾಗಿದ್ದು ಸತತ ಬರಗಾಲದ ಹಿನ್ನಲೆಯಲ್ಲಿ ಈ ಭಾಗದ ಬಡವರು ಆರ್ಥಿಕ ಸಂಕಷ್ಠಕ್ಕೆ ಒಳಗಾಗಿ  ಅನಿವಾರ್ಯವಾಗಿ ಸಾಲ ಮಾಡಿ ತಮ್ಮ ಮಕ್ಕಳ ಮದುವೆಗಳನ್ನು ಮಾಡುವಂತಹ ಪರಿಸ್ಥಿತಿ. ಇದು ನನ್ನ ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡಿತ್ತು ಈ ನಿಟ್ಟಿನಲ್ಲಿ ಬಡವರ ಮಕ್ಕಳ ಮದುವೆ ಮಾಡಲು ಹಾಗೂ ಅವರ ಬದುಕಿಗೆ ನೆರವಾಗುವ ಉದ್ದೇಶದಿಂದ ಕಳೆದ 22 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದ ಅವರು 23ನೇ ವರ್ಷದಲ್ಲಿಯೂ ಸಹ ಉಚಿತ ಸಾಮೂಹಿಕ ವಿವಾಹಗಳಲ್ಲಿ ನೂತನ ದಂಪತಿಗಳ ಜೀವನ ನಿರ್ವಹಣೆಗಾಗಿ ಉಚಿತವಾಗಿ ಸೀಮೆ ಹಸುವನ್ನು ಕೊಡುಗೆಯಾಗಿ ನೀಡಲಾಗುವುದು  ಈ ಸೌಲಭ್ಯವನ್ನು ನೂತನ ದಂತಪತಿಗಳು ಸದುಪಯೋಗಪಡಿಸಿಕೊಳ್ಳಿ ಎಂದರು.

ಕಳೆದ 22 ವರ್ಷಗಳಲ್ಲಿ ಉಚಿತ ಸಾಮೂಹಿಕ ವಿವಾಹಗಳಲ್ಲಿ ಸುಮಾರು 8 ಸಾವಿರ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು 4 ಸಾವಿರ ಸೀಮೆ ಹಸುಗಳನ್ನು ದಂಪತಿಗಳಿಗೆ ಉಚಿತ ಕೊಡುಗೆಯಾಗಿ ನೀಡಲಾಗಿದೆ ಎಂದ ಅವರು ಉಚಿತ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹ ಅಥವಾ ಕಾನೂನುಬಾಹಿರ ಮದುವೆಗಳಿಗೆ ಅವಕಾಶವಿಲ್ಲ. ಸರ್ಕಾರದ ನಿಯಮಗಳಂತೆಯೇ ನಡೆಸಲಾಗುತ್ತದೆ. ತಪ್ಪು ಮಾಹಿತಿ ನೀಡಿ ಬಾಲ್ಯವಿವಾಹ ಅಥವಾ ಕಾನೂನುಬಾಹಿರ ವಿವಾಹ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅಂತಹವರನ್ನು ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಪತ್ತೆಹಚ್ಚಿ ಹೊರಗೆ ಕಳುಹಿಸುತ್ತಾರೆ. ಈ ವರ್ಷದ ಉಚಿತ ಸಾಮೂಹಿಕ ವಿವಾಹಗಳಲ್ಲಿ ವಧು-ವರರ ಜೊತೆಯಲ್ಲಿ ಅವರ ಪೋಷಕರನ್ನು ವೇದಿಕೆಯ ಮೇಲೆ ಕುಳಿತುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಬೆಳಿಗ್ಗೆ 9 ಗಂಟೆಯಿಂದಲೇ  ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

Mass Marriages event bagepalli news 1

ಈ ಸಂದರ್ಭದಲ್ಲಿ ಶಾಸಕ ಸುಬ್ಬಾರೆಡ್ಡಿಯವರ ಪತ್ನಿ ಎಸ್. ಶೀಲ, ಪುತ್ರಿ ಡಾ.ಎಸ್.ಅಮೃತ, ಎಸ್.ಎನ್.ಸೂರ್ಯನಾರಾಯಣರೆಡ್ಡಿ, ಭಾಗ್ಯಮ್ಮ, ರಾಮಕೃಷ್ಣಾರೆಡ್ಡಿ, ಸರಸ್ವತಮ್ಮ,  ನರಸಿಂಹಪ್ಪ, ಬಿ.ವಿ.ವೆಂಕಟರಮಣ, ಪೂಜಪ್ಪ ಮತ್ತಿತರರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular