Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ನಂತರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಎನ್.ಮಂಜುನಾಥರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಜಿ.ವಿ.ಗಂಗಪ್ಪ ರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಸಂಘದ ನೂತನ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ಮಾತನಾಡಿ, ನನ್ನ ಮೇಲೆ ನಂಬಿಕೆಯಿಟ್ಟು, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಧನ್ಯವಾದಗಳು. ಈಗಾಗಲೇ ನಮ್ಮ ಹೊಸ ಆಡಳಿತ ಮಂಡಳಿ ಸಂಘವನ್ನು ಯಾವ ರೀತಿ ಅಭಿವೃದ್ದಿ ಮಾಡಬೇಕೆಂದು ಬ್ಲೂ ಪ್ರಿಂಟ್ ಹಾಕಿಕೊಂಡಿದ್ದೇವೆ. ಜೊತೆಗೆ ಹೆಚ್ಚು ಸಾಲಗಳನ್ನು ನೀಡುವುದು, ಮರು ಪಾವತಿ ಮಾಡಿಸುವ ಕೆಲಸ ಮಾಡಿ ಸಂಘವನ್ನು ಮತ್ತಷ್ಟು ಅಭಿವೃದ್ದಿ ಮಾಡುತ್ತೇವೆ ಎಂದರು.
ಈ ಸಮಯದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಶ್ರೀನಿವಾಸ್, ಚಲಪತಿ, ರಾಜಾರೆಡ್ಡಿ, ಜಾಕೀರ್ ಹುಸೇನ್, ಆದಿನಾರಾಯಣಪ್ಪ, ಶಾಂತಮ್ಮ, ಮುಖಂಡರಾದ ನರಸಿಂಹಮೂರ್ತಿ, ಹೆಚ್.ಪಿಲಕ್ಷ್ಮೀನಾರಾಯಣ, ನಾಗರಾಜು ಸೇರಿದಂತೆ ಹಲವರು ಇದ್ದರು.