Mahashivaratri 2025 – ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ…!

Mahashivaratri – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವಿವಿಧ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಬೆಳಿಗಿನಿಂದಲೇ ದೇವರಿಗೆ ಅಭಿಷೇಕ, ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.

"Devotees performing abhisheka and special pooja at Chandramouleshwara Temple, Gudibande, during Mahashivaratri celebrations."

ಶಿವರಾತ್ರಿಯ (Mahashivaratri) ಅಂಗವಾಗಿ ಮುಂಜಾನೆಯಿಂದ ಪಟ್ಟಣದ ಸುರಸದ್ಮಗಿರಿ ಬೆಟ್ಟದ ರಾಮೇಶ್ವರ, ಮಾರುತಿ ವೃತ್ತದ ಚಂದ್ರಮೌಳೇಶ್ವರ, ಸೋಮೇನಹಳ್ಳಿಯ ಚಿತ್ರಾವತಿ ನದಿ ದಡದಲ್ಲಿರುವ ಚಂದ್ರಮೌಳೇಶ್ವರ, ದಿನ್ನಹಳ್ಳಿಯ ಉದ್ಬವಮೂರ್ತಿ ಪಾತಾಳೇಶ್ವರ, ಸೋಮೇಶ್ವರದ ವಿಭೂದಿನಾದ ಬೃಂಗೇಶ್ವರ, ಚೆಂಡೂರಿನ ಕಾಶಿಲಿಂಗವಾದ ಚಂದ್ರಮೌಳೇಶ್ವರ, ಬೀಚಗಾನಹಳ್ಳಿ ಚಂದ್ರಮೌಳೇಶ್ವರ, ಜಂಗಾಲಹಳ್ಳಿ ಚಂದ್ರಮೌಲೇಶ್ವರ ಸೇರಿದಂತೆ ತಾಲೂಕಿನಾದ್ಯಂತ ರುದ್ರ ದೇವ ಮಾಹಾ ಶಿವನಿಗೆ ಮಹಾ ರುಧ್ರಾಭಿಶೇಕ, ಪಂಚಾಮೃತ ಅಭಿಷೇಕ ಇತ್ಯಾದಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ಹಲವು ದೇವಾಲಯಗಳಲ್ಲಿ ಶಿವನ ಆರಾದನೆ, ಭಜನೆ, ಕೀರ್ತನೆಗಳು ಪಟಣೆ ಮಾಡಿದರು. ಕೆಲವು ಭಕ್ತಾದಿಗಳು ಉಪವಾಸದ ಮೂಲಕ ವ್ರತಾಚರಣೆ ನೆರವೇರಿಸಿ ಈಶ್ವರನನ್ನು ಪೂಜಿಸಿದರು.

ಗುಡಿಬಂಡೆ ಪಟ್ಟಣದ ಚಂದ್ರಮೌಳೆಶ್ವರ ದೇವಾಲಯದಲ್ಲಿ ಭಕ್ತಾದಿಗಳು ಶಿವನ ದರ್ಶನಕ್ಕೆ ಸಾಲಿಗಟ್ಟಿ ನಿಂತಿದ್ದರು. ವಿವಿಧ ಹೂ, ಹಣ್ಣುಗಳು, ತುಳಸಿ ಮಾಲೆಗಳಿಂದ ಸಿಂಗರಿಸಿದ್ದ ಈಶ್ವರನಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಆರಾದಿಸಿದರು. ತಾಲೂಕಿನಾದ್ಯಂತ ಶಿವರಾತ್ರಿ ಪ್ರಯುಕ್ತ ತಳಿರು ತೋರಣಗಳಿಂದ, ಹೂ ಹಣ್ಣುಗಳು, ತುಳಸಿ ಧಳಗಳೊಂದಿಗೆ ಸಿಂಗರಿಸಲಾಗಿದ್ದ ಶಿವನ ದೇವಾಲಯಗಳು ಸಾಲು, ಸಾಲು ಭಕ್ತರೊಂದಿಗೆ ಹಲವು ಆರೋದನೆಯೊಂದಿಗೆ, ಶಿವನಾಮ ಸ್ಮರಣೆಯೊಂದಿಗೆ ಮಾರ್ದ್ವನಿಸಿದವು.

Leave a Comment

Your email address will not be published. Required fields are marked *

Scroll to Top