HSRP – ವಾಹನ ಸವಾರರಿಗೆ ಮತ್ತೊಮ್ಮೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ವಾಹನ ಮಾಲೀಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೂ ಸಹ ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸದ ಕಾರಣ ಮತ್ತೊಮ್ಮೆ ಗಡುವು ನೀಡಿದೆ ಎಂದು ಹೇಳಲಾಗಿದೆ.
2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. HSRP ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಈಗಾಗಲೇ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿತ್ತು. ಅವಧಿ ಮುಗಿದರೂ ಇನ್ನೂ ಅನೇಕ ವಾಹನ ಮಾಲೀಕರು ಈ ಕೆಲಸ ಮಾಡಿರಲಿಲ್ಲ. ಒಟ್ಟು 1.90 ಕೋಟಿ ಹಳೆಯ ವಾಹನಗಳಿದ್ದು, ಈ ಪೈಕಿ ಸುಮಾರು 55 ಲಕ್ಷ ವಾಹನಗಳ ಮಾಲೀಕರು ಮಾತ್ರ HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. HSRP ನಂಬರ್ ಪ್ಲೇಟ್ ಅಳವಡಿಸಲು ನ.30 ಕೊನೆಯ ದಿನಾಂಕದ ಗಡುವು ನೀಡಲಾಗಿತ್ತು. ಇದೀಗ ಕರ್ನಾಟಕ ಸರ್ಕಾರ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದೆ. ಈ ವರ್ಷದ ಕೊನೆಯ ದಿನ ಅಂದರೇ ಡಿಸೆಂಬರ್ 31 ರೊಳಗೆ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ನೀಡಿದೆ.
ಕರ್ನಾಟಕದಲ್ಲಿರುವ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳು, ಕೇವಲ 55 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿವೆ. ಹೀಗಾಗಿ 01-04-2019 ರ ಹಿಂದಿನ ಎಲ್ಲಾ ವಾಹನಗಳು ಡಿಸೆಂಬರ್ 31ರೊಳಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ. ಈ ಮೂಲಕ ಐದನೇ ಬಾರಿಗೆ ಗಡವು ವಿಸ್ತರಿಸಿದೆ.
HSRP ನಂಬರ್ ಪ್ಲೇಟ್ ಬುಕ್ ಮಾಡುವ ವಿಧಾನ: ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಪೂರ್ಣಗೊಳಿಸಬಹುದು. ಆನ್‌ಲೈನ್‌ನಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಲು ಹಂತ-ಹಂತದ ವಿಧಾನವನ್ನು ಕೆಳಗೆ ಉಲ್ಲೇಖಿಸಲಾಗಿದೆ:
ಹಂತ 1: https://bookmyhsrp.com/ ಗೆ ಭೇಟಿ ನೀಡಿ.
ಹಂತ 2: ‘ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ವಿತ್ ಕಲರ್ ಸ್ಟಿಕ್ಕರ್’ ಆಯ್ಕೆಮಾಡಿ.
ಹಂತ 3: ನಿಮ್ಮ HSRP ನಂಬರ್ ಪ್ಲೇಟ್‌ಗಾಗಿ ಎಂಜಿನ್ ಸಂಖ್ಯೆ, ಚಾಸಿಸ್ ಸಂಖ್ಯೆ, ನೋಂದಣಿ ಸಂಖ್ಯೆ, ವಾಹನ ನೋಂದಣಿ ಸ್ಥಿತಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
ಹಂತ 4: ‘ಇಲ್ಲಿ ಕ್ಲಿಕ್ ಮಾಡಿ’ ಕ್ಲಿಕ್ ಮಾಡಿ.
ಹಂತ 5: ಮುಂದೆ, ಫಿಟ್‌ಮೆಂಟ್ ಸ್ಥಳವನ್ನು ಆಯ್ಕೆಮಾಡಿ ಮತ್ತು ನಿಮ್ಮ HSRP ನಂಬರ್ ಪ್ಲೇಟ್‌ಗಾಗಿ ಅಪಾಯಿಂಟ್‌ಮೆಂಟ್ ಸ್ಲಾಟ್ ಅನ್ನು ಬುಕ್ ಮಾಡಿ.
ಹಂತ 6: ಮುಂದಿನ ಪುಟದಲ್ಲಿ, ನಿಮ್ಮ HSRP ನಂಬರ್ ಪ್ಲೇಟ್‌ಗೆ ಶುಲ್ಕವನ್ನು ಪಾವತಿಸಿ.
ಹಂತ 7: ನಿಮ್ಮ HSRP ನಂಬರ್ ಪ್ಲೇಟ್ ಪರಿಶೀಲನೆಗಾಗಿ ರಶೀದಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ.